ವಾಶಿಮ್: ದಂಪತಿಯ ಕಲಹಕ್ಕೆ ಪುಟ್ಟ ಕಂದಮ್ಮಗಳಿಬ್ಬರು ಬಲಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ (maharashtra crime) ನಡೆದಿದೆ. ಪತ್ನಿಯೊಂದಿಗೆ ಜಗಳವಾಡಿದ ಬಳಿಕ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕೊಂದ (Twin Daughters murder case) ವ್ಯಕ್ತಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮಕ್ಕಳಿಬ್ಬರನ್ನು ಕೊಂದ ಆರೋಪಿ ಕಾರು ಚಲಾಯಿಸಿಕೊಂಡು ಪೊಲೀಸ್ ಠಾಣೆಗೆ ಕಾರು ಹೋಗಿದ್ದು, ಅಲ್ಲಿ ತಾನು ತನ್ನ ಹೆಣ್ಣು ಮಕ್ಕಳಿಬ್ಬರನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ವಾಶಿಮ್ ಜಿಲ್ಲೆಯ (Washim district) ನಿವಾಸಿ ರಾಹುಲ್ ಚವಾಣ್ ಮಕ್ಕಳಿಬ್ಬರನ್ನು ಕೊಂದ ಆರೋಪಿ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್ ತನ್ನ ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಎರಡು ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಕೊಂದಿದ್ದಾನೆ. ರಾಹುಲ್ ಚವಾಣ್ ಶುಕ್ರವಾರ ಪತ್ನಿ ಮತ್ತು ಹೆಣ್ಣುಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ. ಈ ವೇಳೆ ದಂಪತಿಯ ನಡುವೆ ಯಾವುದೋ ಕಾರಣಕ್ಕೆ ತೀವ್ರ ಜಗಳ ನಡೆದಿದೆ. ವಾಗ್ವಾದದ ಸಮಯದಲ್ಲಿ ರಾಹುಲ್ ಚವಾಣ್ ಪತ್ನಿ ತನ್ನ ಹೆತ್ತವರ ಮನೆಗೆ ತೆರಳಲು ನಿರ್ಧರಿಸಿದಳು. ಆದರೆ ರಾಹುಲ್ ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಪ್ರಯಾಣ ಮುಂದುವರಿಸಿದರು.
ಕೋಪದಲ್ಲಿದ್ದ ರಾಹುಲ್ ಚವಾಣ್ ಬುಲ್ಧಾನಾ ಜಿಲ್ಲೆಯ ಅಂಚಾರ್ವಾಡಿ ಗ್ರಾಮದ ಬಳಿಯ ಅರಣ್ಯ ಪ್ರದೇಶಕ್ಕೆ ಕಾರು ಚಲಾಯಿಸಿಕೊಂಡು ಹೋಗಿ ಅಲ್ಲಿ ತನ್ನ ಅವಳಿ ಹೆಣ್ಣುಮಕ್ಕಳ ಕತ್ತು ಸೀಳಿದ್ದಾನೆ.
ಈ ಭೀಕರ ಕೃತ್ಯದ ಬಳಿಕ ರಾಹುಲ್ ಚವಾಣ್ ನೇರವಾಗಿ ವಾಶಿಮ್ ಪೊಲೀಸ್ ಠಾಣೆಗೆ ಬಂದಿದ್ದು, ಹೆಣ್ಣು ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಮಕ್ಕಳ ಶವಗಳನ್ನು ವಶಕ್ಕೆ ಪಡೆದುಕೊಂಡಿದೆ. ಪ್ರಾಥಮಿಕ ತನಿಖೆ ಪ್ರಕಾರ ಶವಗಳು ಭಾಗಶಃ ಸುಟ್ಟುಹೋಗಿವೆ. ರಾಹುಲ್ ಚವಾಣ್ ಮಕ್ಕಳನ್ನು ಕೊಲೆ ಮಾಡಿದ ಬಳಿಕ ಸಾಕ್ಷ್ಯಗಳನ್ನು ಬೆಂಕಿ ಹಚ್ಚಿ ನಾಶಮಾಡಲು ಪ್ರಯತ್ನಿಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ವಿಧಿವಿಜ್ಞಾನ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳು ಬಾಕಿ ಇರುವವರೆಗೂ ಇದನ್ನು ದೃಢಪಡಿಸಲಾಗುವುದಿಲ್ಲ. ಪೊಲೀಸರು ಸ್ಥಳದಲ್ಲೇ ಪರಿಶೀಲನೆ ನಡೆಸಿ, ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹಿಸಿ, ಹತ್ಯೆಗೆ ಕಾರಣವಾದ ಘಟನೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ರಾಹುಲ್ ಚವಾಣ್ ನನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: TV actor Aryan: ಹುಟ್ಟು ಹಬ್ಬದ ದಿನವೇ ಕೊನೆಯುಸಿರೆಳೆದ ಕಿರುತೆರೆ ನಟ ಆರ್ಯನ್
ಪತ್ನಿಯನ್ನು ಕೊಂದು ಹಾಸಿಗೆ ಕೆಳಗೆ ಹೂತಿಟ್ಟ ಪತಿ
ಪತ್ನಿಯನ್ನು ಕೊಂದು ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹರಿಕಿಶನ್ ಎಂಬಾತ ಪತ್ನಿ ಪುಲಾ ದೇವಿಯನ್ನು ಕೊಂದು ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟಿದ್ದ. ಸುಮಾರು 12 ದಿನಗಳ ಕಾಲ ಅದೇ ಹಾಸಿಗೆಯ ಮೇಲೆ ಮಲಗಿದ್ದನು. ಪುಲಾ ದೇವಿ ಸಹೋದರ ನಾಪತ್ತೆ ದೂರುದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಅನೈತಿಕ ಸಂಬಂಧದ ಆರೋಪದಲ್ಲಿ ಹರಿ ಕಿಶನ್ ತನ್ನ ಪತ್ನಿಯನ್ನು ಕೊಂದು ಹಾಕಿದ್ದಾನೆ. ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹರಿಕಿಶನ್ ಮನೆಗೆ ಮರಳಿದ ಬಳಿಕ ಅಕ್ಟೋಬರ್ 6 ರಿಂದ ಆತನ ಪತ್ನಿ ನಾಪತ್ತೆಯಾಗಿದ್ದಳು. ಈ ಕುರಿತು ಅಕ್ಟೋಬರ್ 13ರಂದು ಆಕೆಯ ಸಹೋದರ ನಾಪತ್ತೆ ದೂರು ದಾಖಲಿಸಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಹರಿಕಿಶನ್ ನನ್ನು ಬಂಧಿಸಲಾಗಿದೆ.