Elon Musk: ಸ್ವಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರಾ ಎಲಾನ್ ಮಸ್ಕ್ ತಂದೆ? ಏನಿದು ಆರೋಪ?
ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರ 79 ವರ್ಷದ (Elon Musk) ತಂದೆ ಎರೋಲ್ ಮಸ್ಕ್ ಮೇಲೆ ಬಹು ದೊಡ್ಡ ಆರೋಪವೊಂದು ಕೇಳಿ ಬಂದಿದೆ. ಎರೋಲ್ 1993 ರಿಂದ ಅವರ ಐದು (Errol Musk) ಮಕ್ಕಳು ಮತ್ತು ಮಲಮಕ್ಕಳ ಮೇಲೆ ಲೈಂಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

-

ವಾಷಿಂಗ್ಟನ್: ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರ 79 ವರ್ಷದ (Elon Musk) ತಂದೆ ಎರೋಲ್ ಮಸ್ಕ್ ಮೇಲೆ ಬಹು ದೊಡ್ಡ ಆರೋಪವೊಂದು ಕೇಳಿ ಬಂದಿದೆ. ಎರೋಲ್ 1993 ರಿಂದ ಅವರ ಐದು (Errol Musk) ಮಕ್ಕಳು ಮತ್ತು ಮಲಮಕ್ಕಳ ಮೇಲೆ ಲೈಂಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಎರಡನೇ ಟ್ರಂಪ್ ಆಡಳಿತದ ಅವಧಿಯಲ್ಲಿ ಸಲಹೆಗಾರರಾಗಿ ಅಲ್ಪಾವಧಿಗೆ ಸೇವೆ ಸಲ್ಲಿಸಿದ್ದ ಎಲೋನ್ ಮಸ್ಕ್ ತಮ್ಮ ತಂದೆಯ ಬಗ್ಗೆ ವಿರಳವಾಗಿ ಮಾತನಾಡುವುದಕ್ಕೆ ಈ ಆರೋಪಗಳು ಕಾರಣವಾಗಿರಬಹುದು ಎಂದು ಊಹಿಸಲಾಗುತ್ತಿದೆ. ಆದರೆ ಈ ಕುರಿತು ಎಲೋನ್ ಮಸ್ಕ್ ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.
ಕನಿಷ್ಠ ಒಂಬತ್ತು ಮಕ್ಕಳು ಮತ್ತು ಮಲಮಕ್ಕಳನ್ನು ಹೊಂದಿರುವ ಮತ್ತು ಮೂವರು ಮಹಿಳೆಯರನ್ನು ಮದುವೆಯಾಗಿರುವ ಎರೋಲ್ ಮಸ್ಕ್, "ಕುಟುಂಬ ಸದ್ಯರ ಮೇಲೆ ಹಿಡಿತ ಹೊಂದಿದ್ದಾರೆ ಎಂದು ವರದಿ ಹೇಳಿದೆ. ನ್ಯಾಯಾಲಯದ ದಾಖಲೆಗಳು, ವೈಯಕ್ತಿಕ ಪತ್ರವ್ಯವಹಾರಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಕುಟುಂಬ ಸದಸ್ಯರೊಂದಿಗಿನ ಸಂದರ್ಶನಗಳನ್ನು ಆಧರಿಸಿ ಎರೋಲ್ ಮಸ್ಕ್ ವಿರುದ್ಧದ ಮೊದಲ ಆರೋಪ 1993 ರಲ್ಲಿ ದಾಖಲಾಗಿತ್ತು, ಅವರ ನಾಲ್ಕು ವರ್ಷದ ಮಲಮಗಳ ಮೇಲೆ ಮಸ್ಕ್ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ಹಲವು ಬಾರಿ ತನ್ನ ಮಕ್ಕಳ ಮೇಲೆ ಲೈಂಗಿಕ ದೌರ್ನಜ್ಯ ಎಸಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.
ಈ ಸುದ್ದಿಯನ್ನೂ ಓದಿ: Elon Musk: ನನ್ನ ಮಗುವಿಗೆ ಎಲಾನ್ ಮಸ್ಕ್ ತಂದೆ ಎಂದ ಮಹಿಳೆ! 13 ಮಕ್ಕಳ ಅಪ್ಪನಾದರೆ ಮಸ್ಕ್?
ತಮ್ಮ ಮೇಲೆ ಬಂದಿರುವ ಆರೋಪವನ್ನು ಎರೋಲ್ ಮಸ್ಕ್ ಅಲ್ಲಗೆಳೆದಿದ್ದಾರೆ. ಇಂತಹ ಹೇಳಿಕೆಗಳಿಗೆ ಯಾವುದೇ ಪುರಾವೆ ಇಲ್ಲ. ಕುಟುಂಬ ಸದಸ್ಯರು ತಮ್ಮ ಹಿರಿಯ ಮಗ ಎಲಾನ್ ಮಸ್ಕ್ ಅವರನ್ನು ಮಕ್ಕಳ ಮೇಲೆ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಪ್ರಭಾವಿಸುವ ಮೂಲಕ ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. 2017 ರ ರೋಲಿಂಗ್ ಸ್ಟೋನ್ ಸಂದರ್ಶನವೊಂದರಲ್ಲಿ ಎಲೋನ್ ಮಸ್ಕ್ ನನ್ನ ತಂದೆ "ನೀವು ಯೋಚಿಸಬಹುದಾದ ಬಹುತೇಕ ಎಲ್ಲಾ ಕೆಟ್ಟ ಕೆಲಸಗಳನ್ನು" ಮಾಡಿದ್ದಾರೆ ಎಂದು ಹೇಳಿದ್ದರು.