ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Eid Fashion 2025: ಈದ್ ಸಂಭ್ರಮಕ್ಕೆ ಲಗ್ಗೆ ಇಟ್ಟ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಿವು

Eid Fashion 2025: ಈದ್ ಸಂಭ್ರಮಕ್ಕೆ ಗ್ರ್ಯಾಂಡ್ ಲುಕ್ ನೀಡುವ ಎಥ್ನಿಕ್ ಲುಕ್ ನೀಡುವ ಉಡುಪುಗಳು ಮಾರುಕಟ್ಟೆಗೆ ಆಗಮಿಸಿವೆ. ಯಾವ ಬಗೆಯವು ಹೆಚ್ಚು ಟ್ರೆಂಡಿಯಾಗಿವೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಈದ್ ಸಂಭ್ರಮಕ್ಕೆ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳು ಯುವತಿಯರ ಜತೆಯಾಗಿವೆ. ಫೆಸ್ಟೀವ್ ಸೀಸನ್ ನಂತರವೂ ಸಮಾರಂಭಗಳಿಗೂ ಧರಿಸಬಹುದಾದ ಎಥ್ನಿಕ್ ಲುಕ್ ನೀಡುವ ಈ ಗ್ರ್ಯಾಂಡ್ ಉಡುಪುಗಳು ತಾರೆಯರಿಗೆ ಮಾತ್ರವಲ್ಲ, ಸಾಮಾನ್ಯ ಸ್ತ್ರೀಯರನ್ನು ಸೆಳೆದಿವೆ.

2/5

ಗ್ರ್ಯಾಂಡ್ ಡಿಸೈನರ್‌ವೇರ್ಸ್‌ಗೆ ಹೆಚ್ಚಾದ ಬೇಡಿಕೆ

ಜಗಮಗಿಸುವ ಡಿಸೈನ್‌ನ ಶಿಮ್ಮರ್ ಡಿಸೈನರ್‌ವೇರ್‌ಗಳಿಂದಿಡಿದು ಹ್ಯಾಂಡ್‌ವರ್ಕ್, ಮೆಷಿನ್‌ವರ್ಕ್ ಇರುವಂತಹ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಿಗೆ ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ.

3/5

ಸಿಲ್ಕ್ ಡಿಸೈನರ್‌ವೇರ್‌ಗಳು ಸಂಗಮ

ಸಿಲ್ಕ್ ಕುರ್ತಾದೊಂದಿಗೆ ಪಲ್ಹಾಜೋ ಪ್ಯಾಂಟ್ ಹಾಗೂ ದುಪಟ್ಟಾ ಹೊಂದಿರುವ ದೇಸಿ ಸಿಲ್ಕ್‌ನ ಗ್ರ್ಯಾಂಡ್ ಎಥ್ನಿಕ್‌ವೇರ್ಸ್, ಫೆಸ್ಟೀವ್ ಸೀಸನ್‌ನ ಸಂಭ್ರಮ ಇಮ್ಮಡಿಗೊಳಿಸಿವೆ. ನೋಡಲು ಮನಮೋಹಕವಾಗಿ ಕಾಣುವ ಸಿಲ್ಕ್ ಫ್ಯಾಬ್ರಿಕ್‌ನ ಶೈಲಿಯ ಉಡುಪುಗಳಲ್ಲಿ ಬಾರ್ಡರ್, ಬಾರ್ಡರ್‌ರಹಿತ, ಡಿಸೈನರ್‌ನೆಕ್, ಕೇಪ್ ಡಿಸೈನ್ಸ್ ದುಪಟ್ಟಾ ಸೇರಿದಂತೆ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ.

4/5

ಸಾಫ್ಟ್ ಜಾರ್ಜೆಟ್ ಡಿಸೈನರ್‌ವೇರ್ಸ್

ಜಾರ್ಜೆಟ್ ಫ್ಯಾಬ್ರಿಕ್‌ನ ಮಾನೊಕ್ರೋಮ್ ಶೇಡ್‌ನ ಅನಾರ್ಕಲಿ ಸೂಟ್, ಕೋ ಆರ್ಡ್ ಸೆಟ್, ಸಲ್ವಾರ್ ಸೆಟ್‌ಗಳು ಕೂಡ ಅತಿ ಹೆಚ್ಚು ಹುಡುಗಿಯರನ್ನು ಸೆಳೆದಿವೆ. ನೋಡಲು ಎಲಿಗೆಂಟ್ ಹಾಗೂ ಟ್ರೆಡಿಷನಲ್ ಲುಕ್ ನೀಡುವ ಇವುಗಳಲ್ಲಿ ಟ್ವಿರ್ಲಿಂಗ್ ಮಾಡಬಹುದಾಗಿದ್ದು, ಅದಕ್ಕೆಂದೇ ಸಾಕಷ್ಟು ಹುಡುಗಿಯರು ಧರಿಸುವುದು ಹೆಚ್ಚಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಮಿನುಗುವ ಶಿಮ್ಮರ್ ವಿನ್ಯಾಸದ ಡಿಸೈನರ್‌ವೇರ್ಸ್

ನೋಡಲು ಕೊಂಚ ಸ್ಟ್ರೇಟ್ ಕಟ್ ಹೊಂದಿರುವಂತಹ ಸೆಮಿ ಅನಾರ್ಕಲಿ ಡಿಸೈನ್‌ನ ಸೂಟ್‌ಗಳು ಅರ್ಗಾನ್ಜಾ, ಚಂದೇರಿ ಹಾಗೂ ಸೆಮಿ ಸಿಲ್ಕ್ ಫ್ಯಾಬ್ರಿಕ್‌ನಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಕಾಂಟ್ರಾಸ್ಟ್ ದುಪಟ್ಟಾಗಳು ಸಾಥ್ ನೀಡಿವೆ. ಗೋಲ್ಡನ್ ಹಾಗೂ ಸಿಲ್ವರ್ ಶೇಡ್‌ನ ಸೆಟ್‌ಗಳು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಒಟ್ಟಿನಲ್ಲಿ ಈ ಫೆಸ್ಟೀವ್ ಸೀಸನ್‌ನಲ್ಲಿ ಎಂದಿನಂತೆ ಶಿಮ್ಮರ್ ಹಾಗೂ ಶೈನಿಂಗ್ ಎಥ್ನಿಕ್‌ವೇರ್‌ಗಳು ಹೆಚ್ಚು ಪಾಪುಲರ್ ಆಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಮೀರಜ್.

ಶೀಲಾ ಸಿ ಶೆಟ್ಟಿ

View all posts by this author