Spa Trend 2025: ಉದ್ಯಾನನಗರಿಯಲ್ಲಿ ಹೆಚ್ಚಾದ ಯೂನಿಸೆಕ್ಸ್ ಸ್ಪಾಗಳು
Spa Trend 2025: ಸಮೀಕ್ಷೆಯೊಂದರ ಪ್ರಕಾರ, ಉದ್ಯಾನನಗರಿಯಲ್ಲಿ ಯೂನಿಸೆಕ್ಸ್ ಸ್ಪಾಗಳು ಮೊದಲಿಗಿಂತ ಹೆಚ್ಚಾಗಿವೆ. ಹುಡುಗ-ಹುಡುಗಿಯರು ಮಾತ್ರವಲ್ಲ, ಫ್ಯಾಮಿಲಿ ಸೇರಿದಂತೆ, ಬಹುತೇಕರು ಬ್ಯೂಟಿ ಪಾರ್ಲರ್ ಇಲ್ಲವೇ ಸಲೂನ್ ಬದಲು ಇವುಗಳ ಸರ್ವೀಸ್ ಪಡೆಯಲಾರಂಭಿಸಿರುವುದು ಸ್ಪಾಗಳ ವ್ಯಾಪ್ತಿ ವಿಸ್ತರಿಸಲು ಕಾರಣವಾಗಿದೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.
ಉದ್ಯಾನನಗರಿ ಬೆಂಗಳೂರಿನಲ್ಲಿ ಯೂನಿಸೆಕ್ಸ್ ಸ್ಪಾಗಳ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ಹೌದು. ಒಂದೇ ಸೂರಿನಡಿ ಸ್ತ್ರೀಯರು ಹಾಗೂ ಪುರುಷರು ಪಡೆಯಬಹುದಾದ ನಾನಾ ಬ್ಯೂಟಿ ಥೆರಪಿ ಸೌಲಭ್ಯಗಳನ್ನು ಹೊಂದಿದ ಯೂನಿಸೆಕ್ಸ್ ಸ್ಪಾಗಳು ತಮ್ಮ ವ್ಯಾಪ್ತಿಯನ್ನು ಬರಬರುತ್ತಾ ವಿಸ್ತರಿಸಿಕೊಳ್ಳುತ್ತಿವೆ.
ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿ
ಬ್ಯೂಟಿ ವಿಮರ್ಶಕರ ಪ್ರಕಾರ, ಮೊದಲೆಲ್ಲಾ ಸ್ಪಾ ಎಂದಾಕ್ಷಣ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿರುತ್ತಿದ್ದವು. ಆದರೆ, ಈಗ ಹಾಗಿಲ್ಲ, ಕಂಪ್ಲೀಟ್ ಟ್ರೆಂಡ್ ಬದಲಾಗಿದೆ. ಹುಡುಗರು ಹಾಗೂ ಹುಡುಗಿಯರು ಇಬ್ಬರು ಒಂದೇ ಸೂರಿನಡಿ ಸ್ಪಾ ಟ್ರೀಟ್‌ಮೆಂಟ್ ಪಡೆಯುವ ವ್ಯವಸ್ಥೆ ಹೆಚ್ಚಾಗಿದೆ. ಇದು ಸ್ಪಾಗಳ ಹೊಸ ಟ್ರೆಂಡ್ ಮಾತ್ರವಲ್ಲ, ಬಿಸ್‌ನೆಸ್ ಟೆಕ್ನಿಕ್ ಎನ್ನಬಹುದು. ಹಾಗೆಂದು ರೆಸಾರ್ಟ್‌ಗಳಲ್ಲಿ ದೊರೆಯುವ ವ್ಯವಸ್ಥೆ ಇಲ್ಲಿ ದೊರೆಯುವುದಿಲ್ಲ. ಲಿಮಿಟೆಡ್ ಆಗಿರುತ್ತವೆ, ಹೇರ್ ಸ್ಪಾದಿಂದಿಡಿದು ಚಿಕ್ಕ ಪುಟ್ಟ ಐಬ್ರೋ ಶೇಪಿಂಗ್ ತನಕವೂ ಅಪಾಯಿಂಟ್ಮೆಂಟ್ ಮುಖಾಂತರ ಇವು ಕಾರ್ಯನಿರ್ವಹಿಸುತ್ತವೆ. ಆದಷ್ಟೂ ಇರುವ ಜಾಗದಲ್ಲೆ ಸ್ಪಾಗಳ ಟ್ರೀಟ್ಮೆಂಟ್ ನೀಡಲಾಗುತ್ತದೆ. ಸೀಸನ್‌ಗೆ ತಕ್ಕಂತೆ ಪ್ಯಾಕೇಜ್ ಆಧಾರಿತ ರಿಯಾಯಿತಿ-ವಿನಾಯಿತಿ ಸೌಲಭ್ಯ ಕಲ್ಪಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಇವು ಯಶಸ್ವಿಯಾಗುತ್ತಿವೆ. ಇವನ್ನು ಸಲೂನ್‌ನ ಡೆವಲಪ್ಡ್ ವರ್ಷನ್ಎನ್ನಬಹುದು.
