ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Taliban Warning: ಪಾಕ್ ಸೇನೆಯನ್ನು ಭಾರತದ ಗಡಿಯವರೆಗೆ ಅಟ್ಟಿಸುತ್ತೇವೆ...ತಾಲಿಬಾನ್‌ಗಳ ಪ್ರತಿಜ್ಞೆ

Taliban Warning to Pakistan Army:ಕದನ ವಿರಾಮ ಘೋಷಣೆಯ ಬಳಿಕವೂ ದಾಳಿಯನ್ನು ಮುಂದುವರಿಸಿರುವ ಪಾಕಿಸ್ತಾನಕ್ಕೆ ಇದೀಗ ಮತ್ತೆ ತಾಲಿಬಾನ್ ಎಚ್ಚರಿಕೆಯನ್ನು ನೀಡಿದೆ. ಆಕ್ರಮಣ ಪ್ರಯತ್ನಗಳನ್ನು ಹೀಗೆಯೇ ಮುಂದುವರಿಸಿದರೆ ಪಾಕಿಸ್ತಾನ ಸೈನ್ಯವನ್ನು ಭಾರತದ ಗಡಿಯವರೆಗೆ ಅಟ್ಟಿಸಿಕೊಂಡು ಹೋಗುವುದಾಗಿ ಅಫ್ಘಾನ್ ತಾಲಿಬಾನ್ ಉಪ ಸಚಿವ ಮೌಲವಿ ಮುಹಮ್ಮದ್ ನಬಿ ಒಮರಿ ಎಚ್ಚರಿಕೆ ನೀಡಿದ್ದಾರೆ.

ಕಾಬೂಲ್: ಆಫ್ಘಾನ್ ಪಡೆಗಳು ಮತ್ತು ಬುಡಕಟ್ಟು ಜನಾಂಗದವರು ಆಕ್ರಮಣಕಾರರೆಂದು ಪರಿಗಣಿಸಿದರೆ ಪಾಕಿಸ್ತಾನದ (Pakistan) ಸೇನೆಯನ್ನು ಭಾರತದ ಗಡಿಯವರೆಗೂ (Indian border) ಅಟ್ಟಿಸಿಕೊಂಡು ಹೋಗುವುದಾಗಿ ತಾಲಿಬಾನ್ ಎಚ್ಚರಿಕೆ (Taliban Warning) ನೀಡಿದೆ. ಕದನ ವಿರಾಮ ಘೋಷಣೆಯ ಬಳಿಕವೂ ದಾಳಿಯನ್ನು ಮುಂದುವರಿಸಿರುವ ಪಾಕಿಸ್ತಾನವನ್ನು ಆಫ್ಘಾನ್ ಪಡೆಗಳು ಮತ್ತು ಬುಡಕಟ್ಟು ಜನಾಂಗದವರು ಆಕ್ರಮಣಕರಾರು ಎಂದು ಪರಿಗಣಿಸಿದರೆ ಭಾರತದ ಗಡಿ ಭಾಗದವರೆಗೂ ನಿಮ್ಮ ಸೈನ್ಯವನ್ನು ಅಟ್ಟಿಸಿಕೊಂಡು ಹೋಗುತ್ತೇವೆ ಎಂದು ಅಫ್ಘಾನ್ ಆಂತರಿಕ ವ್ಯವಹಾರಗಳ ಉಪ ಸಚಿವ ಮತ್ತು ತಾಲಿಬಾನ್ ನಾಯಕ ಮೌಲವಿ ಮುಹಮ್ಮದ್ ನಬಿ ಒಮರಿ (Afghan Taliban Deputy Minister Mawlawi Muhammad Nabi Omari) ಕಟುವಾಗಿ ಎಚ್ಚರಿಸಿದ್ದಾರೆ.

