Star Saree Fashion 2025: ಫಾಲೋವರ್‌ಗಳನ್ನು ಆಕರ್ಷಿಸಿದ ನಟಿ ರುಹಾನಿ ಶೆಟ್ಟಿಯ ರೇಷ್ಮೆ ಸೀರೆ
Star Saree Fashion 2025: ನಟಿ ರುಹಾನಿ ಶೆಟ್ಟಿ ಉಟ್ಟಿದ್ದ ರೇಷ್ಮೆ ಸೀರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸೀರೆ ಪ್ರಿಯ ಮಾನಿನಿಯರನ್ನು ಸೆಳೆದಿದೆ. ಅವರ ಈ ಟ್ರೆಡಿಷನಲ್ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರು ಹೇಳುವುದೇನು? ಇವರಂತೆ ಸ್ಟೈಲಿಂಗ್‌ಗೆ ಪಾಲಿಸಬೇಕಾದ ಟಿಪ್ಸ್ ಏನು? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ನಟಿ ರುಹಾನಿ ಶೆಟ್ಟಿಯ ಟ್ರೆಡಿಷನಲ್ ಸೀರೆ ಲುಕ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸೀರೆ ಪ್ರಿಯ ಮಾನಿನಿಯರನ್ನು ಆಕರ್ಷಿಸಿದೆ. ಹೌದು, ಕನ್ನಡವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ ನಾ ನಿನ್ನ ಬಿಡಲಾರೆ ಚಿತ್ರೀಕರಣದಲ್ಲಿ ರುಹಾನಿ ಉಟ್ಟಿದ್ದ, ಈ ಟ್ರೆಡಿಷನಲ್ ರೇಷ್ಮೆ ಸೀರೆಯ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹುಡುಗರನ್ನು ಮಾತ್ರವಲ್ಲ, ಸೀರೆ ಪ್ರಿಯ ಮಾನಿನಿಯರನ್ನು ಕೂಡ ಸೆಳೆದಿದೆ. ಸದಾ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರ ಇಮೇಜನ್ನು ಬದಲಿಸಿದೆ.
ಯಾರಿದು ರುಹಾನಿ ಶೆಟ್ಟಿ?
ನಟಿ ರುಹಾನಿ ಶೆಟ್ಟಿ, ಈಗಾಗಲೇ ಸಾಕಷ್ಟು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೊದಲು ಶಿಲ್ಪಾ ಶೆಟ್ಟಿ ಎಂಬ ಹೆಸರಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ನ್ಯುಮಾರಲಜಿ ಪ್ರಕಾರ ತಮ್ಮ ಹೆಸರನ್ನು ರುಹಾನಿ ಎಂದು ಬದಲಿಸಿಕೊಂಡರು. ಪ್ರಸ್ತುತ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಬಹುತೇಕ ವೆಸ್ಟರ್ನ್ ಹಾಗೂ ಇಂಡೋ-ವೆಸ್ಟರ್ನ್ ಔಟ್‌ಫಿಟ್‌ಗಳಲ್ಲೆ ಕಾಣಿಸಿಕೊಳ್ಳುತ್ತಿದ್ದ ಅವರು, ಸೀರಿಯಲ್‌ನ ಕಥೆಗೆ ತಕ್ಕಂತೆ, ವಧುವಿನ ಅಲಂಕಾರದಲ್ಲಿ ಕಾಣಿಸಿಕೊಂಡಿದ್ದರು. ಈ ಲುಕ್ ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ರುಹಾನಿ ಶೆಟ್ಟಿಯ ಫ್ಯಾಷನ್ ಕೋಡ್
ಸಾಕಷ್ಟು ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ರುಹಾನಿ ಟ್ರಾವೆಲ್ ಪ್ರಿಯೆ ಕೂಡ. ಇತ್ತೀಚೆಗೆ ಹೋಗಿದ್ದ ಥೈಲ್ಯಾಂಡ್ ಪ್ರವಾಸದಲ್ಲೂ ಅತ್ಯಾಕರ್ಷಕ ಟ್ರಾವೆಲ್ ಔಟ್‌ಫಿಟ್‌ಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.
ಫ್ಯಾಷನ್ ವಿಮರ್ಶಕರ ರಿವ್ಯೂ
ರುಹಾನಿ ಶೆಟ್ಟಿಯ ಸಮಯೋಚಿತ ಔಟ್‌ಫಿಟ್‌ಗಳು ಹಾಗೂ ಉಡುಗೆಗಳು ಅವರನ್ನು ಗ್ಲಾಮರಸ್ ಗರ್ಲ್ ಆಗಿ ಬಿಂಬಿಸಿವೆ. ಇನ್ನು ಈ ಸೀರೆಯಲ್ಲಿ ಅವರು ಗೌರಮ್ಮನಂತೆ ಕಾಣಿಸುತ್ತಿದ್ದಾರೆ. ಪಕ್ಕ ಮದುಮಗಳಂತೆ ಕಾಣಿಸುತ್ತಿದ್ದಾರೆ ಎಂದು ಫುಲ್ ಮಾರ್ಕ್ಸ್ ನೀಡಿದ್ದಾರೆ ಫ್ಯಾಷನ್ ವಿಮರ್ಶಕರು.
ರುಹಾನಿ ಶೆಟ್ಟಿ ಸೀರೆ ಲುಕ್‌ಗೆ ಸಿಂಪಲ್ 3 ಟಿಪ್ಸ್
- ಟ್ರೆಡಿಷನಲ್ ಮೇಕಪ್, ಹೇರ್‌ಸ್ಟೈಲ್‌ಗೆ ಸೈ ಎನ್ನಿ.
- ಟ್ರೆಂಡಿ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿ.
- ಜ್ಯುವೆಲರಿ ಧರಿಸಿ, ಸ್ಟೈಲಿಂಗ್ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡಲಿ.