ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shooting at Rapper: ಫ್ಯಾನ್ಸ್‌ ಸೋಗಿನಲ್ಲಿ ಬಂದು ಗುಂಡಿನ ದಾಳಿ- ಖ್ಯಾತ ಗಾಯಕನ ಮೇಲೆ ಜಸ್ಟ್‌ ಮಿಸ್‌!

ಗಾಯಕ, ರ‍್ಯಾಪರ್ ರಾಹುಲ್ ಫಜಿಲ್‌ಪುರಿಯಾ (Haryanvi Singer-Rapper Rahul Fazilpuria) ಮೇಲೆ ಇತ್ತೀಚೆಗೆ ಗುಂಡಿನ ದಾಳಿಯಾಗಿದ್ದು (Gun Attack), ದಾಳಿ ಮಾಡಲು ಬಂದವರು ತಮ್ಮ ಅಭಿಮಾನಿಗಳು ಎಂದು ಭಾವಿಸಿದ್ದಾಗಿ ರಾಹುಲ್ ಫಜಿಲ್‌ಪುರಿಯಾ ತಿಳಿಸಿದ್ದಾರೆ. ಗುರುಗ್ರಾಮದ (Gurugram) ಬಾದ್‌ಶಾಹ್‌ಪುರ್ ಸದರ್ನ್ ಪೆರಿಫೆರಲ್ ರಸ್ತೆಯಲ್ಲಿ (Southern Peripheral Road) ಜುಲೈ 14ರಂದು ರಾತ್ರಿ ರಾಹುಲ್ ಫಜಿಲ್‌ಪುರಿಯಾ ಅವರ ಮೇಲೆ ಗುಂಡಿನ ದಾಳಿಯಾಗಿದೆ.

ಖ್ಯಾತ ಗಾಯಕನ ಮೇಲೆ ಗುಂಡಿನ ದಾಳಿ- ಜಸ್ಟ್‌ ಮಿಸ್‌!

ನವದೆಹಲಿ: ಗಾಯಕ, ರ‍್ಯಾಪರ್ ರಾಹುಲ್ ಫಜಿಲ್‌ಪುರಿಯಾ (Haryanvi Singer-Rapper Rahul Fazilpuria) ಮೇಲೆ ಇತ್ತೀಚೆಗೆ ಗುಂಡಿನ ದಾಳಿಯಾಗಿದ್ದು (Gun Attack), ದಾಳಿ ಮಾಡಲು ಬಂದವರು ತಮ್ಮ ಅಭಿಮಾನಿಗಳು ಎಂದು ಭಾವಿಸಿದ್ದಾಗಿ ರಾಹುಲ್ ಫಜಿಲ್‌ಪುರಿಯಾ ತಿಳಿಸಿದ್ದಾರೆ. ಗುರುಗ್ರಾಮದ (Gurugram) ಬಾದ್‌ಶಾಹ್‌ಪುರ್ ಸದರ್ನ್ ಪೆರಿಫೆರಲ್ ರಸ್ತೆಯಲ್ಲಿ (Southern Peripheral Road) ಜುಲೈ 14ರಂದು ರಾತ್ರಿ ರಾಹುಲ್ ಫಜಿಲ್‌ಪುರಿಯಾ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಎರಡು ಬಾರಿ ಅವರ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿರುವುದಾಗಿ ತಿಳಿಸಿದ್ದಾರೆ.

ಗುರುಗ್ರಾಮದಲ್ಲಿ ತಮ್ಮ ಮೇಲೆ ಗುಂಡು ಹಾರಿಸಲು ಬಂದವರು ತಮ್ಮ ಅಭಿಮಾನಿಗಳು ಎಂದು ಭಾವಿಸಿದ್ದೆ. ಕೂದಲೆಳೆಯ ಅಂತರದಲ್ಲಿ ಭಾರಿ ಅಪಾಯದಿಂದ ಪಾರಾಗಿರುವುದಾಗಿ ಹರಿಯಾಣದ ಗಾಯಕ- ರ‍್ಯಾಪರ್ ರಾಹುಲ್ ತಿಳಿಸಿದ್ದಾರೆ. ಗುಂಡೇಟಿನ ಸದ್ದು ಕೇಳಿ ತ್ವರಿತವಾಗಿ ತಾವು ಕಾರು ಹಿಂದಕ್ಕೆ ಚಲಾಯಿಸಿದ್ದರಿಂದ ಅಪಾಯದಿಂದ ಪಾರಾದೆ ಎಂದಿರುವ ರಾಹುಲ್ ಯಾದವ್ ಫಜಿಲ್‌ಪುರಿಯಾ, ದಾಳಿ ತುಂಬಾ ಹಠಾತ್ ಆಗಿತ್ತು. ದಾಳಿಕೋರರು ಎರಡು ಸುತ್ತಿನ ಗುಂಡು ಹಾರಿಸಿದ್ದರು ಎಂದರು.

