Murder case convict escapes: ಶಾಕಿಂಗ್ ಘಟನೆ! ಅತ್ಯಾಚಾರ, ಕೊಲೆ ಕೇಸ್ ಅಪರಾಧಿ ಸೆಂಟ್ರಲ್ ಜೈಲಿನಿಂದ ಎಸ್ಕೇಪ್
ಸೌಮ್ಯಾ ಕೊಲೆ ಪ್ರಕರಣದ ಅಪರಾಧಿ ಗೋವಿಂದಚಾಮಿ, ಕಣ್ಣೂರು ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡ ವರದಿಯಾಗಿದೆ. ಇದು ಭದ್ರತಾ ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜುಲೈ 25, ಶುಕ್ರವಾರ ಬೆಳಿಗ್ಗೆ ನಡೆಸಿದ ನಿಯಮಿತ ತಪಾಸಣೆಯ ಸಮಯದಲ್ಲಿ ಗೋವಿಂದ ಚಾಮಿ ಜೈಲಿನಲ್ಲಿ ಇಲ್ಲ ಎಂಬುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಆತನಿಗಾಗಿ ಕೇರಳ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ತೀವ್ರವಾದ ಹುಡುಕಾಟ ಶುರು ಮಾಡಿದ್ದಾರೆ.


ತಿರುವನಂತಪುರಂ: ಸುಮಾರು 13 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳ ಯುವತಿ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿ ಸೆಂಟ್ರಲ್ ಜೈಲಿನಿಂದ ಎಸ್ಕೇಪ್ ಆಗಿರುವ ಘಟನೆ ವರದಿಯಾಗಿದೆ. ಸೌಮ್ಯಾ ಕೊಲೆ ಪ್ರಕರಣದ ಅಪರಾಧಿ ಗೋವಿಂದಚಾಮಿ, ಕಣ್ಣೂರು ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡ ವರದಿಯಾಗಿದೆ. ಇದು ಭದ್ರತಾ ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜುಲೈ 25, ಶುಕ್ರವಾರ ಬೆಳಿಗ್ಗೆ ನಡೆಸಿದ ನಿಯಮಿತ ತಪಾಸಣೆಯ ಸಮಯದಲ್ಲಿ ಗೋವಿಂದ ಚಾಮಿ ಜೈಲಿನಲ್ಲಿ ಇಲ್ಲ ಎಂಬುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಆತನಿಗಾಗಿ ಕೇರಳ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ತೀವ್ರವಾದ ಹುಡುಕಾಟ ಶುರು ಮಾಡಿದ್ದಾರೆ.
ಮೂಲತಃ ತಮಿಳುನಾಡಿನವನಾಗಿರುವ ಗೋವಿಂದಚಾಮಿ ಒಂದೇ ತೋಳನ್ನು ಹೊಂದಿದ್ದ ಎಂದು ತಿಳಿದುಬಂದಿದೆ. ಈತನಿಗೆ ಫೆಬ್ರವರಿ 1, 2011ರ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ. ಬಳಿಕ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಕಡಿಮೆ ಮಾಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
#WATCH | Kerala | K-9 squad arrives at Kannur Central Jail after 2011 Soumya rape and murder accused Govindachamy escapes from the jail pic.twitter.com/TyWWtR70o5
— ANI (@ANI) July 25, 2025
ಏನಿದು ಪ್ರಕರಣ?
ಫೆಬ್ರವರಿ 1, 2011 ರಂದು ಸೌಮ್ಯ ಎಂಬ ಯುವತಿ ಎರ್ನಾಕುಲಂನಿಂದ ಶೋರ್ನೂರ್‌ಗೆ ಹೋಗುವ ರೈಲಿನಲ್ಲಿ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಹತ್ತಿದ್ದಳು. ಏಕಾಏಕಿ ಕಂಪಾರ್ಟ್‌ಮೆಂಟ್‌ಗೆ ನುಗ್ಗಿದ ಗೋವಿಂದಚಾಮಿ, ಸೌಮ್ಯ ಮೇಲೆ ಹಲ್ಲೆ ನಡೆಸಿ, ಬರ್ಬರವಾಗಿ ಅತ್ಯಾಚಾರ ಎಸಗಿ ನಂತರ ರೈಲಿನಿಂದ ಎಸೆದು ಕ್ರೌರ್ಯ ಮೆರೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ ಫೆಬ್ರವರಿ 6, 2011 ರಂದು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಚಾಮಿಯನ್ನು ಅರೆಸ್ಟ್ ಮಾಡಲಾಗಿತ್ತು. ತ್ರಿಶೂರ್ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ನವೆಂಬರ್ 11, 2011 ರಂದು ಗೋವಿಂದಚಾಮಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಆದಾಗ್ಯೂ, ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2016 ರಲ್ಲಿ ಮರಣದಂಡನೆಯನ್ನು ಕಡಿಮೆ ಮಾಡಿತು.
ಈ ಸುದ್ದಿಯನ್ನೂ ಓದಿ: Baba Siddique Murder Case: ಬಾಬಾ ಸಿದ್ದಿಕ್ ಹತ್ಯೆ ಪ್ರಕರಣ; ಆರೋಪಿ ಜೀಶನ್ ಅಖ್ತರ್ ನೇಪಾಳದಲ್ಲಿರುವ ಶಂಕೆ ಎಂದ ಕ್ರೈಂ ಬ್ರಾಂಚ್
ಇನ್ನು ಕೇವಲ ಒಂದೇ ಒಂದು ಕೈ ಇರುವ ವ್ಯಕ್ತಿ ಜೈಲಿನಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂಬ ಪ್ರಶ್ನೆ ಇದೀಗ ಮೂಡಿದೆ. ಆತನ ಪತ್ತೆಗಾಗಿ ಪೊಲೀಸರ ತಂಡ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವನು ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.