ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪರಸ್ತ್ರೀ ಸಂಬಂಧ ಹೊಂದಿದ್ದ ಪತಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪತ್ನಿ

Crime News: ಜಾರ್ಖಂಡ್‌ನಲ್ಲಿ ಪರಸ್ತ್ರೀ ಸಂಬಂಧ ಹೊಂದಿದ್ದ ಗಂಡನನ್ನು ಹತ್ಯೆ ಮಾಡಿದ ಆರೋಪದಲ್ಲಿ 29 ವರ್ಷದ ಪುಜಾ ಕುಮಾರಿ ಎಂಬ ಮಹಿಳೆಯನ್ನು ಬಂಧಿಸಲಾಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಕುಮಾರ್ ಲುನಾಯತ್ ಸೋಮವಾರ ತಿಳಿಸಿದ್ದಾರೆ.

ಪರಸ್ತ್ರೀ ಸಂಬಂಧ ಹೊಂದಿದ್ದ ಪತಿಯನ್ನು ಕೊಂದ ಪತ್ನಿ

ಸಾಂದರ್ಭಿಕ ಚಿತ್ರ.

Profile Ramesh B Jul 21, 2025 9:02 PM

ರಾಂಚಿ: ಇತ್ತೀಚಿಗಂತೂ ಅಕ್ರಮ ಸಂಬಂಧದ ಹಿನ್ನೆಲೆ ವೈವಾಹಿಕ ಜೀವನದಲ್ಲಿ ಬಿರುಕು ಮೂಡುತ್ತಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇದೆ (Crime News). ಇದೀಗ ಇಂತಹದ್ದೇ ಒಂದು ಘಟನೆ ಜಾರ್ಖಂಡ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಪರಸ್ತ್ರೀ ಸಂಬಂಧ ಹೊಂದಿದ್ದ ಗಂಡನನ್ನು ಹತ್ಯೆ ಮಾಡಿದ ಆರೋಪದಲ್ಲಿ 29 ವರ್ಷದ ಪುಜಾ ಕುಮಾರಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಕುಮಾರ್ ಲುನಾಯತ್ ಸೋಮವಾರ ತಿಳಿಸಿದ್ದಾರೆ.

ಜೂನ್‌ 15 ಹಾಗೂ 16ರ ಮಧ್ಯರಾತ್ರಿ ಸಮಯದಲ್ಲಿ ಪುಜಾ ಕುಮಾರಿ ತನ್ನ ಗಂಡ ರಾಜೇಶ್ ಕುಮಾರ್ ಮಾಥಾವನ್ನು ಕೊಲೆ ಮಾಡಿದ್ದಳು. ಆತ ನಿದ್ರಿಸುತ್ತಿದ್ದ ವೇಳೆ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದಿದ್ದಾಳೆ. ಕೃತ್ಯ ನಡೆಸಿದ ಬಳಿಕ ಮನೆಗೆ ಬೀಗ ಹಾಕಿ, ಮಕ್ಕಳೊಂದಿಗೆ ಪಲಾಯನ ಮಾಡಿದ್ದಾಳೆ. ಜುಲೈ 21ರಂದು ರಾಜೇಶ್‌ನ ಮೃತದೇಹ ಪತ್ತೆಯಾದ ನಂತರ, ಸೆರೈಕೆಯ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸಮೀರ್ ಸಾವೈಯ್ಯ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವೊಂದು ರಚಿಸಲಾಯಿತು. ಸಾಕ್ಷ್ಯಾಧಾರಗಳ ಆಧಾರದಲ್ಲಿ ರಾಜೇಶ್‌ನ ಪತ್ನಿ ಪೂಜಾ ಕುಮಾರಿಯನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಹಂತಕಿ ಪೂಜಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಗಂಡ ರಾಜೇಶ್ ಪರಸ್ತ್ರೀ ಸಂಬಂಧ ಹೊಂದಿದ್ದ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ಪೂಜಾ ಕುಮಾರಿ ಪೊಲೀಸರಿಗೆ ತಿಳಿಸಿದ್ದಾಳೆ. ಹತ್ಯೆಗೆ ಬಳಸಿದ ಸುತ್ತಿಗೆ ಹಾಗೂ ಎರಡು ರಕ್ತದ ಕಲೆಗಳಿದ್ದ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಎಸ್‌ಪಿ ಲುನಾಯತ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Murder Case: ಲಿವ್‌ ಇನ್‌ ದುರಂತ; ಪೊಲೀಸ್‌ ಅಧಿಕಾರಿಯಾಗಿದ್ದ ಪ್ರೇಯಸಿಯನ್ನು ಕೊಂದ ಯೋಧ

ಬುದ್ಧಿ ಹೇಳಿದ ವ್ಯಕ್ತಿಯ ಕತ್ತು ಕೊಯ್ದ ಪಾಗಲ್‌ ಪ್ರೇಮಿ

ಬೆಂಗಳೂರು: ಇನ್‌ಸ್ಟಾರಾಮ್‌ನಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಗೆ ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ ಯುವಕನಿಗೆ ಬುದ್ಧಿ ಹೇಳಲು ಬಂದಿ ವ್ಯಕ್ತಿಯ ಕತ್ತು ಸೀಳಿ ಕೊಲೆಗೆ ಯತ್ನಿಸಿದ ಘಟನೆ ಎಚ್‍ಎಎಲ್‍ನಲ್ಲಿ ನಡೆದಿದೆ. ಮಹಿಳೆಯೊಬ್ಬರಿಗೆ ತಮಿಳುನಾಡು ತಿರಪ್ಪತ್ತೂರು ಮೂಲದ ಯುವಕ ಸೆಲ್ವ ಕಾರ್ತಿಕ್ ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಯುವಕನನ್ನು ಮಾತನಾಡಲು ಎಚ್‍ಎಎಲ್ ಬಳಿ ಬರಲು ಮಹಿಳೆಯ ತಂದೆ ಹಾಗೂ ಸಂಬಂಧಿಯೊಬ್ಬರು ಹೇಳಿದ್ದರು. ಈ ವೇಳೆ ಆರೋಪಿ ಕೊಲೆಗೆ ಯತ್ನಿಸಿದ್ದಾನೆ.

ಮಾತುಕತೆಗೆ ಕರೆಸಿದ್ದ ಮಹಿಳೆ ತಂದೆ ಹಾಗೂ ಸಂಬಂಧಿ, ಸೆಲ್ವ ಕಾರ್ತಿಕ್‍ನನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ, ಚಲಿಸುತ್ತಿದ್ದ ಬೈಕ್‍ನಲ್ಲಿಯೇ ಆರೋಪಿ, ಸತೀಶ್ ಎಂಬವರ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ. ಗಾಯಾಳುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜುಲೈ 17ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಬಂಧಿಸಿರುವ ಎಚ್‍ಎಎಲ್ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.