ಲಖನೌ: ರಾತ್ರಿ ವೇಳೆ ಪ್ರಿಯಕರನೊಂದಿಗೆ ಇರುವುದನ್ನು ಸಹೋದರ ನೋಡಿದ್ದಕ್ಕೆ ಆತನನ್ನು ಸಹೋದರಿಯೇ ಕತ್ತು ಹಿಸುಕಿ ಕೊಂದ (Murder Case) ಘಟನೆ ಉತ್ತರ ಪ್ರದೇಶದ (Uttarpradesh crime) ಎಟಾ ಜಿಲ್ಲೆಯ ಜಲೇಸರ್‌ನಲ್ಲಿ (Jaleshwar) ನಡೆದಿದೆ. ರಾತ್ರಿ ಪ್ರಿಯಕರ ಮನೆಗೆ ಬಂದಿದ್ದು ಬಳಿಕ ಅವರಿಬ್ಬರು ಅಹಿತಕರ ಸ್ಥಿತಿಯಲ್ಲಿ ಇದ್ದುದ್ದನ್ನು ಸಹೋದರ ನೋಡಿದ್ದು, ಇದನ್ನು ಮನೆಯಲ್ಲಿ ಹಿರಿಯರಿಗೆ ಹೇಳುವುದಾಗಿ ಹೇಳಿದ್ದಾನೆ. ಇದರಿಂದ ಸಹೋದರಿ ಮತ್ತು ಆಕೆಯ ಗೆಳೆಯ ಆತನನ್ನು ಕೊಲೆ ಮಾಡಿರುವುದಾಗಿ ಕೊತ್ವಾಲಿ (Kotwali) ಜಲೇಶ್ವರ ಉಸ್ತುವಾರಿ ಸುಧೀರ್ ರಾಘವ್ ಹೇಳಿದ್ದಾರೆ.
ತನ್ನ ಪ್ರಿಯಕರ ರಾತ್ರಿ ಮನೆಗೆ ಬಂದಿದ್ದಾನೆ. ಅವರಿಬ್ಬರೂ ಅಸಹಜ ಸ್ಥಿತಿಯಲ್ಲಿ ಇರುವುದನ್ನು ಆತ ನೋಡಿದ್ದಾನೆ. ಈ ಕುರಿತು ಯಾರಿಗೂ ಹೇಳದಂತೆ ಅವರಿಬ್ಬರೂ ಸಹೋದರನ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವನು ತನ್ನ ಹೆತ್ತವರಿಗೆ ಹೇಳುವುದಾಗಿ ತಿಳಿಸಿದ್ದಾನೆ. ಇದರಿಂದ ಅವರು ಆತನ ಕತ್ತು ಹಿಸುಕಿ ಕೊಂದಿದ್ದಾರೆ.
ಕೊಲೆಯಾದ ಬಾಲಕ 12 ವರ್ಷದವನಾಗಿದ್ದು, ಆತನನ್ನು ಅವನಿಗಿಂತ ಎರಡು ವರ್ಷ ದೊಡ್ಡವಳಾದ ಅವನ ಅಪ್ರಾಪ್ತ ಸಹೋದರಿ ಕತ್ತು ಹಿಸುಕಿ ಕೊಂದಿದ್ದಾಳೆ. ಈ ಅಪರಾಧಕ್ಕೆ ಅವಳ ಪ್ರೇಮಿಯೂ ಸಹಾಯ ಮಾಡಿದ್ದಾನೆ. ಕೊಲೆಯಾದ 12 ಗಂಟೆಗಳಲ್ಲಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ. ಆಕೆಯ ಪ್ರೇಮಿಯನ್ನು ಜೈಲಿಗೆ ಮತ್ತು ಸಹೋದರಿಯನ್ನು ಬಾಲಾಪರಾಧಿ ಮನೆಗೆ ಕಳುಹಿಸಲಾಗಿದೆ. 14 ವರ್ಷದ ಬಾಲಕಿ ಮಾಡಿದ ಕೆಲಸ ನೆರೆಹೊರೆಯವರಲ್ಲಿ ದಿಗ್ಭ್ರಮೆ ಉಂಟು ಮಾಡಿದೆ.
ಏನಾಗಿತ್ತು?
ಜಲೇಶ್ವರ ಕೊತ್ವಾಲಿಯಲ್ಲಿ ಸೋಮವಾರ ಬಾಲಕನನ್ನು ಕತ್ತು ಹಿಸುಕಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಸಹೋದರಿಯನ್ನು ವಿಚಾರಣೆ ನಡೆಸಿದಾಗ ಆಕೆ ಸತ್ಯವನ್ನು ಬಹಿರಂಗಪಡಿಸಿದ್ದಾಳೆ. ತಾನು ವಿನಯ್ ಶರ್ಮಾ ಜೊತೆ ರಾತ್ರಿಯಲ್ಲಿ ಇದ್ದುದ್ದನ್ನು ಸಹೋದರ ಶ್ಯಾಮ್ ಶರ್ಮಾ ನೋಡಿದ್ದಾನೆ. ಈ ಬಗ್ಗೆ ಅವನು ಯಾರಿಗೂ ಹೇಳದಂತೆ ಮೊದಲು ಮನವಿ ಮಾಡಿದರೂ ಆತ ಒಪ್ಪದ ಕಾರಣ ಅವಳು ಆತನ ಕತ್ತು ಹಿಸುಕಿ ಕೊಂದಿದ್ದಾಳೆ. ಬಳಿಕ ಅದು ಸಹಜ ಸಾವು ಎಂದು ತೋರಿಸಲು ಪೆನ್ನಿನಿಂದ ಆತನ ಕುತ್ತಿಗೆಗೆ ನೀಲಿ ಬಣ್ಣ ಬಳಿದಿದ್ದಾಳೆ. ಈ ಘಟನೆಯ ಬಳಿಕ ಆಕೆಯ ಪ್ರೇಮಿ ಪರಾರಿಯಾಗಿದ್ದಾನೆ
ಇದನ್ನೂ ಓದಿ: Terrorist Encounter: ಸೇನೆಯಿಂದ ಭರ್ಜರಿ ಕಾರ್ಯಾಚರಣೆ; ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್
ಈ ಪ್ರಕರಣವನ್ನು ದಾಖಲಿಸಿದ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮೃತನ ಅಪ್ರಾಪ್ತ ಸಹೋದರಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಬಳಿಕ ಆಕೆಯ ಪ್ರಿಯಕರ ವಿನಯ್ ಶರ್ಮಾನನ್ನು ಕೂಡ ಬಂಧಿಸಲಾಗಿದೆ ಎಂದು ಕೊತ್ವಾಲಿ ಜಲೇಶ್ವರ ಉಸ್ತುವಾರಿ ಸುಧೀರ್ ರಾಘವ್ ಹೇಳಿದ್ದಾರೆ.