Tata Motors: ಪಂತ್ ನಗರದ ಘಟಕದಲ್ಲಿ ಉದ್ಯೋಗಿ ಗಳ ಸಾರಿಗೆ ವ್ಯವಸ್ಥೆಗಾಗಿ ಸಿದ್ಧಪಡಿಸಿದ ಎಲೆಕ್ಟ್ರಿಕ್ ಬಸ್ ಗಳನ್ನು ಅನಾವರಣಗೊಳಿಸಿದ ಟಾಟಾ ಮೋಟಾರ್ಸ್
Tata Motors: ಪಂತ್ ನಗರದ ಘಟಕದಲ್ಲಿ ಉದ್ಯೋಗಿ ಗಳ ಸಾರಿಗೆ ವ್ಯವಸ್ಥೆಗಾಗಿ ಸಿದ್ಧಪಡಿಸಿದ ಎಲೆಕ್ಟ್ರಿಕ್ ಬಸ್ ಗಳನ್ನು ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

ಈ ಮೂಲಕ ಟಾಟಾ ಮೋಟಾರ್ಸ್ ಇಂಗಾಲ ತಟಸ್ಥತೆ ಕಡೆಗಿನ ತನ್ನ ಬದ್ಧತೆಯನ್ನು ಸಾರಿದೆ
ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಉತ್ತರಾಖಂಡ್ ನ ಪಂತ್ ನಗರದಲ್ಲಿರುವ ತನ್ನ ಘಟಕದಲ್ಲಿ ಉದ್ಯೋಗಿಗಳ ಸಾರಿಗೆಗಾಗಿ ಮೀಸಲಾ ಗಿರುವ ಎಲೆಕ್ಟ್ರಿಕ್ ಬಸ್ ಗಳನ್ನು ಇಂದು ಅನಾವರಣ ಮಾಡಿದೆ. ಪ್ರಾದೇಶಿಕವಾಗಿ ನಿರ್ಮಿಸಲಾದ, ಶೂನ್ಯ-ಹೊರಸೂಸುವಿಕೆ ಸಾಮರ್ಥ್ಯ ಹೊಂದಿ ರುವ ಈ ಬಸ್ ಈ ಕಾಲದ ವಿಶಿಷ್ಟ ಫೀಚರ್ ಗಳನ್ನು ಹೊಂದಿದ್ದು, ಅತ್ಯಾಧುನಿಕ ಬ್ಯಾಟರಿ ವ್ಯವಸ್ಥೆಯಿಂದ ಕಾರ್ಯ ನಿರ್ವಹಿಸುತ್ತದೆ. ಟಾಟಾ ಮೋಟಾರ್ಸ್ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ (ಟಿಎಸ್‌ಸಿಎಂಎಸ್‌ಎಲ್) ಕಂಪನಿಯು ಟಾಟಾ ಅಲ್ಟ್ರಾ 9ಎಂ ಎಲೆಕ್ಟ್ರಿಕ್ ಬಸ್ ಗಳ ಮೂಲಕ ಉದ್ಯೋಗಿಗಳ ಸಾರಿಗೆ ವ್ಯವಸ್ಥೆಯನ್ನು ಸುಗಮ ಗೊಳಿಸುತ್ತದೆ.
ಸುರಕ್ಷಿತ, ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣ ಸೌಲಭ್ಯವನ್ನು ಒದಗಿಸಲು ಈ ಬಸ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಇ-ಬಸ್ ಸೇವೆಯ ಮೂಲಕ 5,000ಕ್ಕೂ ಹೆಚ್ಚು ಜನರಿಗೆ ಸ್ವಚ್ಛ ಮತ್ತು ಹಸಿರು ಸಾರಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಆ ಮೂಲಕ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವತ್ತ ಸಂಸ್ಥೆ ಹೆಜ್ಜೆ ಇಟ್ಟಿದೆ. ವಿಶೇಷವಾಗಿ ಈ ಸಾರಿಗೆ ವ್ಯವಸ್ಥೆಯ ಮೂಲಕ ವಾರ್ಷಿಕವಾಗಿ ~1,100 ಟನ್ ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿಮೆ ಆಗಲಿದೆ. 16 ಎಂಡಬ್ಲ್ಯೂ ಸೌರಶಕ್ತಿ ಸ್ಥಾವರದಿಂದ ಉತ್ಪತ್ತಿಯಾಗುವ ವಿದ್ಯುತ್ ಮೂಲಕ ಈ ಇ- ಬಸ್ ಗಳನ್ನು ಚಾರ್ಜ್ ಮಾಡಲಾಗುತ್ತದೆ. ಹೀಗಾಗಿ ಸಂಪೂರ್ಣ ವ್ಯವಸ್ಥೆಯು ಪರಿಸರ ಸ್ನೇಹಿ ವ್ಯವಸ್ಥೆಯಾಗಿದೆ.
