ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Star Fashion Interview 2025: ಸೂಟ್‌ನಲ್ಲಿ ಸ್ಯಾಂಡಲ್‌ವುಡ್ ನಟ ನಿರಂಜನ್ ಸುಧೀಂದ್ರ ಸೂಪರ್ ಮಾಡೆಲ್ ಲುಕ್

Star Fashion Interview 2025: ಸ್ಯಾಂಡಲ್‌ವುಡ್‌ನ ಯುವ ನಟ ನಿರಂಜನ್ ಸುಧೀಂದ್ರ, ಸೂಟ್‌ನಲ್ಲಿ, ಸೂಪರ್ ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಅವರ ಈ ನಯಾ ಲುಕ್ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಈ ಕುರಿತಂತೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ತಮ್ಮ ಫ್ಯಾಷನ್ & ಸ್ಟೈಲ್ ಸ್ಟೇಟ್‌ಮೆಂಟ್ಸ್ ಬಗ್ಗೆ ಹಂಚಿಕೊಂಡರು.

ಸೂಟ್‌ನಲ್ಲಿ ಸ್ಯಾಂಡಲ್‌ವುಡ್ ನಟ ನಿರಂಜನ್ ಸುಧೀಂದ್ರ ಸೂಪರ್ ಮಾಡೆಲ್ ಲುಕ್

ನಿರಂಜನ್ ಸುಧೀಂದ್ರ, ಸ್ಯಾಂಡಲ್‌ವುಡ್ ನಟ.

ಸಂದರ್ಶನ: ಶೀಲಾ ಸಿ. ಶೆಟ್ಟಿ

ಸ್ಯಾಂಡಲ್‌ವುಡ್‌ನ ಯುವ ನಟ ನಿರಂಜನ್ ಸುಧೀಂದ್ರ ಸೂಟ್‌ನಲ್ಲಿ ಸಖತ್ ಆಗಿ ಸೂಪರ್ ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಹೌದು, ಇತ್ತೀಚಿನ ದುಬೈ ಮೂಲದ ಸ್ಟೈಲಿಸ್ಟ್‌ವೊಬ್ಬರ ಫೋಟೋಶೂಟ್‌ನಲ್ಲಿ ಈ ಲುಕ್‌ಗೆ ಸೈ ಎಂದಿದ್ದಾರೆ. ಅಂದಹಾಗೆ, ಎಲ್ಲರಿಗೂ ಗೊತ್ತಿರುವಂತೆ, ನಿರಂಜನ್, ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ. ಈಗಾಗಲೇ ನಮ್ಮ ಹುಡುಗರು, ಸೆಕೆಂಡ್ ಹಾಫ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಒಂದಲ್ಲ, ಒಂದು ಹೊಸ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ನಿರಂಜನ್, ವಿಶ್ವವಾಣಿ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್ ಲೈಫ್ ಕುರಿತಂತೆ ಮಾತನಾಡಿದ್ದು, ಸಂದರ್ಶನದ (Star Fashion Interview 2025) ಸಾರಾಂಶ ಇಲ್ಲಿದೆ.

2

ವಿಶ್ವವಾಣಿ ನ್ಯೂಸ್: ಸದಾ ಒಂದಲ್ಲ ಒಂದು ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ನಿಮ್ಮ ಫ್ಯಾಷನ್ ಮಂತ್ರ ಏನು?

ನಿರಂಜನ್: ನನ್ನದು ಯೂತ್ ಟ್ರೆಂಡಿ ಸ್ಟೈಲ್ ಗೆ ಸಾಥ್ ನೀಡುವ ಫ್ಯಾಷನ್! ಸೋ, ಅದಕ್ಕೆ ತಕ್ಕಂತೆ ಆಗಾಗ್ಗೆ ನಾನಾ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ.

ವಿಶ್ವವಾಣಿ ನ್ಯೂಸ್: ಸೀಸನ್‌ಗೆ ತಕ್ಕಂತೆ ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಬದಲಾಗುತ್ತದೆಯಾ?

ನಿರಂಜನ್: ಹೌದು, ಆಯಾ ಸೀಸನ್‌ಗೆ ತಕ್ಕಂತೆ ಮನಸ್ಸನ್ನು ಉಲ್ಲಾಸಮಯವಾಗಿಸುವಂತಹ ಡ್ರೆಸ್‌ಕೋಡ್ ಧರಿಸುವುದು ನನ್ನ ಚಾಯ್ಸ್ ನಲ್ಲಿದೆ!

3

ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್ ಸ್ಟೇಟ್‌ಮೆಂಟ್?

ನಿರಂಜನ್: ಫಸ್ಟ್ ಇಂಪ್ರೆಷನ್ ಈಸ್ ಬೆಸ್ಟ್ ಇಂಪ್ರೆಷನ್ ಎನ್ನುವಂತೆ, ಸದಾ ಆಕರ್ಷಕವಾಗಿ ಕಾಣಿಸುವ ಯೂನಿಕ್ ಫ್ಯಾಷನ್ ನನ್ನದು.

ವಿಶ್ವವಾಣಿ: ನೀವು ಟ್ರೆಂಡ್ ಸೆಟ್ಟರಾ ಅಥವಾ ಫಾಲೋವರಾ?

ನಿರಂಜನ್: ಹೌದು ! ನಾನು ಟ್ರೆಂಡ್ ಸೆಟ್ಟರ್!

4

ವಿಶ್ವವಾಣಿ ನ್ಯೂಸ್: ಬ್ರಾಂಡ್ ಫ್ರೀಕಾ?

ನಿರಂಜನ್: ನನ್ನ ಪ್ರಕಾರ, ಮೊದಲು ಎಲ್ಲರೂ ಬ್ರಾಂಡ್ ಫ್ರೀಕ್‌ಗಿಂತ ತಂತಮ್ಮ ಬಾಡಿ ಫ್ರೀಕ್ ಆಗಬೇಕು! ಆಗಷ್ಟೇ, ನಿಮ್ಮ ಫಿಟ್ನೆಸ್ ನಿಮ್ಮನ್ನೇ ಬ್ರಾಂಡ್‌ನಂತೆ ಪ್ರತಿಬಿಂಬಿಸುತ್ತದೆ.

ವಿಶ್ವವಾಣಿ ನ್ಯೂಸ್: ನಿಮ್ಮ ಫಾಲೋವರ್ಸ್‌ಗೆ ನೀವು ನೀಡುವ ಸಿಂಪಲ್ ಫ್ಯಾಷನ್ ಟಿಪ್ಸ್ ?

ನಿರಂಜನ್:

  • ಸದಾ ನೋಡಲು ನೀಟಾಗಿ ಡ್ರೆಸ್ ಮಾಡಿ.
  • ಹೊಂದುವ ಆಕ್ಸೆಸರೀಸ್ ಧರಿಸಿ.
  • ಔಟ್‌ಫಿಟ್‌ಗೆ ತಕ್ಕ ಫುಟ್‌ವೇರ್ ಧರಿಸಿ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Woolen Dress Fashion 2025: ಸೀಸನ್ ಎಂಡ್‌ನಲ್ಲೂ ಸೈಡಿಗೆ ಸರಿಯದ ಲೈಟ್‌ವೇಟ್ ಗ್ಲಾಮರಸ್ ಉಲ್ಲನ್ ಡ್ರೆಸ್‌ಗಳಿವು