ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ದೃಶ್ಯಂ ಸಿನಿಮಾ ಸ್ಟೈಲ್​ನಲ್ಲಿ ಪತಿಯನ್ನು ಕೊಂದು ರೂಮ್‌ನಲ್ಲೇ ಹೂತು ಹಾಕಿದ ಪತ್ನಿ..!

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಗಂಡನನ್ನು ಕೊಂದಿದ್ದಾಳೆ. ಅಷ್ಟೇ ಅಲ್ಲದೆ ಸಿನಿಮಾ ಸ್ಟೈಲ್​ನಲ್ಲಿ ಸಾಕ್ಷಿ ನಾಶ ಮಾಡಿರುವ ಘಟನೆ ಮಹಾರಾಷ್ಟ್ರದ ನಾಲಾಸೋಪಾರಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಶಾಕ್​ ಆಗಿದ್ದು, ದೃಶ್ಯಂಸಿನಿಮಾ ರೀತಿಯಲ್ಲಿ ಕೊಲೆಗೈದಿರುವ ವಿಷಯ ತನಿಖೆ ವೇಳೆ ಬಯಲಾಗಿದೆ.

ದೃಶ್ಯಂ ಸ್ಟೈಲ್‌ನಲ್ಲಿ ಡೆಡ್ಲಿ ಮರ್ಡರ್‌! ಮಿಸ್ಟ್ರಿ ಬಯಲಾಗಿದ್ದೇ ರೋಚಕ

ಕೋಮಲ್ ಚೌಹಾಣ್

Profile Sushmitha Jain Jul 22, 2025 6:11 PM

ಮುಂಬೈ: ಅನೈತಿಕ ಸಂಬಂಧ (Illegal Relationship) ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಗಂಡನನ್ನು (Wife and Husband) ಕೊಂದಿದ್ದಾಳೆ. ಅಷ್ಟೇ ಅಲ್ಲದೆ ಸಿನಿಮಾ ಸ್ಟೈಲ್​ನಲ್ಲಿ ಸಾಕ್ಷಿ ನಾಶ ಮಾಡಿರುವ ಘಟನೆ ಮಹಾರಾಷ್ಟ್ರದ (Maharashtra) ನಾಲಾಸೋಪಾರಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್​ (Missing Case) ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಶಾಕ್​ ಆಗಿದ್ದು, ದೃಶ್ಯಂಸಿನಿಮಾ ರೀತಿಯಲ್ಲಿ ಕೊಲೆಗೈದಿರುವ ವಿಷಯ ತನಿಖೆ ವೇಳೆ ಬಯಲಾಗಿದೆ.

ಹೌದು ಮಹಾರಾಷ್ಟ್ರದ (Maharashtra) ನಾಲಾಸೋಪಾರಾದಲ್ಲಿ ಅಕ್ರಮ ಸಂಬಂಧಕ್ಕೆ (Extramarital Affair) ಸಂಬಂಧಿಸಿದ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯಾದ ಕೋಮಲ್ ಚೌಹಾಣ್ (Komal Chavan) ತನ್ನ ಪ್ರಿಯಕರ ಮೋನು ಜತೆ ಸೇರಿ ತನ್ನ ಪತಿ ವಿಜಯ್ ಚೌಹಾಣ್ (35) ಅವರನ್ನು ಕೊಂದು, ಶವವನ್ನು ಮುಂಬೈನಿಂದ 70 ಕಿಮೀ ದೂರದ ಗಡಗ್‌ಪಾಡಾದ ಸಾಯಿ ವೆಲ್ಫೇರ್ ಸೊಸೈಟಿಯ ಮನೆಯೊಂದರ ರೂಮಿನಲ್ಲಿ ಹೂತಿಟ್ಟಿದ್ದಾಳೆ.