ಸೀಸನ್‌ಗೆ ತಕ್ಕಂತೆ ಡಿಸ್ಕೌಂಟ್ಸ್ & ಆಫರ್ಸ್‌ಗಳ ಸುರಿಮಳೆ
ಒಮ್ಮೆ ಸ್ಪಾಗೆ ಭೇಟಿ ಇಟ್ಟರೂ ಸಾಕು, ಡಿಸ್ಕೌಂಟ್ಸ್ ಹಾಗೂ ಆಫರ್ ಗಿಫ್ಟ್ ಕೂಪನ್‌ಗಳನ್ನು ನೀಡುತ್ತವೆ. ಕೆಲವೊಮ್ಮೆ ಪರ್ಮನೆಂಟ್ ಮೆಂಬರ್‌ಶಿಪ್ ಪಡೆದಿರುವವರಿಗೆ ಮಿನಿಮಮ್ ಪರ್ಸಂಟೇಜ್ ವಿನಾಯತಿಯನ್ನು ನೀಡುತ್ತವೆ. ಇನ್ನು ವೆಡ್ಡಿಂಗ್ ಹಾಗೂ ಫೆಸ್ಟಿವ್ ಸೀಸನ್‌ನಲ್ಲಿ ಪ್ಯಾಕೆಜ್ ಟ್ರೀಟ್ಮೆಂಟ್ ಆಧಾರದ ಮೇಲೆ ಒಂದಷ್ಟು ಡಿಸ್ಕೌಂಟ್ಸ್ ಕೂಡ ನೀಡುತ್ತವೆ.
ಟ್ರೆಂಡಿಯಾದ ಸ್ಪಾ ಟ್ರೀಟ್‌ಮೆಂಟ್
ಈ ಮೊದಲು ಶ್ರೀಮಂತರು, ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ಯೂನಿಸೆಕ್ಸ್ ಸ್ಪಾಗಳು ಇದೀಗ ಮಿಡಲ್ ಕ್ಲಾಸ್‌ನವರಿಗೂ ಕೈಗೆಟಕುತ್ತಿದೆ. ಇದೀಗ ಸ್ಪಾ ಟ್ರೀಟ್‌ಮೆಂಟ್‌ಗಳನ್ನು ಪಡೆಯುವಲ್ಲಿಇವರು ಕೂಡ ಮುಂದಿದ್ದಾರೆ ಎನ್ನುತ್ತಾರೆ ಸ್ಪಾ ಅಸೋಸಿಯೇಷನ್‌ನ ವಕ್ತಾರರು.
ಸ್ಪಾಗಳಿಗೆ ಹೋಗುವ ಮುನ್ನ
- ಸ್ಪಾಗಳಿಗೆ ಹೋಗುವ ಮುನ್ನ ಅದು ಲೈಸೆನ್ಸ್ ಪಡೆದ ಸ್ಪಾ ಎಂಬುದು ತಿಳಿದಿರಲಿ. * ಯೂನಿಸೆಕ್ಸ್ ಸ್ಪಾ ಗಳಿಗೆ ನೀವು ಫ್ಯಾಮಿಲಿ ಸಮೇತ ತೆರಳಬಹುದು.
- ಸೀಸನ್‌ಗೆ ತಕ್ಕಂತೆ ಸ್ಪಾ ಟ್ರೀಟ್‌ಮೆಂಟ್ ಪಡೆಯಬಹುದು.
- ಹೋಗುವ ಮುನ್ನ ಆದಷ್ಟೂ ಅಲ್ಲಿನ ಟ್ರೀಟ್‌ಮೆಂಟ್ ಹಾಗೂ ದರಗಳ ಬಗ್ಗೆ ತಿಳಿದಿರಲಿ.
- ಬ್ಯೂಟಿ ಪಾರ್ಲರ್‌ಗಳಿಗಿಂತ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ ಎಂಬುದು ತಿಳಿದಿರಲಿ.