Navaratri Fashion 2025: ನವರಾತ್ರಿಯ ಸಂಭ್ರಮಕ್ಕೆ ಜತೆಯಾಗಲು ಬಂದ ಎಥ್ನಿಕ್ ಗೌನ್ಸ್
Navaratri Fashion 2025: ನವರಾತ್ರಿಯ ಸಂಭ್ರಮಕ್ಕೆ ಸಾಥ್ ನೀಡಲು ಬಂದಿರುವ ಎಥ್ನಿಕ್ ಗೌನ್ಗಳು ಸೆಲೆಬ್ರೆಟಿಗಳ ವಾರ್ಡ್ರೋಬ್ ಸೇರಿರುವುದು ಮಾತ್ರವಲ್ಲ, ಪಕ್ಕಾ ಸಂಪ್ರದಾಯ ಹುಡುಗಿಯರಿಗೂ ಪ್ರಿಯವಾಗತೊಡಗಿವೆ. ಯಾವ್ಯಾವ ಬಗೆಯವು ಬಂದಿವೆ? ಯಾವುದಕ್ಕೆ ಬೇಡಿಕೆ ಹೆಚ್ಚು? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ತಿಳಿಸಿದ್ದಾರೆ.

ಚಿತ್ರಕೃಪೆ: ಸೆಲೆಬ್ರೆಟಿ ಡಿಸೈನರ್ ಸಿಂಧೂರೆಡ್ಡಿ ಅಫಿಷಿಯಲ್ -


ನವರಾತ್ರಿಯ ಸಂಭ್ರಮಕ್ಕೆ ಜತೆಯಾಗಲು ನಾನಾ ಡಿಸೈನ್ಗಳ ಕಲರ್ಗಳ ಎಥ್ನಿಕ್ ಗೌನ್ಗಳು ಫ್ಯಾಷನ್ ಲೋಕಕ್ಕೆ ಆಗಮಿಸಿವೆ.

ಎಥ್ನಿಕ್ ಗೌನ್ಗಳ ಮನಮೋಹಕ ವಿನ್ಯಾಸ
ಇಂದು ಹೆಚ್ಚಾಗಿ ಫ್ಯಾಷನ್ನಲ್ಲಿರುವ ಎಥ್ನಿಕ್ ಗೌನ್ಗಳೆಂದರೇ, ಸೆಲ್ವಾರ್ ಶೈಲಿಯ ಆ್ಯಂಕಲ್ ಲೆಂಥ್ ಗೌನ್, ಫುಲ್ ಫ್ರಿಲ್ ಗೌನ್, ಅನಾರ್ಕಲಿ ಸ್ಟೈಲ್ ಗೌನ್, ಟ್ರೆಡಿಷನಲ್ ಮಧುಬಾಲ ಡಿಸೈನ್, ನೆಟ್ಟೆಡ್, ಬ್ರಾಸೋ, ಎಂಬ್ರಾಯ್ಡರಿ, ಪಾರ್ಟಿವೇರ್ ಹೀಗೆ ನಾನಾ ಬಗೆಯ ಡಿಸೈನರ್ ವಿನ್ಯಾಸಗಳ ಎಥ್ನಿಕ್ ಗೌನ್ಗಳು ಬಿಡುಗಡೆಗೊಂಡಿವೆ.