ಧಾರ್ಮಿಕ ಆದೇಶದ ಮೂಲಕ ಅಫ್ಘಾನಿಸ್ತಾನವು ಒಮ್ಮೆ ಪಾಕಿಸ್ತಾನವನ್ನು ಆಕ್ರಮಣಕಾರರೆಂದು ಘೋಷಿಸಿದರೆ ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ನೀವು ಭಾರತದ ಗಡಿಯವರೆಗೆ ಸಹ ಸುರಕ್ಷತೆಯನ್ನು ಕಂಡುಕೊಳ್ಳುವುದಿಲ್ಲ ಎಂದು ಒಮರಿ ಪಾಕಿಸ್ತಾನ ಸೈನ್ಯಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಸ್ಲಾಮಾಬಾದ್‌ನ ನಾಗರಿಕ ಮತ್ತು ಮಿಲಿಟರಿ ನಾಯಕತ್ವವನ್ನು ಟೀಕಿಸಿದ ಅವರು, ಪಾಕಿಸ್ತಾನಿ ಮಿಲಿಟರಿ ಆಡಳಿತವು ಇತರರ ಇಚ್ಛೆಯಂತೆ ಎಲ್ಲವನ್ನು ಮಾಡುತ್ತದೆ. ಒಂದು ಕಾಲದಲ್ಲಿ ಅಫ್ಘಾನಿಸ್ತಾನ ಕಳೆದುಕೊಂಡಿದ್ದ ಡುರಾಂಡ್ ರೇಖೆಯ ಆಚೆಗಿನ ಪ್ರದೇಶಗಳು ಅಂತಿಮವಾಗಿ ಅಫ್ಘಾನ್ ಮರಳಿ ಪಡೆಯಬಹುದು ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದರು.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಒಮರಿ ಈ ಎಚ್ಚರಿಕೆ ನೀಡಿದ್ದಾರೆ. ಇಸ್ಲಾಮಾಬಾದ್ 48 ಗಂಟೆಗಳ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಕಾಬೂಲ್ ಆರೋಪಿಸಿದೆ. ಇದು ಸುಮಾರು ಒಂದು ವಾರದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಎರಡೂ ಕಡೆಗಳಲ್ಲಿ ಹಲವಾರು ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದರು.

ಇದನ್ನೂ ಓದಿ: Deepavali 2025: ಫ್ಲೋರಿಡಾ ರಾಜಧಾನಿಯಲ್ಲಿ ದೀಪಾವಳಿ ಆಚರಣೆ; ಭಾರತೀಯ ಸಂಸ್ಕೃತಿಗೆ ಗೌರವ

ಇಸ್ಲಾಮಾಬಾದ್ 48 ಗಂಟೆಗಳ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಕಾಬೂಲ್ ಆರೋಪಿಸಿದೆ. ಇದು ಸುಮಾರು ಒಂದು ವಾರದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಎರಡೂ ಕಡೆಗಳಲ್ಲಿ ಹಲವಾರು ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದರು.

ಇಸ್ಲಾಮಾಬಾದ್ 48 ಗಂಟೆಗಳ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಕಾಬೂಲ್ ಆರೋಪಿಸಿದೆ. ಇದು ಸುಮಾರು ಒಂದು ವಾರದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಎರಡೂ ಕಡೆಗಳಲ್ಲಿ ಹಲವಾರು ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದರು. ವಾರಗಳ ಘರ್ಷಣೆಯ ಬಳಿಕ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಕ್ಷಣ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು. ಈ ಬಗ್ಗೆ ದೋಹಾದಲ್ಲಿ ಮಾತುಕತೆಗಳನ್ನು ನಡೆಸಲಾಗಿತ್ತು ಎಂದು ಕತಾರ್ ವಿದೇಶಾಂಗ ಸಚಿವಾಲಯ ಹೇಳಿದೆ.

ದೋಹಾದಲ್ಲಿ ಶನಿವಾರ ತಡರಾತ್ರಿವರೆಗೂ ನಡೆದ ಎರಡು ದೇಶಗಳ ನಡುವಿನ ಮೊದಲ ಸುತ್ತಿನ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒಪ್ಪಿಕೊಂಡವು.

ಇದನ್ನೂ ಓದಿ: Pakistan-Afghanistan Talks: ಪಾಕಿಸ್ತಾನ-ಅಫ್ಘಾನಿಸ್ತಾನದ ಶಾಂತಿ ಮಾತುಕತೆ ಯಶಸ್ವಿ

ರಕ್ಷಣಾ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಐಎಸ್‌ಐ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಸಿಮ್ ಮಲಿಕ್ ಅವರು ಪಾಕಿಸ್ತಾನಿ ನಿಯೋಗವನ್ನು ಮುನ್ನಡೆಸುತ್ತಿದ್ದರೆ ರಕ್ಷಣಾ ಸಚಿವ ಮುಲ್ಲಾ ಮುಹಮ್ಮದ್ ಯಾಕೂಬ್ ನೇತೃತ್ವದ ಕಾಬೂಲ್ ನಿಯೋಗವು ದೋಹಾ ಮಾತುಕತೆಗಳಲ್ಲಿ ಭಾಗವಹಿಸಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರು ತಾಲಿಬಾನ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author