ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assaulted Case: ಭಾರತೀಯ ವ್ಯಕ್ತಿಯ ಮೇಲೆ ದರ್ಪ ಮೆರೆದ ಆಸ್ಟ್ರೇಲಿಯಾ ಪೊಲೀಸರು; ಮೆದುಳಿಗೆ ತೀವ್ರ ಪೆಟ್ಟು ಬಿದ್ದು ಜೈಲಿನಲ್ಲಿಯೇ ಸಾವು

ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪೊಲೀಸರ ಬಂಧನದ ವೇಳೆಯೇ ಮೃತಪಟ್ಟಿದ್ದಾರೆ. ಭಾರತೀಯ ಮೂಲದ ವ್ಯಕ್ತಿಯೊಬ್ಬ ಆಸ್ಟ್ರೇಲಿಯಾದ ಮೋಡ್ಬರಿ ನಾರ್ತ್ ಎಂಬಲ್ಲಿ ನೆಲೆಸಿದ್ದರು. ಇತ್ತೀಚಿಗೆ ಈತನನ್ನು ಆಸ್ಟ್ರೇಲಿಯಾದ ಅಡಿಲೇಡ್ ನಗರ ಪೊಲೀಸರು ಬಂಧಿಸಿದ್ದರು ಎಂದು ತಿಳಿದು ಬಂದಿದೆ.

ಕ್ಯಾನ್‌ಬೆರಾ: ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ (Assaulted Case) ವ್ಯಕ್ತಿಯೊಬ್ಬರು ಪೊಲೀಸರ ಬಂಧನದ ವೇಳೆಯೇ ಮೃತಪಟ್ಟಿದ್ದಾರೆ. ಭಾರತೀಯ ಮೂಲದ ವ್ಯಕ್ತಿಯೊಬ್ಬ ಆಸ್ಟ್ರೇಲಿಯಾದ ಮೋಡ್ಬರಿ ನಾರ್ತ್ ಎಂಬಲ್ಲಿ ನೆಲೆಸಿದ್ದರು. ಇತ್ತೀಚಿಗೆ ಈತನನ್ನು ಆಸ್ಟ್ರೇಲಿಯಾದ ಅಡಿಲೇಡ್ ನಗರ ಪೊಲೀಸರು ಬಂಧಿಸಿದ್ದು, ಇದೀಗ ಬಂಧನದ ವೇಳೆಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೇ 29 ರಂದು ಅವರ ಮೆದುಳಿಗೆ ಸಂಬಂಧಿಸಿದಂತೆ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟಿರುವ ವ್ಯಕ್ತಿಯನ್ನು ಭಾರತೀಯ ಮೂಲದ 42 ವರ್ಷದ ಗೌರವ್‌ ಕುಂದಿ ಎಂದು ಗುರುತಿಸಲಾಗಿದೆ. ಗೌರವ್‌ ಮದ್ಯ ಸೇವಿಸಿ ತನ್ನ ಪತ್ನಿ ಅಮೃತಪಾಲ್ ಕೌರ್ ಅವರೊಂದಿಗೆ ಸಾರ್ವಜನಿಕವಾಗಿ ಜಗಳ ಮಾಡಿಕೊಂಡಿದ್ದರು. ಜಗಳದ ವೇಳೆ ಗೌರವ್‌ ಕುಸಿದು ನೆಲಕ್ಕೆ ಬಿದ್ದಿದ್ದರು ಎನ್ನಲಾಗಿದೆ. ಘಟನೆ ನಡೆದ ಕೂಡಲೇ ಪೋಲಿಸರು ಸ್ಥಳಕ್ಕೆ ಧಾವಿಸಿ ಗೌರವ್‌ ಅವರನ್ನು ಬಂಧಿಸಿದ್ದಾರೆ. ಬಳಿಕ ಪತ್ನಿ ಕೌರ್ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು ಗೌರವ್‌ ಮತ್ತು ನಾನು ಏನೂ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಘಟನೆಯ ವೇಳೆ ಗೌರವ್‌ ಕುತ್ತಿಗೆ ಮೇಲೆ ಪೋಲಿಸರು ಮೊಣಕಾಲು ಇಟ್ಟಿದ್ದರು ಎಂದಿರುವ ಗೌರವ್‌ ಪತ್ನಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಬಂಧನದ ವೇಳೆ ಪೋಲಿಸರು ಅವರನ್ನು ರಸ್ತೆಗೆ ತಳ್ಳಿದ್ದಾರೆ. ನಂತರ ಅವರ ತಲೆಗೆ ಪೆಟ್ಟು ಬಿದ್ದಿದೆ. ಕಾರಣ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಅವರನ್ನು ರಾಯಲ್ ಅಡಿಲೇಡ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿ ವೈದ್ಯರು ಮೆದುಳಿಗೆ ತೀವ್ರವಾದ ಗಾಯವಾಗಿದೆ ಎಂದು ದೃಢಪಡಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಸಾವೀಗೀಡಾಗಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ದಕ್ಷಿಣ ಆಸ್ಟ್ರೇಲಿಯಾದ ಪೊಲೀಸ್ ಆಯುಕ್ತ ಗ್ರಾಂಟ್ ಸ್ಟೀವನ್ಸ್ ಪ್ರತಿಕ್ರಿಯೆ ನೀಡಿದ್ದು, ಬಂಧನದ ವೇಳೆ ಪೋಲಿಸರು ಆರೋಪಿಯ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ನಡೆದುಕೊಂಡಿಲ್ಲ. ಘಟನೆಯ ಸಂದರ್ಭದಲ್ಲಿ ಕುತ್ತಿಗೆ ಮೇಲೆ ಮೊಣಕಾಲು ಇಟ್ಟಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Murder Case: ಯುವಕನ ಕೊಂದು ಅವಿತುಕೊಂಡಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧನ

ಸ್ಥಳೀಯ ಪೋಲಿಸ್‌ ಅಧಿಕಾರಿ ಜಾನ್ ಡಿಕ್ಯಾಂಡಿಯಾ ಮಾತನಾಡಿ ಗೌರವ್‌ ತಮ್ಮ ಬಂಧನಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಇದರ ನಡುವೆಯೂ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಈ ವೇಳೆ ಅವರು ಸಾವೀಗೀಡಾಗಿರುವ ಘಟನೆ ಸಂಭವಿಸಿದೆ. ಇದರಲ್ಲಿ ನಮ್ಮ ಸಿಬ್ಬಂದಿಯವರ ತಪ್ಪಿಲ್ಲ ಎಂದಿದ್ದಾರೆ. ಇನ್ನು ದಕ್ಷಿಣ ಆಸ್ಟ್ರೇಲಿಯಾದ ಮುಖ್ಯಮಂತ್ರಿ ಪೀಟರ್ ಮಲಿನಸ್ಕಸ್ ಅವರು ಕೂಡಾ ಪೊಲೀಸರ ಕಾರ್ಯಾಚರಣೆಯನ್ನು ಬೆಂಬಲಿಸಿದ್ದಾರೆ.