Delhi Election 2025: ದಿಲ್ಲಿ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಪ್ರಕಟ; ಯಾರಿಗೆ ಗದ್ದುಗೆ?
ಬಹು ನಿರೀಕ್ಷಿತ ದಿಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಇದುವರೆಗೆ ಒಟ್ಟು ಶೇ. 58 ಮತದಾನವಾಗಿದ್ದು, ಇದೀಗ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಪೀಪಲ್ ಪಲ್ಸ್, ಪಿ ಮಾರ್ಕ್, ಚಾಣಕ್ಯ ಸ್ಟ್ರಾಟಜಿ ಮತ್ತು ಎಬಿಪಿ-ಮ್ಯಾಟ್ರಿಜ್ ಸಮೀಕ್ಷೆಗಳಲ್ಲಿ ಕಮಲ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
ಹೊಸದಿಲ್ಲಿ: ಬಹು ನಿರೀಕ್ಷಿತ ದಿಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದೆ (Delhi Election 2025). ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಂಜೆ 5 ಗಂಟೆವರೆಗೆ ಒಟ್ಟು ಶೇ. 57.70 ಮತದಾನವಾಗಿದ್ದು, ಇದೀಗ ಚುನಾವಣೋತ್ತರ ಸಮೀಕ್ಷೆ (Exit Poll) ಪ್ರಕಟವಾಗಿದೆ. ಆಪ್, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದ್ದು, ರಾಷ್ಟ್ರ ರಾಜಧಾನಿಯ ಗದ್ದುಗೆ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಎದುರಾಗಿದೆ. ಫಲಿತಾಂಶ ಫೆ. 8ರಂದು ಹೊರ ಬೀಳಲಿದೆ. ದಿಲ್ಲಿಯಲ್ಲಿ ಒಟ್ಟು 70 ಕ್ಷೇತ್ರಗಳಿದ್ದು, ಮ್ಯಾಜಿಕ್ ನಂಬರ್ 36. ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತಿದೆ ಎನ್ನುವ ವಿವರ ಇಲ್ಲಿದೆ.
ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಪೀಪಲ್ ಪಲ್ಸ್, ಪಿ ಮಾರ್ಕ್, ಚಾಣಕ್ಯ ಸ್ಟ್ರಾಟಜಿ ಮತ್ತು ಎಬಿಪಿ-ಮ್ಯಾಟ್ರಿಜ್ ಸೇರಿದಂತೆ ಬಹುತೇಕ ಸಮೀಕ್ಷೆಗಳಲ್ಲಿ ಕಮಲ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
ಚುನಾವಣೋತ್ತರ ಸಮೀಕ್ಷೆ
ಸಮೀಕ್ಷೆ | ಬಿಜೆಪಿ | ಆಪ್ | ಕಾಂಗ್ರೆಸ್ |
---|---|---|---|
ಎಬಿಪಿ-ಮ್ಯಾಟ್ರಿಜ್ | 3೦-40 | 27-32 | 0-೦1 |
ಪಿ-ಮಾರ್ಕ್ | 39-49 | 21-31 | 0-೦1 |
ಪೀಪಲ್ ಪಲ್ಸ್ | 51-60 | 10-19 | - |
ಚಾಣಕ್ಯ | 39-44 | 25-28 | 02-03 |
ಜೆವಿಸಿ | 39-45 | 22-31 | 0-೦2 |
ಪೋಲ್ ಡೈರಿ | 42-50 | 18-25 | 0-೦2 |
ಹಿಂದಿನ ಫಲಿತಾಂಶ ಏನಾಗಿತ್ತು?
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಕಳೆದ 10 ವರ್ಷಗಳಿಂದ ದಿಲ್ಲಿಯಲ್ಲಿ ಆಡಳಿತದಲ್ಲಿದೆ. 2015ರಲ್ಲಿ ಆಪ್ 67 ಸೀಟುಗಳನ್ನು ಗೆದ್ದುಕೊಂಡಿದ್ದರೆ, 2020ರಲ್ಲಿ 62 ಕಡೆ ಜಯ ಗಳಿಸಿತ್ತು.