ಪ್ರಕರಣ ಹಾದಿ ತಪ್ಪಿಸಲು ಕೋಮಲ್ ಮತ್ತು ಮೋನು, ಸಿನೆಮಾ ಸ್ಟೈಲ್ ನ ಮೊರೆಹೋಗಿದ್ದು, ಅಪರಾಧವನ್ನು ಮರೆಮಾಚಲು ಶವವನ್ನು ಹೂತಿಟ್ಟ ಸ್ಥಳವನ್ನು ಹೊಸದಾಗಿ ಟೈಲ್ಸ್ ಅನ್ನು ಅಳವಡಿಸಿದ್ದಾರೆ. ಅಣ್ಣ ವಿಜಯ್ ಕಳೆದ 15 ದಿನಗಳಿಂದ ಕಾಣೆಯಾಗಿದ್ದು, ಆತನ ಇಬ್ಬರು ಸಹೋದರರು ಹುಡುಕಿಕೊಂಡು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಬೆಳಗ್ಗೆ ಆತನ ಮನೆಗೆ ಬಂದ ಸಹೋದರರು, ಮನೆಯ ಟೈಲ್ಸ್‌ನ ಬಣ್ಣ ವಿಭಿನ್ನವಾಗಿರುವುದನ್ನು ಗಮನಿಸಿದಾಗ ಅನುಮಾನ ಮೂಡಿದೆ. ಟೈಲ್ಸ್ ತೆಗೆದಾಗ ದುರ್ವಾಸನೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೋಮಲ್ ತನ್ನ ಅಕ್ಕಪಕ್ಕದ ಮನೆಯವರಿಗೆ “ಬಾತ್‌ರೂಮ್‌ನ ನಲ್ಲಿ ಹಾಳಾಗಿದೆ” ಎಂದು ತಿಳಿಸಿದ್ದಳು, ಆದರೆ ಯಾರಿಗೂ ಸತ್ಯ ತಿಳಿದಿರಲಿಲ್ಲ. ಕೋಮಲ್‌ಗೆ ವಿಜಯ್ ಜೊತೆ 8 ವರ್ಷದ ಮಗ ಇದ್ದಾನೆ. ಪೊಲೀಸರು ಕೋಮಲ್ ಮತ್ತು ಮೋನುವನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಲೈವ್‌ ರಿಪೋರ್ಟಿಂಗ್‌ ವೇಳೆಯೇ ಬಾಲಕಿ ಡೆಡ್‌ಬಾಡಿ ಪತ್ತೆ! ವರದಿಗಾರ ಫುಲ್‌ ಶಾಕ್‌- ವಿಡಿಯೊ ನೋಡಿ

ಇತ್ತೀಚಿನ ವಿವಾಹೇತರ ಸಂಬಂಧ ಮತ್ತು ಕೊಲೆ ಪ್ರಕರಣಗಳು

ಇಂತಹ ಘಟನೆಗಳು ದೇಶಾದ್ಯಂತ ಆಘಾತಕಾರಿಯಾಗಿವೆ. ಮೇಘಾಲಯದಲ್ಲಿ ಸೋನಮ್ ರಘುವಂಶಿ ತನ್ನ ಪತಿ ರಾಜಾನನ್ನು ಹನಿಮೂನ್‌ನಲ್ಲಿ ಕೊಂದ ಘಟನೆ ಇತ್ತೀಚಿಗೆ ಚರ್ಚೆಯಾಗಿತ್ತು. ಉತ್ತರ ಪ್ರದೇಶದ ಮೀರತ್‌ನಲ್ಲಿ ಮರ್ಚೆಂಟ್ ನೇವಿಯ ಅಧಿಕಾರಿ ಸೌರಭ್ ರಾಜ್‌ಪೂತ್‌ನನ್ನು ಆತನ ಪತ್ನಿ ಮುಸ್ಕಾನ್ ರಾಸ್ಟೋಗಿ, ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಕೊಂದು, ದೇಹವನ್ನು ತುಂಡರಿಸಿ ಡ್ರಮ್‌ನಲ್ಲಿ ಸೀಮೆಂಟ್‌ನಿಂದ ಮುಚ್ಚಿದ್ದಳು. ಈ ಪ್ರಕರಣಗಳು ವಿವಾಹೇತರ ಸಂಬಂಧಗಳಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಎತ್ತಿ ಹಿಡಿದಿತ್ತು.

ಇನ್ನು ಕರ್ನಾಟಕದ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಅಜೆಕಾರಿನಲ್ಲಿ ನಡೆದ ಘಟನೆ ಎಲ್ಲರನ್ನ ತಲ್ಲಣಿ ಎಬ್ಬಿಸಿತ್ತು. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವಕ ದಿಲೀಪ್ ಹೆಗ್ಡೆ ಲವ್​ನಲ್ಲಿ ಬಿದ್ದಿದ್ದ ಪ್ರತಿಮಾ, ಗಂಡ ಬಾಲಕೃಷ್ಣನಿಗೆ ಸ್ಲೋ ಪಾಯಿಸನ್ ನೀಡಿ ಉಸಿರುಗಟ್ಟಿಸಿ ಸಾಯಿಸಿದ್ದರು. ನರಳಿ ನರಳಿ ಸಾಯಲಿ ಎಂದು ಗೊತ್ತಾಗದ ಹಾಗೇ ಊಟದಲ್ಲಿ ವಿಷ ಹಾಕಿ ಕೊನೆಗೆ ಇಬ್ಬರು ಸೇರಿ ಉಸಿರುಗಟ್ಟಿಸಿ ಕೊಂದಿದ್ದರು. ತನ್ನ ಸಹೋದರನ ಬಳಿ ಪ್ರತಿಮಾ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾಳೆ. ಪ್ರಿಯಕರ ದಿಲೀಪ್ ಜೊತೆ ಸೇರಿ ಸ್ಲೋ ಪಾಯಿಸನ್ ನೀಡಿದ್ದು, ಉಸಿರುಗಟ್ಟಿಸಿ ಸಾಯಿಸಿದ್ದನ್ನು ಒಪ್ಪಿಕೊಂಡಿದ್ದಳು.