Saree Fashion 2025: ಟ್ರೆಂಟ್‌ಗೆ ಮರಳಿದ ನಟಿ ಅಂಕಿತಾ ಲೊಖಂಡೆ ಉಟ್ಟ ಡಿಸೈನರ್ ಬಂಧೇಜ್ ಸೀರೆ
Saree Fashion 2025: ಬಾಲಿವುಡ್ ನಟಿ ಅಂಕಿತಾ ಲೊಖಂಡೆ ಉಟ್ಟಿರುವ ಡಿಸೈನರ್ ಬಂಧೇಜ್/ಬಂಧನಿ ಸೀರೆ ಇದೀಗ ಹೊಸ ರೂಪದಲ್ಲಿ ಹಾಗೂ ವಿನ್ಯಾಸದಲ್ಲಿ ಮತ್ತೊಮ್ಮೆ ಟ್ರೆಂಡಿಯಾಗಿದೆ. ನಯಾ ರೂಪದಲ್ಲಿ ಆಗಮಿಸಿರುವುದು ಸೀರೆ ಪ್ರಿಯರನ್ನು ಸೆಳೆಯಲು ಕಾರಣವಾಗಿದೆ. ಇದ್ಯಾವ ಬಗೆಯ ಸೀರೆ? ಇಲ್ಲಿದೆ ಡಿಟೇಲ್ಸ್.
ಈ ಬಾರಿಯ ಫೆಸ್ಟೀವ್ ಸೀಸನ್‌ನಲ್ಲಿ ಡಿಸೈನರ್ ಬಂಧೇಜ್/ಬಂಧನಿ ಸೀರೆಗಳು ಹೊಸ ರೂಪದಲ್ಲಿ ಸೀರೆ ಲೋಕಕ್ಕೆ ಎಂಟ್ರಿ ನೀಡಿವೆ. ಕೇವಲ ಉತ್ತರ ಭಾರತದ ಮಹಿಳೆಯರ ಫೇವರೇಟ್ ಲಿಸ್ಟ್‌ನಲ್ಲಿದ್ದ, ಈ ಸೀರೆಗಳು ಇದೀಗ ದಕ್ಷಿಣ ಭಾರತದ ಮಹಿಳೆಯರಿಗೂ ಪ್ರಿಯವಾಗುವಂತಹ ವಿನ್ಯಾಸದಲ್ಲಿ ಮಿಕ್ಸ್ ಮ್ಯಾಚ್‌ಗೊಂಡು ಆಗಮಿಸಿವೆ. ಈ ಸೀರೆಗಳನ್ನು ಆಡು ಭಾಷೆಯಲ್ಲಿ ಬಾಂದನಿ ಸೀರೆ ಎಂದೂ ಕರೆಯಲಾಗುತ್ತದೆ.
ಟ್ರೆಂಡಿಯಾದ ಅಂಕಿತಾ ಉಟ್ಟ ಸೀರೆ
ಅಂದಹಾಗೆ, ಗಣೇಶ ಚತುರ್ಥಿ ಸೆಲೆಬ್ರೇಷನ್ ಅಂಗವಾಗಿ ಬಾಲಿವುಡ್ ನಟಿ ಅಂಕಿತಾ ಲೊಖಂಡೆ ಉಟ್ಟ, ಈ ಡಿಸೈನರ್ ಬಂಧೇಜ್/ಬಂಧನಿ ಸೀರೆ ಇದೀಗ ಬಂಧನಿ ಸೀರೆ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದೆ. ಸೈಡಿಗೆ ಸರಿದಿದ್ದ ಈ ಸೀರೆಯ ಫ್ಯಾಷನನ್ನು ಮರಳುವಂತೆ ಮಾಡಿದೆ.
ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಸೀರೆ
ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಆನ್‌ಲೈನ್‌ನಲ್ಲಿ ಈ ಸೀರೆಯ ಕೆಟಗರಿಗೆ ಬರುವ ನಾನಾ ಬಗೆಯ ಡಿಸೈನರ್ ಬಂಧನಿ ಸೀರೆಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು. ಒಮ್ಮೆ ಯಾವುದೇ ಸಿನಿಮಾ ತಾರೆ ಉಟ್ಟು, ಅತ್ಯಾಕರ್ಷಕವಾಗಿ ಕಾಣಿಸಿಕೊಂಡರೇ ಸಾಕು, ಆ ಸೀರೆ ಟ್ರೆಂಡಿಯಾಗುವುದು ಗ್ಯಾರಂಟಿ! ಎನ್ನುವ ಸೀರೆ ಸ್ಪೆಷಲಿಸ್ಟ್ ರಾಕಿ ಹೇಳುವಂತೆ ಬಂಧನಿ ಸೀರೆಗಳು ಎಂತಹವರಿಗೂ ಗ್ರ್ಯಾಂಡ್ ಲುಕ್ ನೀಡುತ್ತವೆ. ಅಲ್ಲದೇ, ನೋಡಲು ಅತ್ಯಾಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ.
ಬಂಧನಿ/ ಬಂಧೇಜ್ ಸೀರೆಯ ವಿಶೇಷತೆ
ಬಂಧೇಜ್ ಸೀರೆಯೆಂದು ಕೂಡ ಕರೆಯಲಾಗುವ ಬಂಧನಿ (ಬಾಂಧನಿ) ಸೀರೆ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ ಅತಿ ಹೆಚ್ಚಾಗಿ ತಯಾರಾಗುತ್ತವೆ. ಅಲ್ಲದೇ, ಈ ಸೀರೆ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ರಾಜ ಮಹಾರಾಜರ ಕಾಲದಿಂದಲೂ ಪ್ರಚಲಿತದಲ್ಲಿದೆ ಎನ್ನಲಾಗಿದೆ.
ವೆರೈಟಿ ಬಂಧನಿ ಸೀರೆಗಳು
ಇತ್ತೀಚೆಗೆ ಸಿಲ್ಕ್ ಬಂಧನಿ, ಜಾರ್ಜೆಟ್ ಬಂಧನಿ, ಶಿಫಾನ್ ಬಂಧನಿ, ಕಾಟನ್ ಬಂಧನಿ ಸೇರಿದಂತೆ ನಾನಾ ಫ್ಯಾಬ್ರಿಕ್‌ನ ಬಂಧನಿ ಸೀರೆಗಳು ಟ್ರೆಂಡಿಯಾಗಿವೆ. ಟೈ ಹಾಗೂ ಡೈ ಮಾಡಿದ ಈ ಸೀರೆಗಳು, ಇದೀಗ ದಕ್ಷಿಣ ಭಾರತದ ಮಾನಿನಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನುತ್ತಾರೆ ಸೀರೆ ಡಿಸೈನರ್ಸ್ ರಕ್ಷಾ.