Jewel Fashion 2025: ಸೆಲೆಬ್ರಿಟಿ ಲುಕ್‌ಗಾಗಿ ಶಾಂಡೆಲಿಯರ್ ಇಯರಿಂಗ್ಸ್ ಧರಿಸಿ
Jewel Fashion 2025: ಬಿಗ್ ಹಾಗೂ ಬೋಲ್ಡ್ ಡಿಸೈನ್‌ನ ಆಕರ್ಷಕ ಶಾಂಡೆಲಿಯರ್ ಇಯರಿಂಗ್ಸ್ ಧರಿಸಿದಾಗ ಸೆಲೆಬ್ರಿಟಿ ಲುಕ್ ಗ್ಯಾರಂಟಿ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾದಲ್ಲಿ, ಇದ್ಯಾವ ಬಗೆಯ ಇಯರಿಂಗ್ಸ್? ಆಯ್ಕೆ ಮತ್ತು ಸ್ಟೈಲಿಂಗ್ ಹೇಗೆ? ಜ್ಯುವೆಲರಿ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

ಚಿತ್ರಗಳು: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವವಿನ್ಯಾಸದ ಶಾಂಡೆಲಿಯರ್ ಹ್ಯಾಂಗಿಂಗ್ಸ್-ಇಯರಿಂಗ್ಸ್ ಜುವೆಲರಿ ಲೋಕಕ್ಕೆ (Jewel Fashion 2025) ಲಗ್ಗೆ ಇಟ್ಟಿವೆ. ಧರಿಸಿದರೆ ಸೆಲೆಬ್ರೆಟಿಯಂತೆ ಬಿಂಬಿಸುವ ಬಿಗ್ ಹಾಗೂ ಬೋಲ್ಡ್ ಡಿಸೈನ್‌ನ ಶಾಂಡೆಲಿಯರ್ ಇಯರಿಂಗ್ಸ್ ಜುವೆಲರಿ ಫ್ಯಾಷನ್‌ನ ಹಿಟ್‌ಲಿಸ್ಟ್‌ಗೆ ಸೇರಿದೆ. ಕಿವಿಗಿಂತ ಅಗಲವಾಗಿರುವ, ಉದ್ದವಾಗಿರುವ ಭಾರಿ ಡಿಸೈನ್ ಒಳಗೊಂಡಿರುವ ಈ ಶಾಂಡೆಲಿಯರ್ ಇಯರಿಂಗ್ಸ್ ಕ್ರಿಸ್ಟಲ್ಸ್, ಸೆಮಿ ಅಮೆರಿಕನ್ ಡೈಮಂಡ್ಸ್, ಮುತ್ತು ಹಾಗೂ ನಾನಾ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಪಾರ್ಟಿ ಪ್ರಿಯ ಮಾನಿನಿಯರ ಕಿವಿಗಳನ್ನು ಅಲಂಕರಿಸುತ್ತಿವೆ.

ಏನಿದು ಶಾಂಡೆಲಿಯರ್ ಇಯರಿಂಗ್ಸ್?
ಸ್ಟೈಲಿಸ್ಟ್ ಸೀಮಾ ಪ್ರಕಾರ, ದೊಡ್ಡ ಬಂಗಲೆಗಳ ಮಧ್ಯಭಾಗದಲ್ಲಿ ಬೃಹತ್ ಲೈಟಿಂಗ್‌ನಿಂದ ಅಲಂಕರಿಸುವ ಶಾಂಡೆಲಿಯರ್‌ಗಳನ್ನು ಹೋಲುವಂತಹ ಈ ಇಯರಿಂಗ್‌ಗಳಿಗೆ ಶಾಂಡೆಲಿಯರ್ ಇಯರಿಂಗ್ ಎಂಬ ಹೆಸರು ಬಂದಿದೆಯಂತೆ.

