Dasara Fashion 2025: ದಸರಾ ಹಬ್ಬದ ಟ್ರೆಡಿಷನಲ್ ಲುಕ್ಗೆ ಇಲ್ಲಿದೆ ಒಂದಿಷ್ಟು ಐಡಿಯಾ
Dasara Fashion 2025: ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಸೂಕ್ತ ಟ್ರೆಡಿಷನಲ್ ಉಡುಪುಗಳನ್ನು ಆಯ್ಕೆ ಮಾಡುವುದರೊಂದಿಗೆ ಒಂದಿಷ್ಟು ಸ್ಟೈಲಿಂಗ್ ಹಾಗೂ ಮೇಕೋವರ್ ಐಡಿಯಾಗಳನ್ನು ಫಾಲೋ ಮಾಡಬೇಕು. ಆಗಷ್ಟೇ, ದಸರಾ ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಈ ಕುರಿತ ವರದಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್ -


ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಸೂಕ್ತ ಟ್ರೆಡಿಷನಲ್ ಉಡುಪುಗಳನ್ನು ಆಯ್ಕೆ ಮಾಡುವುದರೊಂದಿಗೆ ಒಂದಿಷ್ಟು ಸ್ಟೈಲಿಂಗ್ ಹಾಗೂ ಮೇಕೋವರ್ ಐಡಿಯಾಗಳನ್ನು ಫಾಲೋ ಮಾಡಬೇಕು. ಆಗಷ್ಟೇ, ದಸರಾ ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಹಬ್ಬದ ಟ್ರೆಂಡ್ಗೆ ತಕ್ಕಂತೆ ಆಯ್ಕೆ
ದಸರಾ ಹಬ್ಬದ ಸಂದರ್ಭದಲ್ಲಿ ನಾನಾ ಶೈಲಿಯ ಎಥ್ನಿಕ್ವೇರ್ಸ್ ಬಿಡುಗಡೆಗೊಳ್ಳುತ್ತವೆ. ಹಾಗೆಂದು ಕಂಡ ಕಂಡದ್ದನ್ನೆಲ್ಲಾಕೊಂಡು ಧರಿಸುವುದು ಬೇಡ! ಸೋಷಿಯಲ್ ಮೀಡಿಯಾದಲ್ಲಿ, ಟ್ರೆಂಡ್ಗಳ ಬಗ್ಗೆ ಗಮನಿಸಿ. ಆಯ್ಕೆ ಮಾಡಿ, ಖರೀದಿಸಿ, ಧರಿಸಿ.

ದಸರಾ ಸಂಭ್ರಮಕ್ಕೆ ತಕ್ಕಂತಿರಲಿ
ದಸರಾ ವಿಶೇಷತೆಗೆ ತಕ್ಕಂತೆ ಉಡುಪುಗಳ ಸೆಲೆಕ್ಷನ್ ನಿಮ್ಮದಾಗಿರಲಿ. ಆದಷ್ಟೂ ತೀರಾ ಟ್ರೆಡಿಷನಲ್ ಲುಕ್ ನೀಡುವಂತಹ ಡಿಸೈನರ್ವೇರ್ಸ್ ಆಯ್ಕೆ ಮಾಡಿ, ಧರಿಸಿ. ಸೀರೆಯಾದಲ್ಲಿ ರೇಷ್ಮೆ ಸೀರೆ ಚೂಸ್ ಮಾಡಿ, ಧರಿಸಿ.
ದಾಂಡಿಯಾ ಕಾರ್ಯಕ್ರಮದ ಔಟ್ಫಿಟ್ಸ್
ದಾಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುವವರಾದಲ್ಲಿ, ನಿಮ್ಮ ಆಯ್ಕೆ ಹೀಗಿರಬೇಕು. ಹುಡುಗಿಯರಿಗೆ ಗಾಗ್ರ, ಲೆಹೆಂಗಾ ಉತ್ತಮ. ಪುರುಷರಿಗೆ ಧೋತಿ, ಪೈಜಾಮ ಓಕೆ. ಇವನ್ನು ಧರಿಸಿದಾಗ ಡ್ಯಾನ್ಸ್ ಮಾಡಲು ಆರಾಮ ಎನಿಸುತ್ತದೆ. ಇವನ್ನು ಆಯ್ಕೆ ಮಾಡಿಕೊಳ್ಳಬಹುದು.

ಟೀನೇಜ್ ಹುಡುಗಿಯರಿಗೆ ಇಂಡೋ-ವೆಸ್ಟರ್ನ್ ದೇಸಿ ಲುಕ್
ವೆಸ್ಟರ್ನ್ ಸ್ಟೈಲ್ಸ್ ಸ್ಟೇಟ್ಮೆಂಟ್ ಬದಲಿಸಲಾಗದ ಟೀನೇಜ್ ಹುಡುಗಿಯರು ಇಂಡೋ-ವೆಸ್ಟರ್ನ್ ಮಿಕ್ಸ್ ಮ್ಯಾಚ್ ಮಾಡಬಹುದಾದಂತಹ ದೇಸಿ ಲುಕ್ಗೆ ಸೈ ಎನ್ನಬಹುದು.

ಹಬ್ಬದ ಇಮೇಜ್ ಮೇಕ್ಓವರ್
ಹಬ್ಬದ ಸಂದರ್ಭದಲ್ಲಿ ನಿಮ್ಮ ಇಮೇಜ್ ಮೇಕ್ಒವರ್ ಯಾವ ರೀತಿಯಲ್ಲಿ ಇರಬೇಕೆಂದರೇ, ನೋಡಲು ಅತ್ಯಾಕರ್ಷಕವಾಗಿ ಕಾಣಿಸಬೇಕು. ಮುಡಿಯಿಂದ ಪಾದದವರೆಗೂ ಟ್ರೆಡಿಷನಲ್ ಲುಕ್ಗೆ ಸಾಥ್ ನೀಡುವಂತೆ ಸ್ಟೈಲಿಂಗ್ ಮಾಡಿಕೊಳ್ಳಬೇಕು.

ಮ್ಯಾಚಿಂಗ್ ಆಗುವಂತಿರಲಿ ಟ್ರೆಡಿಷನಲ್ ಆಭರಣಗಳು
ಹಬ್ಬದ ಉಡುಗೆ ಅಥವಾ ಸೀರೆಗೆ ಟ್ರೆಡಿಷನಲ್ ಆಕ್ಸೆಸರೀಸ್ ಧರಿಸಿ. ಅದರಲ್ಲೂ ಮೂಗುತಿ, ಕಾಲ್ಗೆಜ್ಜೆ, ಕಮರ್ಬಾಂದ್, ಮಾಟಿ, ಜುಮಕಿ, ಹಾರ, ಜಡೆ ಬಿಲ್ಲೆ, ಕಡಗ ಸೇರಿದಂತೆ ಅಂದ ಹೆಚ್ಚಿಸುವ ಆಭರಣಗಳನ್ನು ಧರಿಸಿ, ಚೆಂದವಾಗಿ ಕಾಣಿಸುವಿರಿ.