ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025:‌ ಸಿಂಪಲ್ ರೆಡ್ ಸೀರೆಯಲ್ಲಿ ಮಿನುಗಿದ ಸ್ಯಾಂಡಲ್‌ವುಡ್ ನಟಿ ತೇಜಸ್ವಿನಿ ಶರ್ಮಾ

Star Saree Fashion 2025: ರೆಡ್ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸುತ್ತಿರುವ ಸ್ಯಾಂಡಲ್‌ವುಡ್ ನಟಿ ತೇಜಸ್ವಿನಿ ಶರ್ಮಾಗೆ ಸೀರೆ ಎಂದರೆ ಸಖತ್ ಲವ್ ಅಂತೆ. ಸಿಂಪಲ್ಲಾಗಿಯೂ ಸೀರೆಯಲ್ಲಿ ಅಂದಕಾಣಬಹುದು ಎನ್ನುವ ಅವರು ವಿಶ್ವವಾಣಿ ನ್ಯೂಸ್‌ನೊಂದಿಗೆ ಸೀರೆ ಪ್ರೇಮವನ್ನು ಹಂಚಿಕೊಂಡಿದ್ದಾರೆ.

ತೇಜಸ್ವಿನಿ ಶರ್ಮಾ, ಸ್ಯಾಂಡಲ್‌ವುಡ್ ನಟಿ

ಸಂದರ್ಶನ: ಶೀಲಾ ಸಿ. ಶೆಟ್ಟಿ

ಸಿಂಪಲ್ಲಾಗಿರುವ ಸೀರೆಯಲ್ಲೂ ಅಂದವಾಗಿ ಕಾಣಿಸಬಹುದು, ಅತ್ಯಾಕರ್ಷಕವಾಗಿ ಕಾಣಿಸಬಹುದು ಎನ್ನುವುದಕ್ಕೆ ಸ್ಯಾಂಡಲ್‌ವುಡ್ ನಟಿ ತೇಜಸ್ವಿನಿ ಶರ್ಮಾ (Tejaswini Sharma) ಸರಿಯಾದ ಉದಾಹರಣೆ. ಆಗಾಗ್ಗೆ ಒಂದಲ್ಲಒಂದು ಸೀರೆಯಲ್ಲಿ (Star Saree Fashion 2025) ಕಾಣಿಸಿಕೊಳ್ಳುವ ಇವರ ಸೀರೆ ಪ್ರೇಮವನ್ನು ನಾವು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋಶೂಟ್‌ನಲ್ಲಿ ಕಾಣುತ್ತಿರುತ್ತೇವೆ. ಸ್ಯಾಂಡಲ್‌ವುಡ್ ನಟಿಯಾಗಿರುವ ತೇಜಸ್ವಿನಿ ಶರ್ಮಾ ಸೂಪರ್ ಮಾಡೆಲ್ ಕೂಡ. ಈಗಾಗಲೇ ಮಖೌನಲ್ಲಿ ನಡೆದ ವರ್ಲ್ಡ್ ಸೂಪರ್ ಮಾಡೆಲ್ ಸೌತ್ ಏಷಿಯಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಕೀರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ವೆಬ್ ಸೀರೀಸ್ ಸೇರಿದಂತೆ ಇಂಗ್ಲೀಷ್ ಮಂಜ, ಫ್ಲಾಟ್ ನಂಬರ್ 9 ಹಾಗೂ ವಾರ್ಡ್ ನಂಬರ್ 11 ಸೇರಿದಂತೆ ಕೊಡಗಿನ ಪ್ರಾದೇಶಿಕ ಸಿನಿಮಾ ಕೊಡಗ್‌ರ ಸಿಪಾಯಿಯಲ್ಲೂ ಅಭಿನಯಿಸಿದ್ದಾರೆ.

ತೀರಾ ಹೆಚ್ಚು ಮೇಕಪ್ ಹಾಗೂ ಆಭರಣವಿಲ್ಲದೆಯೂ ಅಂದವಾಗಿ ಕಾಣುವ ಅವರ ಸೀರೆ ಪ್ರೇಮದ ಬಗ್ಗೆ ವಿಶ್ವವಾಣಿ ನ್ಯೂಸ್ ಮಾತನಾಡಿಸಿದಾಗ ಅವರು ತಮ್ಮ ಸೀರೆ ಲವ್ ಬಗ್ಗೆ ಹೇಳಿಕೊಂಡರಲ್ಲದೇ ಓದುಗರಿಗೆ ಒಂದಿಷ್ಟು ಸೀರೆ ಸ್ಟೈಲಿಂಗ್ ಟಿಪ್ಸ್ ಕೂಡ ನೀಡಿದರು.

11

ವಿಶ್ವವಾಣಿ ನ್ಯೂಸ್: ನಿಮ್ಮ ಸೀರೆ ಕ್ರೇಝ್ ಯಾವಾಗಿನಿಂದ ಆರಂಭವಾಯಿತು ?

