ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jagdeep Dhankhar: ʼʼಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಧನಕರ್‌ ಕಚೇರಿ ಸೀಲ್‌ ಮಾಡಿಲ್ಲʼʼ: ಕೇಂದ್ರದಿಂದ ಸ್ಪಷ್ಟನೆ

ಜು. 21ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ್‌ ಧನಕರ್‌ ಅವರ ಕಚೇರಿಯನ್ನು ಸೀಲ್‌ ಮಾಡಲಾಗಿದೆ ಎನ್ನುವ ವದಂತಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. "ಧನಕರ್‌ ಅವರ ಕಚೇರಿಯನ್ನು ಸೀಲ್ ಮಾಡಲಾಗಿದೆ ಅಥವಾ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿರುವ ಯಾವುದೇ ಮಾಹಿತಿಯು ಸಂಪೂರ್ಣವಾಗಿ ತಪ್ಪು. ಇದು ಆಧಾರರಹಿತ ಹೇಳಿಕೆ" ಎಂದು ಮೂಲಗಳು ತಿಳಿಸಿವೆ.

ʼʼಧನಕರ್‌ ಕಚೇರಿ ಸೀಲ್‌ ಮಾಡಿಲ್ಲʼʼ: ಕೇಂದ್ರದಿಂದ ಸ್ಪಷ್ಟನೆ

Ramesh B Ramesh B Jul 23, 2025 9:54 PM

ದೆಹಲಿ: ಉಪರಾಷ್ಟ್ರಪತಿ (Vice President of India) ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ್‌ ಧನಕರ್‌ (Jagdeep Dhankhar) ಅವರ ಕಚೇರಿಯನ್ನು ಸೀಲ್‌ ಮಾಡಲಾಗಿದೆ ಎನ್ನುವ ವದಂತಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ʼʼಉಪರಾಷ್ಟ್ರಪತಿಗಳ ಕಚೇರಿ ಎಂದಿನಂತೆ ಕಾರ್ಯ ನಿವರ್ಹಿಸುತ್ತಿದೆ. ಕಚೇರಿ ಸೀಲ್‌ ಮಾಡಲಾಗಿದೆ ಎಂದು ಹಬ್ಬಿರುವ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ಆ ಸುದ್ದಿ ಸತ್ಯಕ್ಕೆ ದೂರವಾದುದುʼʼ ಎಂದು ಸ್ಪಷ್ಟಪಡಿಸಿದೆ. ಧನಕರ್‌ ಅವರ ಕಚೇರಿಯನ್ನು ಮುಚ್ಚಲಾಗಿದೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿ ಭಾರಿ ಚರ್ಚೆಗೆ ಕಾರಣವಾಗಿತ್ತು.

"ಧನಕರ್‌ ಅವರ ಕಚೇರಿಯನ್ನು ಸೀಲ್ ಮಾಡಲಾಗಿದೆ ಅಥವಾ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿರುವ ಯಾವುದೇ ಮಾಹಿತಿಯು ಸಂಪೂರ್ಣವಾಗಿ ತಪ್ಪು. ಇದು ಆಧಾರರಹಿತ ಹೇಳಿಕೆ" ಎಂದು ಮೂಲಗಳು ತಿಳಿಸಿವೆ.

ವ್ಯವಹಾರ ಸಲಹಾ ಸಮಿತಿಯ ಸಭೆ ಸೇರಿದಂತೆ ಪ್ರಮುಖ ಸಮಾಲೋಚನೆಗಳು ನಿಗದಿಯಂತೆ ಬುಧವಾರ ನಡೆದಿವೆ. ಉಪರಾಷ್ಟ್ರಪತಿಗಳ ಸಚಿವಾಲಯದಲ್ಲಿ ಎಂದಿನಂತೆ ವ್ಯವಹಾರ ನಡೆಯುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. "ಕಚೇರಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ವ್ಯವಹಾರ ಸಲಹಾ ಸಮಿತಿ ಸೇರಿದಂತೆ ನಿರ್ಣಾಯಕ ಸಭೆಗಳು ಬುಧವಾರ ನಡೆದಿವೆ" ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Jagdeep Dhankhar Resigns: ಯಾರಾಗಲಿದ್ದಾರೆ ಮುಂದಿನ ಉಪರಾಷ್ಟ್ರಪತಿ? ಇಲ್ಲಿದೆ ಸಂಭಾವ್ಯರ ಪಟ್ಟಿ

