ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baba Siddique Murder Case: ಬಾಬಾ ಸಿದ್ದಿಕ್‌ ಹತ್ಯೆ ಪ್ರಕರಣ; ಆರೋಪಿ ಜೀಶನ್ ಅಖ್ತರ್ ನೇಪಾಳದಲ್ಲಿರುವ ಶಂಕೆ ಎಂದ ಕ್ರೈಂ ಬ್ರಾಂಚ್‌

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪರಾರಿಯಾಗಿರುವ ಆರೋಪಿ ಜೀಶನ್ ಅಖ್ತರ್ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಜೊತೆ ಸಂಪರ್ಕವನ್ನು ಸ್ಥಾಪಿಸಿಕೊಂಡಿದ್ದು, ಪ್ರಸ್ತುತ ನೇಪಾಳದಲ್ಲಿ ಅಡಗಿಕೊಂಡಿದ್ದಾನೆ ಎಂದು ಮುಂಬೈ ಅಪರಾಧ ಶಾಖೆ ಹೇಳಿಕೊಂಡಿದೆ

ಬಾಬಾ ಸಿದ್ದಿಕ್‌ ಹತ್ಯೆ ; ಆರೋಪಿ ಜೀಶನ್ ಅಖ್ತರ್ ನೇಪಾಳದಲ್ಲಿರುವ ಶಂಕೆ

Profile Vishakha Bhat Apr 17, 2025 8:50 AM

ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique Murder) ಅವರ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪರಾರಿಯಾಗಿರುವ ಆರೋಪಿ ಜೀಶನ್ ಅಖ್ತರ್ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಜೊತೆ ಸಂಪರ್ಕವನ್ನು ಸ್ಥಾಪಿಸಿಕೊಂಡಿದ್ದು, ಪ್ರಸ್ತುತ ನೇಪಾಳದಲ್ಲಿ ಅಡಗಿಕೊಂಡಿದ್ದಾನೆ ಎಂದು ಮುಂಬೈ ಅಪರಾಧ ಶಾಖೆ ಹೇಳಿಕೊಂಡಿದೆ. ಅಪರಾಧ ವಿಭಾಗದ ಮೂಲಗಳು ಬಹಿರಂಗಪಡಿಸಿರುವ ಪ್ರಕಾರ, ಇಲ್ಲಿಯವರೆಗೆ ಬಂಧನದಿಂದ ತಪ್ಪಿಸಿಕೊಂಡಿರುವ ಜೀಶನ್, ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಸಹಾಯದಿಂದ ಗಡಿಯಾಚೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಜೀಶನ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿಲ್ಲ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಪೋಸ್ಟ್‌ನ್ನು ಮುಂಬೈ ಪೊಲೀಸರು ಹೊಸ ತನಿಖೆಗೆ ಒಳಪಡಿಸಿತು. ತನಿಖಾಧಿಕಾರಿಗಳ ಪ್ರಕಾರ, ಇತ್ತೀಚೆಗೆ ಜಲಂಧರ್‌ನಲ್ಲಿ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಅವರ ನಿವಾಸದ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ಜೀಶನ್ ಭಾಗಿಯಾಗಿದ್ದಾನೆ ಎಂಬ ಆರೋಪವಿದೆ. ದಾಳಿಯ ತನಿಖೆ ನಡೆಸುತ್ತಿರುವ ಪಂಜಾಬ್ ಪೊಲೀಸರು, ಜೀಶನ್ ಐಎಸ್‌ಐ ಕಾರ್ಯಕರ್ತ ಎಂದು ಹೇಳಲಾಗುವ ಗ್ಯಾಂಗ್‌ಸ್ಟರ್ ಶೆಹಜಾದ್ ಭಟ್ಟಿ ಜೊತೆ ಸಂಚು ರೂಪಿಸಿದ್ದಾನೆ ಎಂದು ಶಂಕಿಸಿದ್ದಾರೆ.

ಇದು ಭಟ್ಟಿ ಜೊತೆ ಜೀಶನ್ ಹೆಸರು ತಳುಕು ಹಾಕಿಕೊಂಡಿರುವುದು ಎರಡನೇ ಬಾರಿ. ಈ ವರ್ಷದ ಆರಂಭದಲ್ಲಿ, ಫೆಬ್ರವರಿಯಲ್ಲಿ, ಬಾಬಾ ಸಿದ್ದಿಕ್ ಹತ್ಯೆಯಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಮತ್ತು ಭಟ್ಟಿಯಿಂದ ಸಹಾಯ ಪಡೆದಿದ್ದೇನೆ ಎಂದು ಹೇಳಿಕೊಂಡು ಬಹಿರಂಗಪಡಿಸದ ವಿದೇಶಿ ಸ್ಥಳದಿಂದ ವೀಡಿಯೊ ಬಿಡುಗಡೆ ಮಾಡಿದ್ದ. ಪಂಜಾಬ್ ಪೊಲೀಸರು ಆತ ಅಜೆರ್ಬೈಜಾನ್ ಅಥವಾ ಇನ್ನೊಂದು ಯುರೋಪಿಯನ್ ದೇಶದಲ್ಲಿರಬಹುದು ಎಂದು ನಂಬಲಾಗಿದೆ. ಬಂಧಿತ ಇಬ್ಬರು ಆರೋಪಿಗಳು ವಿಚಾರಣೆಯ ಸಮಯದಲ್ಲಿ ಜೀಶನ್‌ನ ಹೆಸರನ್ನು ತಿಳಿಸಿದ ನಂತರ ಜಲಂಧರ್ ಗ್ರೆನೇಡ್ ದಾಳಿಯಲ್ಲಿ ಅವನ ಪಾತ್ರ ದೃಢಪಟ್ಟಿದೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಜೀಶನ್ ಐಎಸ್‌ಐ ನಿರ್ದೇಶನದಡಿಯಲ್ಲಿ ವಿದೇಶಿ ಸ್ಥಳದಿಂದ ಕಾರ್ಯನಿರ್ವಹಿಸುತ್ತಿದ್ದು, ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಬಳಸಬಹುದೆಂಬ ಶಂಕೆ ಈಗ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Salman Khan: ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ; ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು

ಬಾಬಾ ಸಿದ್ದೀಕ್ ಹತ್ಯೆಯ ಪಿತೂರಿಯಲ್ಲಿ ಪ್ರಮುಖ ಆರೋಪಿ ಶುಭಂ ಲೋಂಕರ್ ಜೊತೆ ಜೀಶನ್ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ನಂಬಲಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಮುಖ್ಯಸ್ಥ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಮತ್ತು ಗ್ಯಾಂಗ್‌ಸ್ಟರ್ ಹ್ಯಾಪಿ ಪಾಸಿಯಾ ಸೇರಿದಂತೆ ಇತರ ಪ್ರಮುಖ ಕಾರ್ಯಕರ್ತರೊಂದಿಗೆ ಆತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.