ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri Yellow Colour Fashion Tips 2025: ಹೀಗಿರಲಿ ನವರಾತ್ರಿಯ ಹಳದಿ ಬಣ್ಣದ ಸ್ಟೈಲಿಂಗ್!

Navaratri Yellow Colour Fashion Tips 2025: ಹಳದಿ ವರ್ಣ ಖುಷಿ ಹಾಗೂ ಆಶಾಭಾವನೆ ಮೂಡಿಸುವ ಕಲರ್. ಈ ಕಲರ್‌ನ ಎಥ್ನಿಕ್ ಲುಕ್ ಹೇಗೆ? ಸ್ಟೈಲಿಂಗ್ ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

ಚಿತ್ರಗಳು: ಪ್ರಿಯಾಂಕಾ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹಳದಿ ಬಣ್ಣ ನೋಡುಗರಿಗೆ ಬ್ರೈಟ್ ಆಗಿ ಕಾಣಿಸುವುದು ಮಾತ್ರವಲ್ಲ, ಧರಿಸಿದವರನ್ನು ಆಕರ್ಷಕವಾಗಿ ಬಿಂಬಿಸುತ್ತದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್. ಹೌದು, ನವರಾತ್ರಿಯಲ್ಲಿ (Navaratri Yellow Colour Fashion Tips 2025) ಹಳದಿ ವರ್ಣದ ಎಥ್ನಿಕ್‌ವೇರ್‌ಗಳು ಹಾಗೂ ಸೀರೆಗಳು ಧರಿಸುವವರ ಸಂತೋಷವನ್ನು ಹೆಚ್ಚಿಸುತ್ತವಂತೆ. ಈ ಶೇಡ್ ಜೀವನದಲ್ಲಿ ಆಶಾಭಾವನೆ ಮೂಡಿಸುವ ಕಲರ್ ಎನ್ನಲಾಗುತ್ತದೆ.ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಹಳದಿ ಬಣ್ಣದಲ್ಲಿ ನಾನಾ ಶೇಡ್‌ಗಳ ಡಿಸೈನರ್‌ವೇರ್ ಹಾಗೂ ಸೀರೆಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ.

Navaratri Yellow Colour Fashion Tips 2025 1

ಚಾಲ್ತಿಯಲ್ಲಿರುವ ಹಳದಿಯ ನಾನಾ ಶೇಡ್‌ಗಳು

ಲೆಮೆನ್ ಯೆಲ್ಲೋ, ಸನ್ ಕಲರ್, ತಿಳಿ ಹಳದಿ, ಗಾಢ ಹಳದಿ, ಮಸ್ಟರ್ಡ್ ಯೆಲ್ಲೋ ಹೀಗೆ ದೇಸಿ ವರ್ಣಗಳ ಜತೆಗೆ ಇದೀಗ ಇಂಗ್ಲೀಷ್ ಯೆಲ್ಲೋ ಕಲರ್‌ಗಳು ಸೇರಿಕೊಂಡಿವೆ. ಅಷ್ಟೇಕೆ! ಇವು ಭಾರತೀಯ ಉಡುಪಿಗೂ ನುಸುಳಿವೆ. ಇದೀಗ ಜೆನ್ ಜಿ ಹುಡುಗಿಯರಿಗೆಂದೇ ನಾನಾ ಹಳದಿಯ ಕಲರ್‌ನಲ್ಲಿ ಪ್ರಯೋಗಾತ್ಮಕ ಸೆಮಿ ಎಥ್ನಿಕ್ ಡಿಸೈನರ್‌ವೇರ್‌ಗಳು ಬಂದಿವೆ. ಉದಾಹರಣೆಗೆ., ಶರಾರ, ಗರಾರ, ಜಂಪ್ ಸೂಟ್ನಂತೆ ಕಾಣುವ ಡಿಸೈನ್‌ನ ಮ್ಯಾಕ್ಸಿ, ಮಾನೋಕ್ರೋಮ್ ಕೋ ಆರ್ಡ್ ಸೆಟ್, ಕ್ರಾಪ್ ಟಾಪ್‌ನಂತೆ ಕಾಣುವ ಲೆಹೆಂಗಾ ಸೆಟ್ ಹಾಗೂ ಸ್ಕರ್ಟ್ ಸೆಟ್ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Navaratri Yellow Colour Fashion Tips 2025 2