ಅಚ್ಚರಿಯ ಬೆಳವಣಿಗೆಯಲ್ಲಿ ಸೋಮವಾರ (ಜು. 21) ಉಪರಾಷ್ಟ್ರಪತಿ ಜಗದೀಪ್ ಧನಕರ್‌ ದಿಢೀರ್‌ ಆಗಿ ರಾಜೀನಾಮೆ ನೀಡಿದ್ದರು. ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಅವರು ಈ ನಿರ್ಧಾರಕ್ಕೆ ಬಂದಿದ್ದು, ರಾಜಕೀಯ ವಲಯಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಧನಕರ್‌, ಆರೋಗ್ಯದ ಕಡೆಗೆ ಗಮನ ಹರಿಸಬೇಕಿರುವುದರಿಂದ ತಕ್ಷಣವೇ ಜಾರಿಗೆ ಬರುವಂತೆ ಉಪರಾಷ್ಟ್ರಪತಿ ಸ್ಥಾನ ತೊರೆಯುವುದಾಗಿ ತಿಳಿಸಿದ್ದರು.

74 ವರ್ಷದ ಧನ್‌ಕರ್‌ 2022ರ ಆಗಸ್ಟ್‌ನಲ್ಲಿ 14ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2027ರ ಆಗಸ್ಟ್‌ ತನಕ ಅವರ ಅಧಿಕಾರವಧಿ ಇತ್ತು. ಆದರೆ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಅವರು ರಾಜೀನಾಮೆ ಸಲ್ಲಿಸಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್‌

ʼʼದೇವರ ಹಸ್ತಕ್ಷೇಪದ ಹೊರತು 2027ಕ್ಕಿಂತ ಮೊದಲು ಉಪರಾಷ್ಟ್ರಪತಿ ಹುದ್ದೆ ತೊರೆಯುವುದಿಲ್ಲʼʼ ಎಂದು ಹೇಳಿದ್ದ ಜಗದೀಪ್‌ ಧನಕರ್‌ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿರುವುದು ಅನುಮಾನಕ್ಕೂ ಕಾರಣವಾಗಿದೆ. ʼʼಸೋಮವಾರ ಇಡೀ ದಿನ ಲವಲವಿಕೆಯಿಂದ ಕಲಾಪ ನಡೆಸಿದ ಧನಕರ್‌ ಅವರಲ್ಲಿ ಆಗ ಯಾವುದೇ ಆರೋಗ್ಯ ಸಮಸ್ಯೆ ಕಂಡುಬರಲಿಲ್ಲ. ಸರ್ಕಾರ ಮತ್ತು ತಮ್ಮ ಭಿನ್ನಾಭಿಪ್ರಾಯ ಕಾರಣದಿಂದ ರಾಜೀನಾಮೆ ನೀಡಿದ್ದಾರೆʼʼ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಸದ್ಯ ರಾಜ್ಯಸಭೆಯ ಕಲಾಪವನ್ನು ಹರಿವಂಶ ನಾರಾಯಣ ಸಿಂಗ್‌ ನಡೆಸಿಕೊಡುತ್ತಿದ್ದಾರೆ.

ಯಾರಾಗಲಿದ್ದಾರೆ ಮುಂದಿನ ಉಪರಾಷ್ಟ್ರಪತಿ?

ಮುಂದಿನ 60 ದಿನಗಳೊಳಗೆ ನೂತನ ಉಪರಾಷ್ಟ್ರಪತಿ ಅವರನ್ನು ನೇಮಿಸಬೇಕಿದೆ. ಹೀಗಾಗಿ ಯಾರು ಈ ಹುದ್ದೆಗೆ ಏರಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಮುಂದಿನ ಉಪರಾಷ್ಟ್ರಪತಿ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮತ್ತಿತರ ಹೆಸರು ಕೇಳಿ ಬಂದಿದೆ.