ಟೋಕಿಯೋ: ಎರಡು ದಿನಗಳ ಜಪಾನ್ (Japan) ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೋಧಿಧರ್ಮನ (Bodhidharma) ಗೊಂಬೆಯನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ. ಚೀನಾ (China) ಮತ್ತು ಜಪಾನ್‌ನಲ್ಲಿ (japan) ಅತ್ಯಂತ ಪೂಜನೀಯ ವ್ಯಕ್ತಿಯಾಗಿರುವ ತಮಿಳುನಾಡಿನ ಬೌದ್ಧ ಸನ್ಯಾಸಿ ಬೋಧಿಧರ್ಮನ (Buddhist Monk Bodhidharma) ಬೊಂಬೆಯನ್ನು ಜಪಾನಿನ ಸಂಸ್ಕೃತಿಯಲ್ಲಿ ಶುಭ ಮತ್ತು ಅದೃಷ್ಟದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಬೋಧಿಧರ್ಮನಿಗೆ ಚೀನಾದಲ್ಲಿ ಚಾನ್ ಎಂದು ಕರೆಯಲಾಗುತ್ತದೆ. ಈತ ಝೆನ್ ಬೌದ್ಧಧರ್ಮದ ನಿರ್ವಿವಾದ ಸ್ಥಾಪಕ ಎಂದು ಗುರುತಿಸಲಾಗಿದೆ.
ನಾಗರಿಕತೆ ಮತ್ತು ಆಧ್ಯಾತ್ಮಿಕ ಸಂಬಂಧಗಳ ಪ್ರತಿರೂಪವಾದ ದಾರುಮ ಗೊಂಬೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಪಾನ್ ಭೇಟಿಯ ಸಮಯದಲ್ಲಿ ಸ್ವೀಕರಿಸಿದರು. ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವಾಲಯ, ದಾರುಮ ಗೊಂಬೆಯು ಜಪಾನಿನ ಸಂಸ್ಕೃತಿಯಲ್ಲಿ ಶುಭ ಮತ್ತು ಅದೃಷ್ಟದ ಬೊಂಬೆ ಎಂದು ಪರಿಗಣಿಸಲಾಗಿದೆ. ಟಕಾಸಾಕಿ-ಗುನ್ಮಾದಲ್ಲಿರುವ ಶೋರಿಂಜಾನ್ ದಾರುಮ-ಜಿ ದೇವಾಲಯದ ಮುಖ್ಯ ಅರ್ಚಕರಾದ ರೆವ್ ಸೀಶಿ ಹಿರೋಸ್ ಅವರನ್ನು ಭೇಟಿಯಾದ ಮೋದಿ ಈ ವೇಳೆ ದಾರುಮ ಬೊಂಬೆಯನ್ನು ಉಡುಗೊರೆಯಾಗಿ ಪಡೆದರು. ಜಪಾನ್‌ನ ಗುನ್ಮಾ ಪ್ರಾಂತ್ಯದಲ್ಲಿರುವ ಟಕಾಸಾಕಿ ಪ್ರಸಿದ್ಧ ದಾರುಮ ಗೊಂಬೆಗಳ ಜನ್ಮಸ್ಥಳವಾಗಿದ್ದು, ಬೋಧಿಧರ್ಮನ ಪರಂಪರೆಯನ್ನು ಆಧರಿಸಿಕೊಂಡು ಬಂದಿದೆ.
