ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Robbery: ಫುಡ್‌ ಡೆಲಿವರಿ ಏಜೆಂಟ್‌ಗಳ ಸೋಗಿನಲ್ಲಿ ಬಂದ ಖದೀಮರು; ನೋಡ ನೋಡ್ತಿದ್ದಂತೆ ಚಿನ್ನ ಕಳುವು, ವಿಡಿಯೋ ನೋಡಿ

ಆಹಾರ ವಿತರಣಾ ಏಜೆಂಟ್‌ಗಳಂತೆ (food delivery agents) ಬಂದ ಇಬ್ಬರು ವ್ಯಕ್ತಿಗಳು ಆಭರಣದ (Jewellery shop) ಅಂಗಡಿಯನ್ನೇ ದೋಚಿಕೊಂಡು ಹೋಗಿರುವ ಘಟನೆ ಉತ್ತರಪ್ರದೇಶದ (Uttar pradesh) ಗಾಜಿಯಾಬಾದ್ (Ghaziabad) ನಲ್ಲಿ ಗುರುವಾರ ನಡೆದಿದೆ. ಆಹಾರ ವಿತರಣೆ ಸಂಸ್ಥೆಗಳಾದ ಬ್ಲಿಂಕಿಟ್ ಮತ್ತು ಸ್ವಿಗ್ಗಿಯ ಡೆಲಿವರಿ ಏಜೆಂಟ್‌ಗಳಂತೆ ವೇಷ ಧರಿಸಿ ಆಭರಣದ ಅಂಗಡಿಯೊಳಗೆ ನುಗ್ಗಿದ್ದಾರೆ.

ಐದು ನಿಮಿಷದಲ್ಲಿ ಆಭರಣದ ಅಂಗಡಿ  ದೋಚಿದ ಕಳ್ಳರು; ವಿಡಿಯೋ ನೋಡಿ

ಗಾಜಿಯಾಬಾದ್: ಆಹಾರ ವಿತರಣಾ ಏಜೆಂಟ್‌ಗಳಂತೆ (food delivery agents) ಬಂದ ಇಬ್ಬರು ವ್ಯಕ್ತಿಗಳು ಆಭರಣದ (Jewellery shop) ಅಂಗಡಿಯನ್ನೇ ದೋಚಿಕೊಂಡು ಹೋಗಿರುವ ಘಟನೆ ಉತ್ತರಪ್ರದೇಶದ (Uttar pradesh) ಗಾಜಿಯಾಬಾದ್ (Ghaziabad) ನಲ್ಲಿ ಗುರುವಾರ ನಡೆದಿದೆ. ಆಹಾರ ವಿತರಣೆ ಸಂಸ್ಥೆಗಳಾದ ಬ್ಲಿಂಕಿಟ್ ಮತ್ತು ಸ್ವಿಗ್ಗಿಯ ಡೆಲಿವರಿ ಏಜೆಂಟ್‌ಗಳಂತೆ ವೇಷ ಧರಿಸಿ ಆಭರಣದ ಅಂಗಡಿಯೊಳಗೆ ನುಗ್ಗಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದರು. ಅವರು ಜುವೆಲ್ಲರಿ ಅಂಗಡಿಯ ಉದ್ಯೋಗಿಯನ್ನು ದೂರಕ್ಕೆ ತಳ್ಳಿ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಇದರ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಜಿಯಾಬಾದ್‌ನಲ್ಲಿರುವ ಮಾನ್ಸಿ ಜ್ಯುವೆಲ್ಲರ್ಸ್ ನಲ್ಲಿ ಗುರುವಾರ ದರೋಡೆ ನಡೆದಿದೆ. ಆಹಾರ ವಿತರಣಾ ಏಜೆಂಟ್‌ಗಳಂತೆ ವೇಷ ಧರಿಸಿ ಬಂದಿದ್ದ ಇಬ್ಬರು ವ್ಯಕ್ತಿಗಳು ಆಭರಣದ ಅಂಗಡಿಯೊಳಗೆ ಮಧ್ಯಾಹ್ನ 3.30ರ ಸುಮಾರಿಗೆ ನುಗ್ಗಿದ್ದಾರೆ. ಇದರ ಪೂರ್ತಿ ದೃಶ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.



ಬ್ಲಿಂಕಿಟ್ ಮತ್ತು ಸ್ವಿಗ್ಗಿಯ ಡೆಲಿವರಿ ಬಾಯ್‌ಗಳಂತೆ ವೇಷ ಧರಿಸಿ ಬಂದ ಇಬ್ಬರು ಆರೋಪಿಗಳು ಮಾನ್ಸಿ ಜ್ಯುವೆಲ್ಲರ್ಸ್ ಅಂಗಡಿಗೆ ಪ್ರವೇಶಿಸಿದ್ದಾರೆ. ಅನಂತರ ಇಬ್ಬರೂ ಡಿಸ್‌ಪ್ಲೇ ಕೇಸ್‌ಗಳಿಂದ ಆಭರಣಗಳನ್ನು ತೆಗೆದು ತಮ್ಮ ಬ್ಯಾಗ್‌ಪ್ಯಾಕ್‌ಗಳಲ್ಲಿ ತುಂಬಿಸಿದರು.

ದರೋಡೆಕೋರರಲ್ಲಿ ಒಬ್ಬ ಹೆಚ್ಚಿನ ವಸ್ತುಗಳನ್ನು ದೋಚಲು ಕೌಂಟರ್‌ನ ಇನ್ನೊಂದು ಬದಿಯಲ್ಲಿ ಕುರ್ಚಿಯಲ್ಲಿ ನಿಂತಿರುವುದು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರಿಬ್ಬರೂ ಬಳಿಕ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳು ಕೇವಲ ಐದರಿಂದ ಆರು ನಿಮಿಷಗಳ ಕಾಲದಲ್ಲಿ ಆಭರಣ ಅಂಗಡಿಯಿಂದ ಸುಮಾರು 20 ಕಿಲೋಗ್ರಾಂ ಬೆಳ್ಳಿ ಮತ್ತು 125 ಗ್ರಾಂ ಚಿನ್ನವನ್ನು ಕಳವು ಮಾಡಿದ್ದಾರೆ.

ಇದನ್ನೂ ಓದಿ: Railway Projects: ಕರ್ನಾಟಕಕ್ಕೆ 42,517 ಕೋಟಿ ವೆಚ್ಚದ 25 ರೈಲ್ವೆ ಯೋಜನೆಗಳು ಮಂಜೂರು: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌

ಅಂಗಡಿ ಮಾಲೀಕ ಶೌಚಾಲಯಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಅಂಗಡಿಯ ಕೇರ್‌ಟೇಕರ್ ಕಳ್ಳ, ಕಳ್ಳ ಎಂದು ಕೂಗಿದಾಗ ತಾನು ಓಡಿ ಬಂದು ಪೊಲೀಸರಿಗೆ ಕರೆ ಮಾಡಿದೆ. ಅಷ್ಟರಲ್ಲಿ ಅವರು ಓಡಿ ಹೋಗಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, 15- 20 ತನಿಖೆ ಪ್ರಾರಂಭಿಸಿದ್ದಾರೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.