ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur News: ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ 2ನೇ ಬಾರಿಗೆ ಕೆಂಪರಾಜಯ್ಯ ಆಯ್ಕೆ

Tumkur News: ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ 2025-27ನೇ ಸಾಲಿಗೆ 2 ವರ್ಷದ ಅವಧಿಗೆ ಎಚ್. ಕೆಂಪರಾಜಯ್ಯ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 6 ಮಂದಿ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಕೆಂಪರಾಜಯ್ಯ 514 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ 2ನೇ ಬಾರಿಗೆ ಕೆಂಪರಾಜಯ್ಯ ಆಯ್ಕೆ

ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ 2ನೇ ಬಾರಿಗೆ ಕೆಂಪರಾಜಯ್ಯ ಆಯ್ಕೆ.

Profile Siddalinga Swamy Apr 12, 2025 6:54 PM

ತುಮಕೂರು: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ 2025-27ನೇ ಸಾಲಿಗೆ 2 ವರ್ಷದ ಅವಧಿಗೆ ಎಚ್. ಕೆಂಪರಾಜಯ್ಯ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. (Tumkur News) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 6 ಮಂದಿ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಕೆಂಪರಾಜಯ್ಯ 514 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಎಲ್. ರವಿಗೌಡ 513 ಮತ, ಪ್ರಧಾನ ಕಾರ್ಯದರ್ಶಿಯಾಗಿ ಹಿರೇಹಳ್ಳಿ ಮಹೇಶ್ 506 ಮತ, ಜಂಟಿ ಕಾರ್ಯದರ್ಶಿಯಾಗಿ ಟಿ.ಎಂ. ಧನಂಜಯ 477 ಮತ, ಖಜಾಂಚಿಯಾಗಿ (ಮಹಿಳಾ ಮೀಸಲು) ಸಿಂಧು‌ ಬಿ.ಎಂ. 572 ಮತ ಪಡೆದು ವಿಜೇತರಾಗಿದ್ದಾರೆ.

ಎರಡು ಬಾರಿ ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿರಿಯ ವಕೀಲ ದೊಡ್ಡಮನೆ ಗೋಪಾಲಗೌಡ 29 ಮತಗಳನ್ನು ಪಡೆದಿದ್ದಾರೆ.

ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ (ಪುರುಷ ಮೀಸಲು) ಗೋವಿಂದರಾಜು ಪಿ. 806, ಡಿ.ಎ. ಜಗದೀಶ್ 894, ಶ್ರೀನಿವಾಸಮೂರ್ತಿ ಕೆ.ವಿ. 844, ಶ್ರೀನಿವಾಸಮೂರ್ತಿ ವಿ.ಕೆ. 622, ಸುರೇಶ್ ಎಸ್. 791 ಮತ ಪಡೆದು ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ (ಮಹಿಳಾ ಮೀಸಲು) ಪದ್ಮಶ್ರೀ ಸಿ.ಆರ್. 696 ಮತ್ತು ಸೇವಾಪ್ರಿಯ ಜೆ.ಎಸ್. 855 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru Power Cut: ಏ.13 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಎರಡನೇ ಬಾರಿಗೆ ಆಯ್ಕೆಯಾಗಿರುವ ಅಧ್ಯಕ್ಷ ಎಚ್. ಕೆಂಪರಾಜಯ್ಯ ಮಾತನಾಡಿ, ವಕೀಲರ ಸಂಘದ ಶ್ರೇಯೋಭಿವೃದ್ದಿ, ವಕೀಲರ ಹಿತ ಕಾಯುವ ಕೆಲಸವನ್ನು ವಿಶ್ವಾಸದಿಂದ ಮಾಡುತ್ತೇನೆ ಎಂದು ತಿಳಿಸಿದ ಅವರು, ವಕೀಲರ ಸಂಘದ ಕಟ್ಟಡದ 3ನೇ ಮಹಡಿಗೆ ಲಿಫ್ಟ್, ನೂತನ ನ್ಯಾಯಾಲಯಕ್ಕೆ ಜಾಗ, ಗಣೇಶ ದೇವಸ್ಥಾನ ಅಭಿವೃದ್ಧಿ, ಎಟಿಎಂ ಉದ್ಘಾಟನೆ, ಹೈಟೆಕ್ ಶೌಚಾಲಯ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ವಕೀಲರು ಅಭಿನಂದನೆ ತಿಳಿಸಿದರು.