ಶಾಂಡೆಲಿಯರ್ ಇಯರಿಂಗ್ಸ್‌ನ ರಾಯಲ್ ಲುಕ್
ರಾಯಲ್ ಕುಟುಂಬಗಳಲ್ಲಿ ಅದರಲ್ಲೂ ಈ ಹಿಂದೆ ರಾಣಿ ಮಹಾರಾಣಿಯರು ಧರಿಸುತ್ತಿದ್ದ ಈ ಶೈಲಿಯ ಅತಿ ದೊಡ್ಡ ಇಯರಿಂಗ್‌ಗಳು ಬರಬರುತ್ತಾ ಶ್ರೀಮಂತರನ್ನು ಸೆಳೆದವು. ದ್ರಾಕ್ಷಿಯ ಗೊಂಚಲು ಗೊಂಚಲಂತೆ ಕಾಣುವ ನೇತಾಡುವ ಹರಳುಗಳನ್ನು ಹೊಂದಿರುವ ಈ ಉದ್ದನೆಯ ಕಿವಿಯೊಲೆಗಳು, ನಾಲ್ಕೈದು ಲೇಯರ್ ಲುಕ್ ನೀಡುವ ಹ್ಯಾಂಗಿಂಗ್ಸ್, ಕ್ರಿಸ್ಟಲ್ ಹಾಗೂ ಮಣಿ, ರುಬಿ, ಜೇಡ, ಹವಳ, ಗಾಜು, ಪ್ಲಾಸ್ಟಿಕ್ ಮಣಿಗಳಿಂದ ಅಲಂಕೃತವಾಗಿರುವ ಈ ಇಯರಿಂಗ್ ರಾಯಲ್ ಲುಕ್‌ಗೆ ಮಾತ್ರ ಸೀಮಿತವಾಗಿತ್ತು. ಇವನ್ನು ಸಾಮಾನ್ಯ ಮಹಿಳೆಯರು ಕೊಳ್ಳುವುದು ಕಷ್ಟಕರವಾಗಿತ್ತು. ಬೆಲೆ ದುಬಾರಿಯಾಗಿರುತ್ತಿತ್ತು. ಬರಬರುತ್ತಾ ಈ ಡಿಸೈನ್ ಇಮೀಟೇಷನ್ ಜುವೆಲರಿಗಳಲ್ಲೂ ಕಾಣಿಸಿಕೊಳ್ಳತೊಡಗಿತು. ದುಬಾರಿಯಲ್ಲದ ಸ್ಟೋನ್‌ಗಳನ್ನು ಬಳಸಿ ತಯಾರಿಸಿದವು ಎಲ್ಲಾ ವರ್ಗದ ಮಹಿಳೆಯರನ್ನು ತಲುಪುವಲ್ಲಿ ಯಶಸ್ವಿಯಾದವು. ಪರಿಣಾಮ, ಇದೀಗ ವಿಂಟೇಜ್, ಬೋಹೆಮನ್ ಶೈಲಿಯ ಜ್ಯುವೆಲರಿ ಡಿಸೈನ್‌ಗಳಲ್ಲೂ ಊಹೆಗೂ ಮೀರಿದ ವಿನ್ಯಾಸದಲ್ಲಿ ಆಗಮಿಸಿವೆ ಎನ್ನುತ್ತಾರೆ ಜುವೆಲರಿ ಡಿಸೈನರ್ ಸೌಮ್ಯಾ.

ಶಾಂಡೆಲಿಯರ್ ಇಯರಿಂಗ್ಸ್ ಪ್ರಿಯರಿಗೆ ಟಿಪ್ಸ್
- ಈ ಇಯರಿಂಗ್ ಧರಿಸುವ ಮುನ್ನ, ಅದು ನಿಮ್ಮ ಕಿವಿಗೆ ಮುಖಕ್ಕೆ ಹೊಂದುತ್ತದೆಯೇ, ನಿಮ್ಮ ಉಡುಪಿಗೆ ಸೂಟ್ ಆಗುತ್ತದೆಯೇ ಎಂಬುದನ್ನು ಗಮನಿಸಿ.
- ಉದ್ದ ಮುಖ ಹಾಗೂ ಕತ್ತು ಹೊಂದಿರುವವರಿಗೆ ಆಕರ್ಷಕವಾಗಿ ಕಾಣುತ್ತವೆ.
- ದೊಡ್ಡ ಇಯರಿಂಗ್‌ಗಳನ್ನು ಸದಾ ಧರಿಸುವುದು ತರವಲ್ಲ, ಕಿವಿಯ ಚರ್ಮ
- ಜಗ್ಗಬಹುದು. ಲೈಟ್‌ವೇಟ್ ಇರುವಂತವನ್ನು ಖರೀದಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Star Saree Fashion 2025: ಸಿಂಪಲ್ ರೆಡ್ ಸೀರೆಯಲ್ಲಿ ಮಿನುಗಿದ ಸ್ಯಾಂಡಲ್‌ವುಡ್ ನಟಿ ತೇಜಸ್ವಿನಿ ಶರ್ಮಾ