ಕಾಂಗ್ರೆಸ್‌ನ ಕಾನೂನು ಬಾಹಿರ ಜಯ ತಾತ್ಕಾಲಿಕ: ಬಸವರಾಜ ಬೊಮ್ಮಾಯಿ
ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿಯ ಮೂರು ಜನ ಸದಸ್ಯರನ್ನು ರಾತ್ರಿ 12 ಗಂಟೆಗೆ ಅಮಾನತು ಮಾಡಿ ಅವರನ್ನು ಮತ ಹಾಕದಂತೆ ನೋಡಿಕೊಂಡಿದ್ದಾರೆ. ಅಮಾನತುಗೊಂಡ ಸದಸ್ಯರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟು ಆದೇಶ ನೀಡಿದೆ. ಚುನಾವಣಾಧಿಕಾರಿ ಅದನ್ನು ದಿಕ್ಕರಿಸಿ, ಎಲ್ಲ ಸಂಪರ್ಕ ಬಂದು ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ನಿರ್ದೇಶನದಂತೆ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.