ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ನಿತ್ಯವೂ ಲೈಂಗಿಕ ಕಿರುಕುಳ; ಅಶ್ಲೀಲ ವಿಡಿಯೋಗಾಗಿ ಬೇಡಿಕೆ ಇಟ್ಟ ಗಂಡನನ್ನೇ ಕೊಂದ ಪತ್ನಿ

ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋಗಾಗಿ ಪೀಡಿಸುತ್ತಿದ್ದ ಗಂಡನನ್ನು ಸಿಟ್ಟಿಗೆದ್ದ ಪತ್ನಿಯೇ ಕೊಲೆ ಮಾಡಿದ ಘಟನೆ ಘಟನೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ದೀರ್ಘಕಾಲದ ದಾಂಪತ್ಯ ಕಲಹವು ಕೊನೆಗೆ ಪತಿಯ ಕೊಲೆಯಲ್ಲಿ ಅಂತ್ಯಗೊಂಡಿದೆ.

ಕೊಪ್ಪಳ: ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋಗಾಗಿ ಪೀಡಿಸುತ್ತಿದ್ದ ಗಂಡನನ್ನು ಸಿಟ್ಟಿಗೆದ್ದ ಪತ್ನಿಯೇ ಕೊಲೆ ಮಾಡಿದ ಘಟನೆ ಘಟನೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ದೀರ್ಘಕಾಲದ ದಾಂಪತ್ಯ ಕಲಹವು ಕೊನೆಗೆ ಪತಿಯ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆಯಾದ ಪತಿಯನ್ನು ಕೆಪಿಸಿಎಲ್‌ನಲ್ಲಿ ಅಪರೇಟ‌ರ್ ಆಗಿ ಕೆಲಸ ಮಾಡುತ್ತಿದ್ದ 51 ವರ್ಷದ ರಮೇಶ್ ಎಂದು ಗುರುತಿಸಲಾಗಿದೆ. ತಮ್ಮ ಪತಿ ರಮೇಶ್ ಅವರನ್ನು ಒನಕೆಯಿಂದ ಹೊಡೆದು ಕೊಲೆ ಮಾಡಿರುವ ಆರೋಪದ ಮೇಲೆ ಪತ್ನಿ ಮಹಾದೇವಿ (ಉಮಾದೇವಿ) ಅವರನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಮೇಶ್ ಹಾಗೂ ಮಹಾದೇವಿ ನಡುವೆ ನಿತ್ಯವೂ ಜಗಳ ನಡೆಯುತ್ತಿತ್ತು. ವಯಸ್ಸು 50 ದಾಟಿದ್ದರೂ, ಪತಿ ರಮೇಶ್ ಅವರು ನಿರಂತರವಾಗಿ ಪತ್ನಿ ಮಹಾದೇವಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಆತ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಅದರಲ್ಲಿ ಇರುವ ರೀತಿಯಲ್ಲಿಯೇ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದ. ಗಂಡನ ಈ 'ಪೋರ್ನ್ ವಿಡಿಯೋ' ಪ್ರೇರಿತ ಕಿರುಕುಳಕ್ಕೆ ಮಹಾದೇವಿ ತೀವ್ರ ಬೇಸತ್ತಿದ್ದರು.ಕೆಪಿಸಿಎಲ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್ ಕೈತುಂಬಾ ಸಂಬಳ ಗಳಿಸುತ್ತಿದ್ದರೂ, ಮನೆ ನಿರ್ವಹಣೆಗಾಗಿ ಪತ್ನಿಗೆ ಕೇವಲ 2,000 ರೂಪಾಯಿಗಳನ್ನು ಮಾತ್ರ ನೀಡುತ್ತಿದ್ದ. ಗಂಡನ ಈ ಕಂಜೂಸು ನೀತಿಯಿಂದಾಗಿ ಮನೆಯಲ್ಲಿ ಹಣಕಾಸಿನ ವಿಚಾರಕ್ಕೂ ನಿತ್ಯ ಜಗಳ ನಡೆಯುತ್ತಿತ್ತು.

ಈ ಸುದ್ದಿಯನ್ನೂ ಓದಿ: Elon Musk: ಸ್ವಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರಾ ಎಲಾನ್‌ ಮಸ್ಕ್‌ ತಂದೆ? ಏನಿದು ಆರೋಪ?

ನಿನ್ನೆಯೂ ಇದೇ ವಿಷಯಕ್ಕೆ ಇಬ್ಬರ ನಡುವೆ ಕಲಹ ನಡೆಯಿತು. ಮಹಾದೇವಿ, ಮನೆಯಲ್ಲಿ ಒನಕೆಯಿಂದ ರಮೇಶ್‌ರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಒನಕೆಯ ಪೆಟ್ಟು ಬಿದ್ದ ರಮೇಶ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಪತಿಯ ಕೊಲೆಯ ನಂತರ, ಮುನಿರಾಬಾದ್ ಪೊಲೀಸ್ ಠಾಣೆಗೆ ತೆರಳಿದ ಆಕೆ, ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ ಎಂದು ವರದಿಯಾಗಿದೆ. ಪೊಲೀಸರು ತಕ್ಷಣ ಮಹಾದೇವಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ-ಪತ್ನಿಯ ನಡುವಿನ ವೈಯಕ್ತಿಕ ವಿಚಾರವು ಇಂತಹ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿರುವುದು ಮುನಿರಾಬಾದ್ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.