ಯೆಲ್ಲೋ ಸೀರೆಯ ಸ್ಟೈಲಿಂಗ್

ಟ್ರೆಡಿಷನಲ್ ಲುಕ್ ಬೇಕಾದದಲ್ಲಿ ರೇಷ್ಮೆ ಸೀರೆಯ ಆಯ್ಕೆ ಉತ್ತಮ. ಕಾಂಟ್ರಾಸ್ಟ್ ಬ್ಲೌಸ್ ಮ್ಯಾಚ್ ಬೇಡ. ಯಾವುದೇ ಫ್ಯಾಬ್ರಿಕ್‌ನ ಸೀರೆಯ ಅಂದ ಡ್ರೇಪಿಂಗ್ ಮೇಲೆ ನಿರ್ಧರಿತವಾಗುತ್ತದೆ. ಇನ್ನು ಇದೀಗ ಬಿಗ್ ಬಾರ್ಡರ್ ಯೆಲ್ಲೋ ಸೀರೆಗಳು ಕೂಡ ಟ್ರೆಂಡ್‌ನಲ್ಲಿವೆ. ಅವುಗಳ ಪ್ರಿಂಟ್ಸ್‌ಗೆ ತಕ್ಕಂತೆ ಮೇಕಪ್, ಹೇರ್‌ಸ್ಟೈಲಿಂಗ್ ಮಾಡಬೇಕು.

Navaratri Yellow Colour Fashion Tips 2025 3

ಹಳದಿಯ ಡಿಸೈನರ್‌ವೇರ್‌ಗಳು

ಇನ್ನು ಯುವತಿಯರಿಗೆ ಲೆಕ್ಕವಿಲ್ಲದಷ್ಟು ಡಿಸೈನ್‌ನ ಹಳದಿ ಶೇಡ್‌ನ ಲೆಹೆಂಗಾ-ಚೋಲಿ, ಗಾಗ್ರ, ಕುರ್ತಾ, ಸಲ್ವಾರ್, ಕಮೀಝ್, ಅನಾರ್ಕಲಿ, ಚೂಡಿದಾರ್ ಸೆಟ್‌ಗಳು ಬಂದಿದ್ದು, ಅವುಗಳ ಗ್ರ್ಯಾಂಡ್ ಲುಕ್‌ಗೆ ತಕ್ಕಂತೆ ಸಿಂಗರಿಸಿಕೊಳ್ಳಬಹುದು.

  • ಸೀರೆಯಾದಲ್ಲಿ ಆದಷ್ಟೂ ಟ್ರೆಡಿಷನಲ್ ಲುಕ್ ನೀಡಿ
  • ಶಿಫಾನ್, ಜಾರ್ಜೆಟ್ ಸೀರೆಗಳಾದಲ್ಲಿ ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು.
  • ಡಿಸೈನರ್‌ವೇರ್‌ಗಳು ಗ್ರ್ಯಾಂಡ್ ಆಗಿರುವುದರಿಂದ ಮೇಕಪ್ ಆದಷ್ಟೂ ಟಿಪಿಕಲ್ ಲುಕ್ ನೀಡಲಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Navaratri Fashion 2025: ನವರಾತ್ರಿಯ ಸಂಭ್ರಮಕ್ಕೆ ಜತೆಯಾಗಲು ಬಂದ ಎಥ್ನಿಕ್ ಗೌನ್ಸ್

ಶೀಲಾ ಸಿ ಶೆಟ್ಟಿ

View all posts by this author