ಗುರುಗ್ರಾಮದ ಬಾದ್‌ಶಾಪುರ್ ಸದರ್ನ್ ಪೆರಿಫೆರಲ್ ರಸ್ತೆಯಲ್ಲಿ (SPR) ಜುಲೈ 14 ರ ರಾತ್ರಿ ಫಜಿಲ್‌ಪುರಿಯಾ ಅವರ ಕಾರಿನ ಮೇಲೆ ಎರಡು ಬಾರಿ ಗುಂಡಿನ ದಾಳಿ ನಡೆಸಲಾಗಿದೆ. ಅವರು ಸೆಕ್ಟರ್ 71ರ ಹಳ್ಳಿಯ ಮೂಲಕ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿಕೋರರು ಹಾಕಿರುವ ಗುಂಡುಗಳು ವಿಭಜಕದ ಮಧ್ಯದಲ್ಲಿ ಅಳವಡಿಸಲಾದ ಕಂಬಕ್ಕೆ ತಗುಲಿದೆ. ಅದರ ಮೇಲೆ ಗುಂಡು ತಾಗಿರುವ ಗುರುತುಗಳಿವೆ.

ಈ ಘಟನೆ ನಡೆದ ಎರಡು ದಿನಗಳ ಬಳಿಕ ಫಜಿಲ್‌ಪುರಿಯಾ ಅವರ ಆಪ್ತ ಸ್ನೇಹಿತ ಎಂದು ಹೇಳಲಾದ ಸುನಿಲ್ ಸರ್ಧಾನಿಯಾ ಎಂಬಾತ ದಾಳಿಯನ್ನು ತಾನು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾನೆ. ಸಂಗೀತ ನಿರ್ಮಾಪಕ ದೀಪಕ್ ನಂದಲ್ ಮತ್ತು ಹಿಮಾಂಶು ಭಾವು ಗ್ಯಾಂಗ್‌ನ ಸದಸ್ಯ ಎನ್ನಲಾಗುವ ಇಂದ್ರಜಿತ್ ಯಾದವ್ ಕೂಡ ಈ ದಾಳಿಯಲ್ಲಿ ಭಾಗಿಯಾಗಿರುವುದಾಗಿ ಆತ ತಿಳಿಸಿದ್ದಾನೆ.

ನಂದಲ್‌ನಿಂದ 5 ಕೋಟಿ ರೂ. ಗಳನ್ನು ಪಡೆದಿರುವ ಫಜಿಲ್‌ಪುರಿಯಾ ಬಳಿಕ ಅದನ್ನು ಹಿಂದಿರುಗಿಸಿಲ್ಲ. ಸಾಲವನ್ನು ಮರುಪಾವತಿಸಲು ವಿಫಲವಾದರೆ ಪ್ರತಿ ತಿಂಗಳು 10 ತಿಂಗಳ ಕಾಲ ಫಜಿಲ್‌ಪುರಿಯಾ ಅವರ ಸಹಚರರಲ್ಲಿ ಒಬ್ಬರನ್ನು ಕೊಲ್ಲುವುದಾಗಿ ನಂದಲ್ ಬೆದರಿಕೆ ಹಾಕಿದ್ದನು. ಆದರೆ ಇದು ನಕಲಿ ಪೋಸ್ಟ್ ಎಂದು ಫಜಿಲ್‌ಪುರಿಯಾ ಭಾವಿಸಿದ್ದರು.

