ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nail Art Awareness 2025: ಅಕ್ರಾಲಿಕ್‌ ನೇಲ್‌ ಆರ್ಟ್ ಪ್ರಿಯರೇ ಜಾಗೃತರಾಗಿ!

Nail Art Awareness 2025: ನೇಲ್‌ ಆರ್ಟ್ ಪ್ರಿಯರೇ, ಪದೇ ಪದೇ ಅಕ್ರಾಲಿಕ್‌ ನೇಲ್‌ ಆರ್ಟ್ ಮಾಡಿಸುವುದನ್ನು ಆದಷ್ಟೂ ಕಡಿಮೆ ಮಾಡಿ. ಜಾಗೃತರಾಗಿ. ಇಲ್ಲವಾದಲ್ಲಿ, ಮುಂದೊಮ್ಮೆ ಈ ಕ್ರೇಝ್‌ ಸ್ಕಿನ್‌ ಕ್ಯಾನ್ಸರ್‌ಗೆ ದಾರಿ ಮಾಡಕೊಡಬಹುದು ಎನ್ನುತ್ತಿದ್ದಾರೆ ವೈದ್ಯರು. ಈ ಕುರಿತಂತೆ ಅವರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್‌
1/5

ಅಕ್ರಾಲಿಕ್‌ ನೇಲ್‌ ಆರ್ಟ್ ಪ್ರಿಯರೇ ಜಾಗೃತಗೊಳ್ಳಿ! ಹಾಗೆನ್ನುತ್ತಿದ್ದಾರೆ ವೈದ್ಯರು. ಹೌದು, ಇದಕ್ಕೆ ಪೂರಕ ಎಂಬಂತೆ, ಇತ್ತೀಚಿನ ವಿದೇಶಿ ವರದಿಯೊಂದು ಈ ರೀತಿ ವರದಿ ಮಾಡಿದೆ. ಪದೇ ಪದೇ ಉಗುರುಗಳಿಗೆ ಅಕ್ರಾಲಿಕ್‌ ನೇಲ್‌ ಆರ್ಟ್ ಮಾಡಿಸುವವರಿಗೆ ಸ್ಕಿನ್‌ ಕ್ಯಾನ್ಸರ್‌ ಬರುವ ಸಾಧ್ಯತೆಗಳು ಹೆಚ್ಚು ಎಂದಿದೆ. ಈ ವರದಿ ಬ್ಯೂಟಿ ಪ್ರಿಯ ನೇಲ್‌ ಆರ್ಟ್ ಪ್ರಿಯರನ್ನು ಬೆಚ್ಚಿ ಬಿಳಿಸಿದೆ.

2/5

ವರದಿಯಲ್ಲಿ ಏನಿದೆ?

ವರದಿಯನ್ನು ಸಿಂಪಲ್‌ ಆಗಿ ವಿವರಿಸುವುದಾದಲ್ಲಿ, ಒಂದು ದಿನವೂ ಅಂದರೇ ಕೊಂಚವೂ ಗ್ಯಾಪ್‌ ಕೊಡದೇ ಸದಾ ಉಗುರುಗಳ ಮೇಲೆ ಅಕ್ರಾಲಿಕ್‌ ನೇಲ್‌ ಆರ್ಟ್ ಮಾಡಿಸುವವರಿಗೆ ಮಾತ್ರ ಸ್ಕಿನ್‌ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಂತೆ.

3/5

ಇದಕ್ಕೆ ನಿಖರ ಕಾರಣವೇನು?

