ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಕುಡಿದ ಮತ್ತಿನಲ್ಲಿ ಜಗಳ; ಬಿಜೆಪಿ ಕಾರ್ಯಕರ್ತನ ಹತ್ಯೆ

ಕುಡಿದ ಮತ್ತಿನಲ್ಲಿ ಬಿಜೆಪಿ ಕಾರ್ಯಕರ್ತನನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಿಜೆಪಿ ವಾಣಿಜ್ಯ ವಿಭಾಗದ ಸದಸ್ಯ ಸತೀಶ್ ಕುಮಾರ್ ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಇದು ಯಾವುದೇ ರೀತಿಯ ರಾಜಕೀಯ ಪ್ರೇರಿತ ಕೊಲೆಯಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಶಿವಗಂಗೈ: ಕುಡಿದ ಮತ್ತಿನಲ್ಲಿ ನಡೆದ ಜಗಳದಲ್ಲಿ ಬಿಜೆಪಿ ಕಾರ್ಯಕರ್ತನನ್ನು (BJP worker) ಗುಂಪೊಂದು ಹೊಡೆದು ಕೊಂದಿರುವ ಘಟನೆ ತಮಿಳುನಾಡಿನಲ್ಲಿ (tamilnadu) ನಡೆದಿದೆ. ಇದು ಯಾವುದೇ ರಾಜಕೀಯ ಕಾರಣದಿಂದ ನಡೆದ ಕೊಲೆಯಲ್ಲ. ಶಿವಗಂಗೈನಲ್ಲಿ (Sivagangai murder case) ಈ ಘಟನೆ ನಡೆದಿದ್ದು, ಬಿಜೆಪಿ ವಾಣಿಜ್ಯ ವಿಭಾಗದ ಸದಸ್ಯ ಸತೀಶ್ ಕುಮಾರ್ (BJP commerce wing member Satheesh Kumar) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವಯಕ್ತಿಕ ವಿಷಯದಲ್ಲಿ ನಡೆದ ಜಗಳದಿಂದ ಬಿಜೆಪಿ ಕಾರ್ಯಕರ್ತನನ್ನು ಕೊಲೆ ಮಾಡಲಾಗಿದೆ. ಈ ಘಟನೆ ನಡೆದಾಗ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು. ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿ ಗುರುವಾರ ನಡೆದ ಘರ್ಷಣೆಯಲ್ಲಿ ಸತೀಶ್ ಕುಮಾರ್ ಸಾವನ್ನಪ್ಪಿದ್ದು, ಕುಡಿದ ಮತ್ತಿನಲ್ಲಿ ಅವರ ಮಧ್ಯೆ ಜಗಳವಾಗಿದೆ ಎನ್ನಲಾಗಿದೆ.

ಶಿವಗಂಗದಲ್ಲಿ ದ್ವಿಚಕ್ರ ವಾಹನ ಕಾರ್ಯಾಗಾರವನ್ನು ನಡೆಸುತ್ತಿದ್ದ ಸತೀಶ್ ಕುಮಾರ್, ಕೆಲಸದ ಸ್ಥಳದ ಬಳಿ ವಿಶ್ರಾಂತಿಗಾಗಿ ತಮ್ಮ ಉದ್ಯೋಗಿ ಮಣಿಭಾರತಿ ಅವರೊಂದಿಗೆ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಘಟನೆಯ ರಾತ್ರಿ ಕುಮಾರ್ ಕೋಣೆಯಲ್ಲಿ ಸ್ನೇಹಿತನೊಂದಿಗೆ ಮದ್ಯ ಸೇವಿಸುತ್ತಿದ್ದರು. ಆಗ ಅವರ ಮತ್ತು ಹತ್ತಿರದಲ್ಲಿ ವಾಸಿಸುತ್ತಿದ್ದ ಪುರುಷರ ಗುಂಪಿನ ನಡುವೆ ಜಗಳವಾಗಿದೆ. ಈ ವೇಳೆ ಕುಮಾರ್ ನೆಲಕ್ಕೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಶಿವಗಂಗ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದುಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಆಜಾದಿ ಸಂಗೀತ ಉತ್ಸವದಲ್ಲಿ ಮ್ಯೂಸಿಯಂ ಸರಣಿಯಲ್ಲಿ ಸಂಗೀತಗಾರರನ್ನು ಪರಿಚಯಿಸುವ ಪ್ರಮುಖ ರಾಕ್ ಬ್ಯಾಂಡ್ ಇಂಡಿಯನ್ ಓಷನ್!

ಎರಡು ತಿಂಗಳ ಹಿಂದೆಯಷ್ಟೇ ತಮಿಳುನಾಡಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ದಿಂಡಿಗಲ್ ಜಿಲ್ಲೆಯ ಸಣರಪಟ್ಟಿ ಬಳಿ ಜುಲೈ 4 ರಂದು ರಾಜಕಪಟ್ಟಿಯ ಬಾಲಕೃಷ್ಣನ್ ಎಂಬಾತನನ್ನು ಕಡಿದು ಕೊಲೆ ಮಾಡಲಾಗಿತ್ತು. ಆತ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಸಾರ್ವಜನಿಕರ ಮುಂದೆಯೇ ಬೈಕ್ ನಲ್ಲಿ ಬಂದ ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸಿದ್ದರು. ಹಣಕಾಸಿನ ವಿವಾದವೇ ಈ ಕೊಲೆಗೆ ಕಾರಣ ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕಳೆದ ವರ್ಷ ಕೂಡ ಇದೇ ರೀತಿಯ ಪ್ರಕರಣವೊಂದು ನಡೆದಿತ್ತು. ಬಿಜೆಪಿ ಕಾರ್ಯಕರ್ತನಾಗಿದ್ದ ಸೆಲ್ವಕುಮಾರ್ ಅವರನ್ನು ಹಾಡಹಗಲೇ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು.

ವಿದ್ಯಾ ಇರ್ವತ್ತೂರು

View all posts by this author