ಭಾರತದೊಂದಿಗೆ ಬೋಧಿಧರ್ಮನ ಸಂಬಂಧ
ಬೋಧಿಧರ್ಮ ತಮಿಳುನಾಡಿನ ಕಾಂಚೀಪುರಂನ ಭಾರತೀಯ ಸನ್ಯಾಸಿ. ಜಪಾನ್‌ನಲ್ಲಿ ದಾರುಮ ಡೈಶಿ ಎಂದು ಕರೆಯಲ್ಪಡುವ ಈತ ಸಾವಿರ ವರ್ಷಗಳ ಹಿಂದೆ ದ್ವೀಪ ರಾಷ್ಟ್ರಕ್ಕೆ ತೆರಳಿದ್ದ ಎನ್ನಲಾಗುತ್ತದೆ. ಚೀನಾ ಮತ್ತು ಜಪಾನ್ ಈ ಎರಡು ರಾಷ್ಟ್ರಗಳಲ್ಲೂ ಬೋಧಿ ಧಾರ್ಮ ಝೆನ್ ಬೌದ್ಧಧರ್ಮದ ನಿರ್ವಿವಾದ ಸ್ಥಾಪಕರಾಗಿ ಪೂಜಿಸಲ್ಪಡುತ್ತಿದ್ದಾರೆ. ಪ್ರಯಾಣದ ಸಮಯದಲ್ಲಿ ಅವರು ಝೆನ್ ಅವರನ್ನು ಚೀನಾಕ್ಕೆ ಪರಿಚಯಿಸಿದ್ದರು. ಬೌದ್ಧ ಧರ್ಮದ ಇತಿಹಾಸದಲ್ಲಿ ಗೌತಮ ಬುದ್ಧ ಮತ್ತು ಬೌದ್ಧಧರ್ಮದ ವಿವರಗಳಿದ್ದರೂ ಅದನ್ನು ಪರಿಚಯಿಸಿದ್ದು ಭಾರತೀಯ ಬೌದ್ಧ ಸನ್ಯಾಸಿ ಬೋಧಿ ಧರ್ಮ.
ಮಹಾಯಾನ ಸಂಪ್ರದಾಯದಲ್ಲಿ ಬೌದ್ಧಧರ್ಮದ ಅತಿ ಶ್ರೇಷ್ಠ ವ್ಯಕ್ತಿಯಾಗಿ ಬೋಧಿ ಧರ್ಮನನ್ನು ಪೂಜಿಸಲಾಗುತ್ತದೆ. ಭಾರತ ಮತ್ತು ಚೀನಾದಲ್ಲಿ ಇವರು ಬೋಧಿಸತ್ವ - ಬೋಧಿಧರ್ಮದ ಉಪದೇಶಗಳನ್ನು ಮಾಡಿದರು. ಚೀನಾಕ್ಕೆ ಧರ್ಮೋಪದೇಶ ಮಾಡಲು ಹೋದ ಮೊದಲ ಭಾರತೀಯ ವ್ಯಕ್ತಿ ಇವರು.
ಕ್ರಿ.ಶ. ಐದು ಅಥವಾ ಆರನೇ ಶತಮಾನದಲ್ಲಿ ತಮಿಳುನಾಡಿನಲ್ಲಿ ಇವರು ವಾಸವಾಗಿದ್ದರು ಎನ್ನಲಾಗುತ್ತದೆ. ಇವರನ್ನು ಚೀನಾದಲ್ಲಿ ಚಾನ್ ಮತ್ತು ಜಪಾನ್‌ನಲ್ಲಿ ಝೆನ್ ಎಂದು ಕರೆಯಲಾಗುತ್ತದೆ. ಅವರು ಅಲ್ಲಿನ ಶಾವೋಲಿನ್ ದೇವಾಲಯ ಮತ್ತು ಸಮರ ಕಲೆಗಳೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎನ್ನುತ್ತದೆ ಇತಿಹಾಸ.
