ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತ ಮತ್ತೆ ದಾಳಿ ಮಾಡುತ್ತದೆ.... ಅಮೆರಿಕದ ಬಳಿ ಕದನ ವಿರಾಮದ ಕುರಿತು ಪಾಕ್‌ ಬೇಡಿದ್ದೇನು?

ಭಾರತ ಹಾಗೂ ಪಾಕಿಸ್ತಾನದ ನಡುವೆ ಸದ್ಯ ಕದನ ವಿರಾಮ ಏರ್ಪಟ್ಟಿದೆ. ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ಗೆ ಪಾಕಿಸ್ತಾನ ಬೆದರಿದೆ. ಇದೀಗ ಪಾಕ್‌ ಮೇಲಿನ ದಾಳಿಯ ಮತ್ತಷ್ಟು ಸಂಗತಿಗಳು ಬಯಲಾಗುತ್ತಿವೆ. ಪಾಕಿಸ್ತಾನದ ನೂರ್‌ಖಾನ್‌ ವಾಯುನೆಲೆ ಮೇಲೆ ಭಾರತ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಅಮೆರಿಕದ ಬಳಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಬೇಡಿಕೊಂಡಿದೆ ಎಂದು ಹೇಳಲಾಗಿದೆ.

ಇಸ್ಲಾಮಾಬಾದ್‌: ಭಾರತ ಹಾಗೂ ಪಾಕಿಸ್ತಾನದ ನಡುವೆ ಸದ್ಯ ಕದನ (Operation Sindoor) ವಿರಾಮ ಏರ್ಪಟ್ಟಿದೆ. ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ಗೆ ಪಾಕಿಸ್ತಾನ ಬೆದರಿದೆ. ಇದೀಗ ಪಾಕ್‌ ಮೇಲಿನ ದಾಳಿಯ ಮತ್ತಷ್ಟು ಸಂಗತಿಗಳು ಬಯಲಾಗುತ್ತಿವೆ. ಪಾಕಿಸ್ತಾನದ ನೂರ್‌ಖಾನ್‌ ವಾಯುನೆಲೆ ಮೇಲೆ ಭಾರತ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಅಮೆರಿಕದ ಬಳಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಬೇಡಿಕೊಂಡಿದೆ ಎಂದು ಹೇಳಲಾಗಿದೆ. ಮೇ 10 ರ ಬೆಳಿಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ವಿದೇಶಾಂಗ ಸಚಿವ ಜೈ ಶಂಕರ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದರು.

ನೂರ್ ಖಾನ್ ವಾಯುನೆಲೆಯ ಮೇಲೆ ಭಾರತೀಯ ಕ್ಷಿಪಣಿಗಳು ಬೆಳಗಿನ ಜಾವ ತೀವ್ರವಾಗಿ ದಾಳಿ ನಡೆಸಿದಾಗ, ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಕಾಶಿಫ್ ಅಬ್ದುಲ್ಲಾ ಅದೇ ದಿನ ಬೆಳಿಗ್ಗೆ 10:38 ಕ್ಕೆ ಜೈ ಶಂಕರ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಮಾತುಕತೆಯಲ್ಲಿ ಭಾರತ ಕರಾಚಿ ಬಂದರಿನ ಮೇಲೆ ದಾಳಿ ನಡೆಸುತ್ತಿದೆ ಎಂದು ನಮ್ಮ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಬ್ರಹ್ಮೋಸ್‌ ಕ್ಷಿಪಣಿ ದಾಳಿ ಬಳಿಕ ಪಾಕಿಸ್ತಾನ ಸಂಪೂರ್ಣವಾಗಿ ಮಾತುಕತೆಗೆ ಸಿದ್ಧವಿತ್ತು ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನವು ಕದನ ವಿರಾಮಕ್ಕೆ ಒಪ್ಪುವ ಇಚ್ಛೆಯನ್ನು ಕಾರ್ಯದರ್ಶಿ ರುಬಿಯೊ ತಿಳಿಸಿದಾಗ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಸಶಸ್ತ್ರ ಪಡೆಗಳು ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿರುವುದರಿಂದ, ಅಂತಹ ಪ್ರಸ್ತಾಪವು ಡಿಜಿಎಂಒ ಮಾರ್ಗಗಳ ಮೂಲಕವೇ ಬರಬೇಕಾಗುತ್ತದೆ ಎಂದು ತಿಳಿಸಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Jyoti Malhotra: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಯುಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ಸೆರೆ; ಯಾರಳಿವಳು? ಏನಿವಳ ಹಿನ್ನೆಲೆ?

ಮೇ 9- 10ರ ನಡುವಿನ ರಾತ್ರಿ ಕೂಡ ಭಾರತೀಯ ಸೇನೆಯು ಪಾಕಿಸ್ತಾನದ 12 ಪ್ರಮುಖ ನೆಲೆಗಳ ಮೇಲೆ ನಿಖರವಾಗಿ ದಾಳಿ ಮಾಡಿತು. ಆದರೆ ಈ ದಾಳಿಯ ವೇಳೆ ಭಾರತೀಯ ವಾಯುಪಡೆಯ ನಿಜವಾದ ಯುದ್ಧ ವಿಮಾನಗಳನ್ನು ಮರೆಮಾಡಲು ಮಾನವರಹಿತ ವಿಮಾನಗಳನ್ನು ಕಳುಹಿಸಿತ್ತು. ಇದು ಪಾಕಿಸ್ತಾನದ ರಾಡಾರ್‌ಗಳ ದಾರಿ ತಪ್ಪಿಸಿತ್ತು. ಪಾಕಿಸ್ತಾನದ ಪಡೆ ಇದನ್ನೇ ಭಾರತದ ಯುದ್ಧ ವಿಮಾನಗಳೆಂದು ನಂಬಿ ಹೊಡೆದುರುಳಿಸಲು ಪರದಾಡಿತ್ತು. ಇದರ ಪರಿಣಾಮವಾಗಿ ಅವರ ಎಚ್ ಕ್ಯೂ -9 ಕ್ಷಿಪಣಿ ವ್ಯವಸ್ಥೆ ಸಕ್ರಿಯಗೊಂಡು ಅವುಗಳ ನಿಖರ ಸ್ಥಳಗಳನ್ನು ಬಹಿರಂಗಪಡಿಸಿದವು ಮತ್ತು ಅವುಗಳಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.