ದೇಸಿ ಗೌನ್ ಕಮಾಲ್
ಗೌನ್ ಎಂದಾಕ್ಷಣ ಕೊಂಚ ಗ್ಲಾಮರ್ ಎಂಬ ಮನೋಭಾವನೆ ಎಲ್ಲರಲ್ಲೂ ಇದೆ. ಹಾಗೆಂದು ದೇಸಿ ಗೌನ್ಗಳಲ್ಲಿ ಗ್ಲಾಮರ್ ಇಲ್ಲವೆಂದೆನಿಲ್ಲ. ಎಕ್ಸ್ಪೋಸಿಂಗ್ಗೆ ಕಡಿಮೆ ಅವಕಾಶವಿದ್ದರೂ, ಒಂದಿಷ್ಟು ಬದಲಾವಣೆ ಹಾಗೂ ತಮ್ಮತನವನ್ನು ಅಳವಡಿಸಿಕೊಂಡು ದೇಸಿ ಲುಕ್ ಪಡೆದಿವೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಸಿಂಧೂ ರೆಡ್ಡಿ. ಮಿಕ್ಸ್ ಅಂಡ್ ಮ್ಯಾಚ್, ಕಾಂಟ್ರಾಸ್ಟ್ ಬಣ್ಣ ಹಾಗೂ ಕಾಂಟೆಪರರಿ, ಸೆಮಿ ಎಥ್ನಿಕ್ ಶೈಲಿಗಳು ಸೂಕ್ಷ್ಮ ರೀತಿಯಲ್ಲಿ ಸಮ್ಮಿಲನಗೊಂಡು ನಮ್ಮತನಕ್ಕೆ ಒಗ್ಗಿಕೊಂಡಿವೆ. ಹಾಗಾಗಿ ಎಥ್ನಿಕ್ ಗೌನ್ಗಳ ವಿನ್ಯಾಸ ಕಾಲೇಜು ಹುಡುಗಿಯರಿಗೆ ಮಾತ್ರವಲ್ಲ, ಮಹಿಳೆಯರಿಗೂ ಪ್ರಿಯವಾಗತೊಡಗಿವೆ. ಇವು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತಿರುವುದರಿಂದ ಇಂತಹದ್ದೇ ವಯಸ್ಸಿನವರು ಧರಿಸಬೇಕು ಎಂಬ ಭೇದ ಭಾವವಿಲ್ಲದೆ ಎಲ್ಲರಿಗೂ ಇಷ್ಟವಾಗತೊಡಗಿವೆ. ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾಡೆಲ್ ಸಿನಿ.

ಸ್ಪೆಷಲ್ ಡಿಸೈನರ್ವೇರ್
ಮೆಗಾ ಸ್ಲೀವ್, ಸ್ಲೀವ್ಲೆಸ್, ಅಗಲವಾದ ನೆಕ್ ಲೈನ್, ಡಿಸೈನರ್ ನೆಕ್ಲೈನ್ ಇರುವ ಎಥ್ನಿಕ್ ಗೌನ್ಗಳು ಸುಂದರವಾಗಿ ಕಾಣುತ್ತವೆ. ಗ್ರ್ಯಾಂಡ್ ವಿನ್ಯಾಸದವು ನವರಾತ್ರಿಯ ಫ್ಯಾಷನ್ನಲ್ಲಿ ಹೆಚ್ಚು ಬೇಡಿಕೆಯಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಪರ್ಸನಾಲಿಟಿಗೆ ತಕ್ಕಂತಿರಲಿ ಎಥ್ನಿಕ್ ಗೌನ್
- ನೀವು ಧರಿಸುವ ಗೌನ್ಗಳು ನಿಮ್ಮ ಮೈಮಾಟ ಹಾಗೂ ವ್ಯಕ್ತಿತ್ವವನ್ನೇ ಬದಲಿಸಬಲ್ಲವು. ನಿಮಗೆ ಹೊಂದುವಂತಹ ಡಿಸೈನ್ನವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
- ತೆಳ್ಳಗಿರುವವರಿಗೆ ಎಲ್ಲಾ ವಿನ್ಯಾಸದವು ಒಪ್ಪುತ್ತವೆ.
- ಕಟ್ಟುಮಸ್ತಾಗಿ ಉದ್ದಗಿರುವವರಿಗೆ ಸಾಫ್ಟ್ ಮೇಟಿರಿಯಲ್ನ ಗೌನ್ಗಳು ಬೆಸ್ಟ್.
- ದಪ್ಪಗೆ ಹಾಗೂ ಕುಳ್ಳಗಿರುವವರು ಆದಷ್ಟೂ ಸಿಂಪಲ್ ಫ್ಲೋಯಿಂಗ್ ಫ್ಯಾಬ್ರಿಕ್ನದ್ದನ್ನು ಆಯ್ಕೆ ಮಾಡಬೇಕು.