ತೇಜಸ್ವಿನಿ ಶರ್ಮಾ: ಸೀರೆ ಕ್ರೇಝ್ ನಿನ್ನೆ ಮೊನ್ನೆಯದಲ್ಲ! ನಾನು ಚಿಕ್ಕವಳಿದ್ದಾಗಿನಿಂದಲೇ ಇತ್ತು. ಅಮ್ಮನ ಸೀರೆ ಕಟ್ ಮಾಡಿ ಟೀಚರ್‌ನಂತೆ ಉಟ್ಟು ಸಂಭ್ರಮಿಸುತ್ತಿದ್ದೆ.

ವಿಶ್ವವಾಣಿ ನ್ಯೂಸ್: ಸೀರೆ ಕಲೆಕ್ಷನ್ ಮಾಡುವ ಅಭ್ಯಾಸವಿದೆಯಾ?

ತೇಜಸ್ವಿನಿ ಶರ್ಮಾ: ಹೌದು. ಸಾಕಷ್ಟು ಸೀರೆ ಕಲೆಕ್ಷನ್ ಇದೆ. ನನಗೆ ಗ್ರ್ಯಾಂಡ್ ಸೀರೆಗಳಿಗಿಂತ ಆರಾಮ ಎಂದೆನಿಸುವ ಸಾಫ್ಟ್ ಸೀರೆಗಳು ಬಹಳ ಇಷ್ಟ. ನನ್ನಮ್ಮನ ಹಾಗೂ ಅಜ್ಜಿಯ ಸೀರೆಗಳು ನನ್ನ ಬಳಿ ಇವೆ. ಕಂಫರ್ಟಬಲ್ ಎಂದೆನಿಸುವ ಸಿಂಪಲ್, ಎಲಿಗೆಂಟ್ ಲುಕ್ ನೀಡುವ ಸೀರೆಗಳು ಹೆಚ್ಚಾಗಿವೆ.

12

ವಿಶ್ವವಾಣಿ ನ್ಯೂಸ್: ಸೀರೆ ಪ್ರೇಮಿಯಾದ ನೀವು ಸೀರೆಯ ಸ್ಟೈಲಿಂಗ್ ಹೇಗೆ ಮಾಡುತ್ತೀರಾ ?

ತೇಜಸ್ವಿನಿ ಶರ್ಮಾ: ಆಯಾ ಸೀರೆಗೆ ತಕ್ಕಂತೆ ಸ್ಟೈಲಿಂಗ್ ಮಾಡುತ್ತೇನೆ. ಆದಷ್ಟೂ ಮಿನಿಮಲ್ ಜ್ಯುವೆಲರಿ ಧರಿಸಲು ಇಷ್ಟಪಡುತ್ತೇನೆ.ಕೆಲವೊಮ್ಮೆ ಆಭರಣಗಳನ್ನು ಧರಿಸುವುದೇ ಇಲ್ಲ! ಲೈಟ್ ಮೇಕಪ್ ಪ್ರಿಫರ್ ಮಾಡುತ್ತೇನೆ. ನ್ಯಾಚುರಲ್ ಲುಕ್‌ಗೆ ಮ್ಯಾಚ್ ಆಗುವಂತಹ ಸ್ಟೈಲಿಂಗ್ ಮಾಡುತ್ತೇನೆ.

ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಸೀರೆ ಸ್ಟೈಲ್ ಸ್ಟೇಟ್‌ಮೆಂಟ್ ?

ತೇಜಸ್ವಿನಿ ಶರ್ಮಾ: ತೀರಾ ಸಿಂಪಲ್ ಹಾಗೂ ಎಲಿಗೆಂಟ್ ಲುಕ್

ವಿಶ್ವವಾಣಿ ನ್ಯೂಸ್: ಸೀರೆ ಪ್ರಿಯ ಮಹಿಳೆಯರಿಗೆ ನೀವು ನೀಡುವ ಸೀರೆ ಟಿಪ್ಸ್ ?

ತೇಜಸ್ವಿನಿ ಶರ್ಮಾ: ಆದಷ್ಟೂ ಸಿಂಪಲ್ ಲುಕ್ ಟ್ರೈ ಮಾಡಿ. ಆದಷ್ಟೂ ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವಂತಹ ಸೀರೆ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಹೆಚ್ಚು ಆಕ್ಸೆಸರೀಸ್ ಬೇಡ! ಕಡಿಮೆ ಮೇಕಪ್ ಮಾಡಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Star Fashion Interview 2025: ಸೂಟ್‌ನಲ್ಲಿ ಸ್ಯಾಂಡಲ್‌ವುಡ್ ನಟ ನಿರಂಜನ್ ಸುಧೀಂದ್ರ ಸೂಪರ್ ಮಾಡೆಲ್ ಲುಕ್

ಶೀಲಾ ಸಿ ಶೆಟ್ಟಿ

View all posts by this author