ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yemen Tragedy: ಯೆಮೆನ್‌ ಕರಾವಳಿಯಲ್ಲಿ 154 ಜನರಿದ್ದ ದೋಣಿ ಮುಳುಗಡೆ; 68 ವಲಸಿಗರು ಸಾವು, 74 ಮಂದಿ ನಾಪತ್ತೆ

ಯೆಮೆನ್ ಕರಾವಳಿಯಲ್ಲಿ ದುರಂತವೊಂದು ಸಂಭವಿಸಿದ್ದು, ಭಾನುವಾರ 154 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮುಳುಗಡೆಯಾಗಿದ್ದು, 68 ಜನರು ಮೃತಪಟ್ಟಿದ್ದಾರೆ. 74 ಮಂದಿ ನಾಪತ್ತೆಯಾಗಿದ್ದು, 10ಜನರನ್ನು ರಕ್ಷಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದು ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಅಪಾಯಕಾರಿ ಮಿಶ್ರ ವಲಸೆ ಮಾರ್ಗಗಳಲ್ಲಿ ಒಂದಾಗಿದೆ

ಸನಾ: ಯೆಮೆನ್ ಕರಾವಳಿಯಲ್ಲಿ ದುರಂತವೊಂದು (Yemen Tragedy) ಸಂಭವಿಸಿದ್ದು, ಭಾನುವಾರ 154 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮುಳುಗಡೆಯಾಗಿದ್ದು, 68 ಜನರು ಮೃತಪಟ್ಟಿದ್ದಾರೆ. 74 ಮಂದಿ ನಾಪತ್ತೆಯಾಗಿದ್ದು, 10ಜನರನ್ನು ರಕ್ಷಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಿಸಲ್ಪಟ್ಟ 10 ಜನರಲ್ಲಿ, ಅವರಲ್ಲಿ ಒಂಬತ್ತು ಮಂದಿ ಇಥಿಯೋಪಿಯನ್ ಪ್ರಜೆಗಳು ಮತ್ತು ಒಬ್ಬರು ಯೆಮೆನ್ ಪ್ರಜೆ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪ್ರಾಂತ್ಯದ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಹೇಳಿದ್ದಾರೆ.

ಸದ್ಯ ರಕ್ಷಣಾ ತಂಡಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ. 154 ಇಥಿಯೋಪಿಯನ್ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗು ಭಾನುವಾರ ಮುಂಜಾನೆ ದಕ್ಷಿಣ ಯೆಮೆನ್ ಪ್ರಾಂತ್ಯದ ಅಬ್ಯಾನ್‌ನ ಅಡೆನ್ ಕೊಲ್ಲಿಯಲ್ಲಿ ಮುಳುಗಿತು ಎಂದು ಯೆಮೆನ್‌ನಲ್ಲಿರುವ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ಮುಖ್ಯಸ್ಥ ಅಬ್ದುಸತ್ತರ್ ಎಸೋವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಫ್ರಿಕಾದ ಕೊಂಬು ಮತ್ತು ಯೆಮೆನ್ ನಡುವಿನ ಸಮುದ್ರ ಮಾರ್ಗದ ಅಪಾಯಗಳ ಬಗ್ಗೆ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM) ಪದೇ ಪದೇ ಎಚ್ಚರಿಸಿದೆ. ಹೆಚ್ಚಾಗಿ ಇಥಿಯೋಪಿಯಾ ಮತ್ತು ಸೊಮಾಲಿಯಾದಿಂದ ಬರುವ ವಲಸಿಗರು, ಸೌದಿ ಅರೇಬಿಯಾ ಅಥವಾ ಇತರ ಗಲ್ಫ್ ರಾಷ್ಟ್ರಗಳನ್ನು ಕೆಲಸ ಹುಡುಕಿಕೊಂಡು ಹೋಗುವವರು ಈ ಮಾರ್ಗದ ಮೂಲಕ ಸಂಚರಿಸುತ್ತಾರೆ.

ಇದು ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಅಪಾಯಕಾರಿ ಮಿಶ್ರ ವಲಸೆ ಮಾರ್ಗಗಳಲ್ಲಿ ಒಂದಾಗಿದೆ" ಎಂದು ಐಒಎಂ ಹೇಳಿಕೆಯಲ್ಲಿ ತಿಳಿಸಿದೆ. 2024 ರಲ್ಲಿ 60,000 ಕ್ಕೂ ಹೆಚ್ಚು ವಲಸಿಗರು ಯೆಮೆನ್‌ಗೆ ದಾಟಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಎಂದು ಸಂಸ್ಥೆ ಮಾಹಿತಿ ಹಂಚಿಕೊಂಡಿತು. ಯೆಮೆನ್‌ನ ದಕ್ಷಿಣ ಕರಾವಳಿಯ ಅಬ್ಯಾನ್ ಪ್ರಾಂತ್ಯದ ರಾಜಧಾನಿ ಜಿಂಜಿಬಾರ್‌ನ ಆಸ್ಪತ್ರೆಯ ಶವಾಗಾರಕ್ಕೆ 14 ಮೃತದೇಹಗಳನ್ನು ಸಾಗಿಸಲಾಗಿದೆ. ದೊಡ್ಡ ಸಂಖ್ಯೆಯ ವಲಸಿಗರು ಸತ್ತಿರುವುದರಿಂದ ಮತ್ತು ಕಾಣೆಯಾಗಿರುವುದರಿಂದ ದೊಡ್ಡ ಪ್ರಮಾಣದ ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದೆ. ಅನೇಕ ಮೃತದೇಹ ಕಡಲತೀರದಾದ್ಯಂತ ಹರಡಿಕೊಂಡಿವೆ ಎಂದು ಅಬ್ಯಾನ್ ಭದ್ರತಾ ನಿರ್ದೇಶನಾಲಯ ಹೇಳಿದೆ.

ಈ ಸುದ್ದಿಯನ್ನೂ ಓದಿ: Boat Capsizes: ಹಾ ಲಾಂಗ್ ಕೊಲ್ಲಿಯಲ್ಲಿ ಭಾರೀ ದುರಂತ; ಪ್ರವಾಸಿ ಬೋಟ್‌ ಮುಳುಗಿ 34 ಮಂದಿ ಸಾವು, ಹಲವರು ನಾಪತ್ತೆ

ಕಳೆದ ವರ್ಷ ಈ ಮಾರ್ಗದಲ್ಲಿ 558 ಜನರು ಸಾವನ್ನಪ್ಪಿದ್ದಾರೆ ಮತ್ತು ಕಳೆದ ದಶಕದಲ್ಲಿ ಕನಿಷ್ಠ 2,082 ವಲಸಿಗರು ಕಾಣೆಯಾಗಿದ್ದಾರೆ - ಅವರಲ್ಲಿ 693 ಜನರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. 2014 ರಲ್ಲಿ ಯೆಮೆನ್ ಅಂತರ್ಯುದ್ಧ ಪ್ರಾರಂಭವಾದಾಗಿನಿಂದ, ಸಾವಿರಾರು ಆಫ್ರಿಕನ್ ವಲಸಿಗರು ದೇಶವನ್ನು ಪ್ರವೇಶಿಸಿದ್ದಾರೆ. ಸುಮಾರು 380,000 ನಿರಾಶ್ರಿತರು ಮತ್ತು ವಲಸಿಗರು ಪ್ರಸ್ತುತ ಯೆಮೆನ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.