ನೈಜ ಉಗುರಿನ ಮೇಲೆ ಒಂದು ಸ್ವಲ್ಪ ದಿನವೂ ಗ್ಯಾಪ್‌ ಕೊಡದೇ, ಅಕ್ರಾಲಿಕ್‌ ನೇಲ್‌ ಉಗುರುಗಳನ್ನು ಕೆಮಿಕಲ್‌ ಬಳಸಿ ಅಂಟಿಸುವುದು, ಎಂತಹವರ ಉಗುರನ್ನು ಕೂಡ ನಿಸ್ತೇಜ ಮಾಡಬಹುದು. ಇನ್ನು, ಎಲ್ಲದಕ್ಕಿಂತ ಹೆಚ್ಚಾಗಿ, ಈ ಉಗುರುಗಳಿಗೆ ನೇಲ್‌ ಆರ್ಟ್ ಮಾಡಿ, ಅಂಟಿಸಿದಾಗ ಬಿದ್ದು ಹೋಗದಿರುವಂತೆ ಪರ್ಮನೆಂಟ್‌ ಆಗಿ ಸ್ಟಿಕ್‌ ಮಾಡುವುದಕ್ಕೊಸ್ಕರ, ಬೆರಳುಗಳನ್ನು ಬಾಕ್ಸ್‌ನಂತಹ ಮೆಷಿನೊಳಗೆ ಇರಿಸಿ, ಉಗುರುಗಳಿಗೆ ಯುವಿಎ ಲೈಟ್‌ ಕಿರಣಗಳನ್ನು ಹಾಯಿಸುವುದಿದೇಯಲ್ಲ! ಅದು ತುಂಬಾ ಅಪಾಯಕಾರಿ ಎಂಬುದು ಸಾಬೀತಾಗಿದೆ ಎನ್ನುತ್ತಾರೆ ವೈದ್ಯರು.

4/5

ನೇಲ್‌ ಆರ್ಟ್ ಕ್ರೇಝ್‌ ಹೆಚ್ಚಾದಲ್ಲಿ ಅಪಾಯ ಖಂಡಿತಾ

ಈ ನೇಲ್‌ ಆರ್ಟ್ ರುಟಿನ್‌ಗೆ ಪದೇ ಪದೇ ಒಳಗಾದಾಗ ಯುವಿಎ ಕಿರಣಗಳು ಹಾಯ್ದಾಗ ಚರ್ಮದಲ್ಲಿನ ಡಿಎನ್‌ಎ ಸ್ಕಿನ್‌ ಜೀವಕೋಶಗಳು ಡ್ಯಾಮೇಜ್‌ ಆಗಬಹುದು. ಪರಿಣಾಮ, ಮುಂದೊಮ್ಮೆ ಇದು ಸ್ಕಿನ್‌ ಕ್ಯಾನ್ಸರ್‌ಗೆ ನಾಂದಿಯಾಡಬಹುದು ಎನ್ನುತ್ತಾರೆ ಚರ್ಮ ವೈದ್ಯರು.

5/5

ಪರ್ಯಾಯವಾಗಿ ನೇಲ್‌ ಆರ್ಟ್ ಪ್ರಿಯರು ಮಾಡಬೇಕಾದ್ದೇನು?

  • ಆದಷ್ಟೂ ನೈಜ ಉಗುರುಗಳನ್ನು ಕಾಯ್ಡುಕೊಳ್ಳಿ.
  • ನೇಲ್‌ ಪಾಲಿಶ್‌ ಬಳಸಿ, ನೇಲ್‌ ಆರ್ಟ್ ಮಾಡಿಸಿ.
  • ಅಗತ್ಯವಿದ್ದಾಗ ಮಾತ್ರ ಪ್ರೊಫೆಷನಲ್‌ ನೇಲ್‌ಆರ್ಟ್ ಮಾಡಿಸಿ.
  • ಕಳಪೆ ಗುಣಮಟ್ಟದ ನೇಲ್‌ ಸ್ಟಿಕ್ಕರ್ಸ್ ಬಳಸಬೇಡಿ.
  • ಪದೇ ಪದೇ ನೇಲ್‌ ಆರ್ಟ್ ಮಾಡಿಸುವುದನ್ನು ಅವಾಯ್ಡ್ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author