ಈ ಇ ಬಸ್ ಗಳನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಕಾರ್ಯನಿರ್ವಹಣಾ ವಿಭಾಗದ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಶ್ರೀ ವಿಶಾಲ್ ಬಾದ್‌ಶಾ ಅವರು, “ಉದ್ಯೋಗಿಗಳ ಸಾರಿಗೆ ವ್ಯವಸ್ಥೆಗಾಗಿ ಎಲೆಕ್ಟ್ರಿಕ್ ಬಸ್ ಗಳ ಅನಾವರಣ ಮಾಡಲಾಗಿದ್ದು, ಇದು 2045ರ ಹೊತ್ತಿಗೆ ಹಸಿರುಮನೆ ಅನಿಲ (ಜಿ ಎಚ್ ಜಿ) ಹೊರಸೂಸುವಿಕೆ ಮುಕ್ತವಾಗಿಸುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಆಶಯವನ್ನು ಈಡೇರಿ ಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸೋರ್ಸಿಂಗ್ ನಿಂದ ಹಿಡಿದು ಅಭಿವೃದ್ಧಿವರೆಗೆ ಮತ್ತು ಇಂಜಿನಿಯರಿಂಗ್ ನಿಂದ ಹಿಡಿದು ಕಾರ್ಯಾಚರಣೆಗಳವರೆಗೆ ಸಂಪೂರ್ಣ ವ್ಯವಸ್ಥೆಯಲ್ಲಿಯೇ ಸುಸ್ಥಿರತೆಯನ್ನು ಸಾಧಿಸುವ ಮೂಲಕ ನಮ್ಮ ಎಲ್ಲಾ ಉತ್ಪಾದನಾ ಘಟಕಗಳನ್ನು ಪರಿಸರ ಸ್ನೇಹಿ ಹಸಿರು ವ್ಯವಸ್ಥೆಯನ್ನಾಗಿ ಮಾಡಲು ನಾವು ಬದ್ಧರಾಗಿ ದ್ದೇವೆ. ಪಂತ್ ನಗರ ಘಟಕದಲ್ಲಿ ಹಲವಾರು ಸುಸ್ಥಿರ ಕಾರ್ಯಕ್ರಮಗಳನ್ನು ಈಗಾಗಲೇ ಯಶಸ್ವಿಯಾಗಿ ಜಾರಿ ಗೊಳಿಸಲಾಗಿದ್ದು, ಅದರೊಂದಿಗೆ ಈ ಹೊಸ ಸೌಲಭ್ಯವನ್ನು ಅನಾವರಣಗೊಳಿಸಲು ನಾನು ಸಂತೋಷಪಡುತ್ತೇನೆ. ಈ ಸ್ಥಾವರವು ಈಗಾಗಲೇ ಪ್ರಮಾಣೀಕೃತ ಶೂನ್ಯ ತ್ಯಾಜ್ಯ ಮತ್ತು ಲ್ಯಾಂಡ್‌ಫಿಲ್ ಸೌಲಭ್ಯ ಹೊಂದಿದೆ ಮತ್ತು ಸಿಐಐ - ಜಿಬಿಸಿಯಿಂದ ವಾಟರ್ ಪಾಸಿಟಿವ್ ಸರ್ಟಿಫಿಕೇಷನ್ ಅನ್ನು ಪಡೆದುಕೊಂಡಿದೆ. ಶೂನ್ಯ ಹೊರಸೂಸುವಿಕೆ ಸಾಮರ್ಥ್ಯದ ಇ ಬಸ್ ಸಾರಿಗೆ ಸೇವೆಯ ಪ್ರಾರಂಭವು ಈ ಘಟಕದ ಸುಸ್ಥಿರತೆಯ ಪ್ರಯಾಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ” ಎಂದು ಹೇಳಿದರು.
ಫುಲ್- ಎಲೆಕ್ಟ್ರಿಕ್ ಡ್ರೈವ್ ಟ್ರೇನ್‌ನಿಂದ ನಡೆಸಲ್ಪಡುವ ಟಾಟಾ ಅಲ್ಟ್ರಾ ಇವಿ 9ಎಂ ಎಲೆಕ್ಟ್ರಿಕ್ ಬಸ್ ಜನರೇಟಿವ್ ಬ್ರೇಕಿಂಗ್ ಸಿಸ್ಟಮ್ ಮತ್ತು ಇಂಟೆಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ಸ್ ಸೇರಿದಂತೆ ಹಲವು ಸ್ಮಾರ್ಟ್ ಫೀಚರ್ ಗಳನ್ನು ಹೊಂದಿದೆ. ಟಾಟಾ ಮೋಟಾರ್ಸ್ ನ ಈಗಾಗಲೇ 10 ನಗರಗಳಲ್ಲಿ 3,100 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿ ಸಿದ್ದು, ಈ ಯಶಸ್ಸಿನ ಆಧಾರದಲ್ಲಿ ಈ ಹೊಸ ಬಸ್ ಗಳನ್ನು ಅನಾವರಣಗೊಳಿಸಲಾಗಿದೆ. ಇದು ಭಾರತದ ಎಲೆಕ್ಟ್ರಿಕ್ ಸಮೂಹ ಸಾರಿಗೆ ವಿಭಾಗದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಬಸ್ ಗಳು ಇದುವರೆಗೆ ಒಟ್ಟು 24 ಕೋಟಿ ಕಿಲೋ ಮೀಟರ್‌ಗಳನ್ನು ಕ್ರಮಿಸಿರುವುದು ಗಮನಾರ್ಹ. ಶೇ.95ರಷ್ಟು ಉತ್ತಮವಾಗಿ ಕಾರ್ಯನಿರ್ವಹಣೆ ತೋರಿದೆ. ಆ ಮೂಲಕ ಈ ಬಸ್ ಗಳು ಟಾಟಾ ಮೋಟಾರ್ಸ್ ನ ಎಲೆಕ್ಟ್ರಿಕ್ ಸಮೂಹ ಸಾರಿಗೆ ಉತ್ಪನ್ನಗಳ ವಿಶ್ವಾಸಾರ್ಹತೆ ಮತ್ತು ದಕ್ಷತೆಯನ್ನು ಎತ್ತಿ ಹಿಡಿದಿದೆ.