-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯ ದಿನಾಚರಣೆಯಂದು ಯುವತಿಯರ ಸಂಭ್ರಮಕ್ಕೆ ಸಾಥ್ ನೀಡುವ ತ್ರಿವರ್ಣವಿರುವ ದುಪಟ್ಟಾಗಳು ಈಗಾಗಲೇ ಮಾರುಕಟ್ಟೆಗೆ ಆಗಮಿಸಿವೆ. ಯುವತಿಯರ ಡ್ರೆಸ್‌ಕೋಡ್‌ಗೆ ಜತೆಯಾಗುವ ಈ ಕಲರ್‌ಫುಲ್ ದುಪಟ್ಟಾಗಳು ಈಗಾಗಲೇ ಬೇಡಿಕೆ ಹೆಚ್ಚಿಸಿಕೊಂಡಿವೆ. ಸ್ವಾತಂತ್ರ್ಯ ದಿನಾಚಾರಣೆಯಂದು ಹುಡುಗಿಯರ ಔಟ್‌ಫಿಟ್ ಜತೆ ಮ್ಯಾಚ್ ಮಾಡಬಹುದಾದ ವಿನ್ಯಾಸದಲ್ಲಿ ದೊರೆಯುತ್ತಿರುವ ತ್ರಿವರ್ಣವಿರುವ ದುಪಟ್ಟಾಗಳು ಯುವತಿಯರನ್ನು ಸೆಳೆದಿವೆ.

ಡ್ರೆಸ್‌ಕೋಡ್‌ಗೆ ಸಾಥ್
ಯಾವುದೇ ಉಡುಪಿನೊಂದಿಗೂ ಧರಿಸಬಹುದಾದ ಈ ದುಪಟ್ಟಾಗಳು ಅಂದಿನ ಡ್ರೆಸ್‌ಕೋಡ್‌ನಂತೆ ಪ್ರತಿಬಿಂಬಿಸುತ್ತವೆ. ಇನ್ನು ಶಾಲೆಗಳಲ್ಲಿ ಮಾಡುವ ಕಾರ್ಯಕ್ರಮಗಳಲ್ಲೂ ಈ ತ್ರಿವರ್ಣದ ದುಪಟ್ಟಾಗಳನ್ನು ಬಳಸಲಾಗುತ್ತದೆ. ಒಟ್ಟಿನಲ್ಲಿ, ಈ ತ್ರಿವರ್ಣ ದುಪಟ್ಟಾಗಳು ಈ ದಿನದಂದು ಸಂಭ್ರಮಕ್ಕೆ ಸಾಥ್ ನೀಡುತ್ತವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ವಿದ್ಯಾ ವಿವೇಕ್.

ವೈವಿಧ್ಯಮಯ ಫ್ಯಾಬ್ರಿಕ್‌ನಲ್ಲಿ ಲಭ್ಯ
ಈ ದುಪಟ್ಟಾಗಳು ನಾನಾ ಫ್ಯಾಬ್ರಿಕ್‌ನಲ್ಲಿ ಸಿಗುತ್ತಿವೆ. ಅದರಲ್ಲೂ ಅತಿ ಹೆಚ್ಚು ಮಹಿಳೆಯರು ಇಷ್ಟ ಪಡುವ ಕಾಟನ್ ತ್ರಿವರ್ಣ ದುಪಟ್ಟಾಗಳು ಕೊಂಚ ದುಬಾರಿ, ಆದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ! ಇನ್ನು, ಸಾಫ್ಟ್ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿರುವ ಕ್ರೇಪ್‌ನ ಈ ದುಪಟ್ಟಾಗಳು ಸ್ಟೋಲ್‌ನಂತೆ ಬಳಸುವ ಹುಡುಗಿಯರಿಗೆ ಪ್ರಿಯವಾಗುತ್ತಿವೆ. ಇವಲ್ಲದೆ, ಮಿಕ್ಸ್ ಸಿಲ್ಕ್‌ನಲ್ಲಿ ಬಂದಿರುವ ಕೆಲವು ದುಪಟ್ಟಾಗಳು ಎಥ್ನಿಕ್ ಲುಕ್ ನೀಡುವುದರೊಂದಿಗೆ ಗ್ರ್ಯಾಂಡ್ ಲುಕ್ ಕಲ್ಪಿಸುತ್ತಿವೆ ಹಾಗೂ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಜಯನಗರದ ಶಾಪ್‌ವೊಂದರ ಮಾರಾಟಗಾರರು.
ಈ ಸುದ್ದಿಯನ್ನೂ ಓದಿ | Independence Day Celebration 2025: ಸ್ವಾತಂತ್ರ್ಯ ದಿನಾಚರಣೆಗೆ ಮರಳಿದ ಇಕೋ ಫ್ರೆಂಡ್ಲಿ ಪೇಪರ್ ತಿರಂಗಾ ಬ್ಯಾಡ್ಜ್
ತ್ರಿವರ್ಣ ದುಪಟ್ಟಾ ಧರಿಸುವವರ ಗಮನಕ್ಕೆ
* ಯಾವುದೇ ಕಾರಣಕ್ಕೂ ಈ ದುಪಟ್ಟಾವನ್ನು ಉಲ್ಟಾ ಪಲ್ಟಾ ಧರಿಸಕೂಡದು.
* ಫ್ಯಾಷನ್ ಹೆಸರಲ್ಲಿ ಹೇಗೆ ಬೇಕೋ ಹಾಗೆ ಧರಿಸಕೂಡದು.
* ಅವಮಾನ ಉಂಟಾಗುವ ಹಾಗೆ ಸ್ಟೈಲಿಂಗ್ ಮಾಡಕೂಡದು.
* ದುಪಟ್ಟಾ ಕಾಲಿಗೆ ತಾಗುವಂತೆ ಇಳೆ ಬಿಡಕೂಡದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)