ಕ್ರಿ.ಶ. 495ರಲ್ಲಿ ಚಕ್ರವರ್ತಿ ಕ್ಸಿಯಾವೆನ್ ಬಟುವೊ ಎಂಬಾತ ಭಾರತೀಯ ಸನ್ಯಾಸಿಯ ಗೌರವಾರ್ಥವಾಗಿ ಕಾಡಿನಲ್ಲಿ ದೇವಾಲಯವನ್ನು ನಿರ್ಮಿಸಲು ಆದೇಶಿಸಿದನು ಎನ್ನಲಾಗುತ್ತದೆ. ಇಲ್ಲಿಗೆ ಸುಮಾರು 30 ವರ್ಷಗಳ ಅನಂತರ ಬಂದ, ಬೋಧಿಧರ್ಮ ಹತ್ತಿರದ ಗುಹೆಯಲ್ಲಿ ಒಂಬತ್ತು ವರ್ಷಗಳ ಕಾಲ ಧ್ಯಾನ ಮಾಡುತ್ತಾ ಸನ್ಯಾಸಿಗಳಿಗೆ ಝೆನ್ ಬೌದ್ಧಧರ್ಮ ಮತ್ತು ಶಾವೋಲಿನ್ ಕುಂಗ್ ಫೂ ಅನ್ನು ಕಲಿಸಿದ್ದನು. ಇದರ ಮೂಲ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್ (ಐಎಎಸ್) ಕಾಂಚಿಪುರಂನ ಬೋಧಿ ಧರ್ಮ ಸೆಂಟರ್ ಫಾರ್ ಇಂಡಿಯನ್ ಫಿಲಾಸಫಿಯಲ್ಲಿದೆ.
ಬೋಧಿಧರ್ಮ ಯಾರು?
ಈತ ಪಲ್ಲವ ರಾಜವಂಶದ ರಾಜಕುಮಾರ ಬೋಧಿವರ್ಮನ್ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆತನ ಮೂಲದ ಬಗ್ಗೆ ಗೊಂದಲವಿದೆ. ಕಾಂಚೀಪುರಂ ಅಥವಾ ಚೆನ್ನೈ ಆಗಿರಬಹುದು ಎಂದು ಊಹಿಸಲಾಗಿದೆ. ಪುರಾತತ್ತ್ವ ಇಲಾಖೆ ವೆಬ್‌ಸೈಟ್ ಪ್ರಕಾರ ಇಟ ದಕ್ಷಿಣ ಭಾರತದ ಸಾಮ್ರಾಜ್ಯದ ಮೂರನೇ ರಾಜಕುಮಾರ ಎನ್ನಲಾಗಿದೆ. ಇಂಡೋ-ಬೌದ್ಧ ಪರಂಪರೆ (ಐಬಿಹೆಚ್) ವೇದಿಕೆಯ ವರದಿಯ ಪ್ರಕಾರ ಬೋಧಿಧರ್ಮನು ದಕ್ಷಿಣ ಭಾರತದ ಪ್ರಾಚೀನ ಪಲ್ಲವ ರಾಜವಂಶದ ಪಲ್ಲವ ರಾಜ ಎರಡನೇ ಸಿಂಹವರ್ಮನ್ ನ ಮೂರನೇ ಮಗ ಎನ್ನಲಾಗಿದೆ.
ಇದನ್ನೂ ಓದಿ: Viral News: ಊಟ ತಿಂಡಿ ಬೇಡ ಇಂಜಿನ್ ಆಯಿಲ್ ಸಾಕು; 28 ವರ್ಷಗಳಿಂದ ಇದನ್ನೇ ಕುಡಿದು ಬದುಕುತ್ತಿರುವ ವ್ಯಕ್ತಿ
ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಂಡಿದ್ಧ ಪಲ್ಲವ ರಾಜ್ಯವು ಮಹಾಯಾನ ಬೌದ್ಧಧರ್ಮದ ತೊಟ್ಟಿಲು ಎಂದೇ ಕರೆಯಲಾಗುತ್ತದೆ. ಝೆನ್ ಬೌದ್ಧಧರ್ಮವು ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ ಮತ್ತು ಇತರ ಕೆಲವು ದೇಶಗಳಲ್ಲಿ ಪ್ರಚಲಿತದಲ್ಲಿದೆ. ಇದು ಕೇವಲ ಅಭ್ಯಾಸವಲ್ಲ. ಸಾಮಾನ್ಯ ಜನರ ಸಂಸ್ಕೃತಿ, ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಮತ್ತು ಜ್ಞಾನೋದಯದ ಗುರುತಾಗಿದೆ.