ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಯುವಕನ ಕೊಂದು ಅವಿತುಕೊಂಡಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧನ

ನಿನ್ನೆಯಷ್ಟೇ ಜೈಲಿನಿಂದ ಹೊರಬಂದಿದ್ದ ವಿಜಯ್ ಎಂಬಾತನನ್ನು ಮಾತುಕತೆಗೆಂದು ಕರೆದೊಯ್ದು ಇವರು ಅಟ್ಟಾಡಿಸಿ ಬರ್ಬರವಾಗಿ (murder case) ಹತ್ಯೆಗೈದಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಆರ್ ಆರ್ ನಗರದ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಅಡಗಿಕೊಂಡಿದ್ದರು.

ಯುವಕನ ಕೊಂದು ಅವಿತುಕೊಂಡಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧನ

ಮೃತ ವಿಜಯ್

ಹರೀಶ್‌ ಕೇರ ಹರೀಶ್‌ ಕೇರ Jun 16, 2025 7:04 AM

ಬೆಂಗಳೂರು: ಬೆಂಗಳೂರಿನಲ್ಲಿ ಪೊಲೀಸರ ಗುಂಡಿನ ಸದ್ದು (Police Firing) ಮೊಳಗಿದ್ದು, ಯುವಕನ ಕೊಲೆ ಮಾಡಿ ಅವಿತುಕೊಂಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ದೀಪು (28), ಅರುಣ್ (27) ಎಂಬ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ. ವಿಜಯ್ ಎಂಬಾತನನ್ನು ಬರ್ಬರವಾಗಿ ಹತ್ಯೆ (Murder case) ಮಾಡಿದ್ದ ಆರೋಪಿಗಳು ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಾರೆ. ನಿನ್ನೆ ರಾತ್ರಿ ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು (bengaluru crime news) ಬೆಳಗ್ಗೆ ಬಂಧಿಸಿದ್ದಾರೆ.

ನಿನ್ನೆಯಷ್ಟೇ ಜೈಲಿನಿಂದ ಹೊರಬಂದಿದ್ದ ವಿಜಯ್ ಎಂಬಾತನನ್ನು ಮಾತುಕತೆಗೆಂದು ಕರೆದೊಯ್ದು ಇವರು ಅಟ್ಟಾಡಿಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಆರ್ ಆರ್ ನಗರದ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಅಡಗಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಇದೇ ವೇಳೆ ಇನ್ಸ್​ಪೆಕ್ಟರ್ ಕೆಂಪೇಗೌಡ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆದರೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಇಬ್ಬರ ಕಾಲಿಗೂ ಗುಂಡು ಹಾರಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅರುಣ್ ಮತ್ತು ಕೊಲೆಯಾದ ವಿಜಯ್ ನಡುವೆ ಈ ಹಿಂದೆ ಜಗಳ ಆಗಿತ್ತು. ಕೆಲ ತಿಂಗಳ ಹಿಂದೆ ವಿಜಯ್, ಅರುಣ್‌ಗೆ ಚಾಕುವಿನಿಂದ ಇರಿದಿದ್ದ. ಗಲಾಟೆ ಮಾಡಿಕೊಂಡು ಚಾಕುವಿನಿಂದ ಇರಿದಿದ್ದ ವಿಜಯ್, ನಂತರ ಜೈಲಿಗೆ ಹೋಗಿ ನಿನ್ನೆಯಷ್ಟೇ ರಿಲೀಸ್ ಆಗಿದ್ದ. ಚಾಕುವಿನಿಂದ ಇರಿದ ನಂತರ ವಿಜಯ್ ಮೇಲೆ ದ್ವೇಷ ಹೆಚ್ಚಿಸಿಕೊಂಡಿದ್ದ ಅರುಣ್​, ವಿಜಯ್ ಜೈಲಿನಿಂದ ಬಂದ ನಂತರ ಮಾತುಕತೆಗೆ ಅಂತ ಕರೆದಿದ್ದ. ಈ ವೇಳೆ ಕೊಲೆ ಮಾಡಿದ್ದಾನೆ.

ತನ್ನ ಸ್ನೇಹಿತ ದೀಪು ಜೊತೆ ಸೇರಿ ಕೊಲೆ ಮಾಡಿದ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದರು. ಜೆಜೆ ನಗರ ಇನ್ಸ್‌ಪೆಕ್ಟರ್ ಕೆಂಪೇಗೌಡ, ಪಿಎಸ್ಐ ಪದ್ಮನಾಭ ಅವರು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ಪಿಸಿ ಕರೀಂ ಸಾಬ್, ಎಎಸ್ಐ ಕುಮಾರ್ ಮೇಲೆ ಆರೋಪಿಗಳು ದಾಳಿ ಮಾಡಿದ್ದರು. ಈ ವೇಳೆ ಇಬ್ಬರು ಕಾನ್ಸ್‌ಟೇಬಲ್ ಗಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Indore Couple Missing: ರೇನ್‌ ಕೋಟ್‌, ಶರ್ಟ್‌ನಿಂದ ಸಿಕ್ತು ಕೊಲೆಯ ಸುಳಿವು; ಹಂತಕರ ಬಂಧನ ಹೇಗಿತ್ತು?