ದಾಳಿಯ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಫಜಿಲ್‌ಪುರಿಯಾ, ಸುನಿಲ್ ಸರ್ಧಾನಿಯಾ ಮತ್ತು ದೀಪಕ್ ನಂದಲ್ ನನ್ನ ಸ್ನೇಹಿತರು. ಅವರು ನನ್ನೊಂದಿಗೆ ಕೆಲಸ ಮಾಡಿದ್ದಾರೆ. ಅವರ ಹೆಸರಿನಲ್ಲಿ ಯಾರೋ ನಕಲಿ ಪೋಸ್ಟ್ ಮಾಡಿದ್ದಾರೆ. ಇಂದ್ರಜಿತ್ ಯಾದವ್ ಯಾರೆಂದು ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ರೋಹ್ಟಕ್ ನಿವಾಸಿಯಾಗಿರುವ ಸುನಿಲ್ ಸರ್ಧಾನಿಯಾ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 2024 ರಲ್ಲಿ ಆತ ನಕಲಿ ಪಾಸ್‌ಪೋರ್ಟ್‌ನಲ್ಲಿ ವಿದೇಶಕ್ಕೆ ಹೋಗಿದ್ದ. ಫಜಿಲ್‌ಪುರಿಯಾ ಮೇಲಿನ ದಾಳಿಗೆ ಸಂಬಂಧಿಸಿ ಆತನ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಾರಿಯಾನ್ವಿ ಸಂಗೀತ ನಿರ್ಮಾಪಕ ಮತ್ತು ರ‍್ಯಾಪರ್ ಆಗಿರುವ ದೀಪಕ್ ನಂದಲ್, 'ಹರಿಯಾಣ ರೋಡ್‌ವೇಸ್', '2 ಮನಿ ಗರ್ಲ್ಸ್' ಮತ್ತು 'ಕರ್ ಗಯಿ ಚುಲ್' ನಂತಹ ಅನೇಕ ಹಿಟ್ ಹಾಡುಗಳನ್ನು ಫಜಿಲ್‌ಪುರಿಯಾ ಮತ್ತು ರ‍್ಯಾಪರ್ ಬಾದ್‌ಶಾ ಅವರೊಂದಿಗೆ ರಚಿಸಿದ್ದರು. ಫಜಿಲ್‌ಪುರಿಯಾ ಮೇಲಿನ ದಾಳಿಗೆ ಸಂಬಂಧಿಸಿ ವಿಶಾಲ್ ಎಂಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.

ಪದೇ ಪದೆ ಬೆದರಿಕೆ

ಸಿಧು ಮೂಸೆವಾಲಾ ಅವರ ಹತ್ಯೆಯ ಬಳಿಕ ತಮಗೆ ಅನೇಕ ಬಾರಿ ಬೆದರಿಕೆಗಳು ಬಂದಿವೆ ಎಂದಿರುವ ಫಜಿಲ್‌ಪುರಿಯಾ, ಸಿಧು ಮೂಸೆವಾಲಾ ಅವರ ಕೊಲೆ ತಪ್ಪು ಎಂದು ನಾನು ಹೇಳಿದ್ದರಿಂದ ಈ ಬೆದರಿಕೆಗಳು ಬಂದಿದ್ದವು.

ಇದನ್ನೂ ಓದಿ: Food Poison: ವಿಷಾಹಾರ ಸೇವನೆ, ತಂದೆ- ಮಗಳು ಸಾವು, ಇನ್ನೂ ಮೂವರು ಗಂಭೀರ

ಮೊದಲು ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆದರಿಕೆಗಳು ಬಂದವು. ಹೀಗಾಗಿ ಸ್ವಲ್ಪ ಸಮಯದವರೆಗೆ ಭದ್ರತೆಯನ್ನು ನೀಡಲಾಗಿತ್ತು. ಮೂರು ತಿಂಗಳ ಹಿಂದೆ ಅದನ್ನು ತೆಗೆದು ಹಾಕಲಾಗಿದೆ. ಇತ್ತೀಚಿನ ಗುಂಡಿನ ದಾಳಿಯ ಘಟನೆಯ ಬಳಿಕ ಪೊಲೀಸ್ ದೂರು ನೀಡಲು ಹೋದಾಗಲೂ ಬೆದರಿಕೆ ಬಂದಿದೆ ಎಂದು ಫಜಿಲ್‌ಪುರಿಯಾ ತಿಳಿಸಿದ್ದಾರೆ.

ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ಸೀಸನ್ 2 ವಿಜೇತ ಎಲ್ವಿಶ್ ಯಾದವ್ ನ ಸ್ನೇಹಿತನಾಗಿರುವ ಫಜಿಲ್‌ಪುರಿಯಾ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಳೆದ ವರ್ಷ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಗುರುಗ್ರಾಮ ಕ್ಷೇತ್ರದಿಂದ ಜನನಾಯಕ ಜನತಾ ಪಕ್ಷ (ಜೆಜೆಪಿ)ದಿಂದ ಸ್ಪರ್ಧಿಸಿ ಸೋತಿದ್ದರು.