ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Texas Flood: ಟೆಕ್ಸಾಸ್‌ನಲ್ಲಿ ಭಾರೀ ಪ್ರವಾಹ; ಸಾವಿನ ಸಂಖ್ಯೆ 43ಕ್ಕೆ ಏರಿಕೆ, 27 ಬಾಲಕಿಯರು ನಾಪತ್ತೆ

ಟೆಕ್ಸಾಸ್‌ನಲ್ಲಿ ಶುಕ್ರವಾರ ಭಾರೀ ಪ್ರವಾಹ ಸಂಭವಿಸಿದೆ. ಟೆಕ್ಸಾಸ್‌ನ ಗ್ವಾಡಾಲುಪೆ ನದಿಯುದ್ದಕ್ಕೂ ಧಾರಾಕಾರ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದೆ. ನದಿಯ ಪಕ್ಕದಲ್ಲಿಯೇ ಬೇಸಿಗೆ ಶಿಬಿರ ನಡೆಯುತ್ತಿತ್ತು. ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ ಮತ್ತು 24 ಯುವತಿಯರು ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ವಾಷಿಂಗ್ಟನ್‌: ಟೆಕ್ಸಾಸ್‌ನಲ್ಲಿ (Texas Flood) ಶುಕ್ರವಾರ ಭಾರೀ ಪ್ರವಾಹ ಸಂಭವಿಸಿದೆ. ಟೆಕ್ಸಾಸ್‌ನ ಗ್ವಾಡಾಲುಪೆ ನದಿಯುದ್ದಕ್ಕೂ ಧಾರಾಕಾರ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದೆ. ನದಿಯ ಪಕ್ಕದಲ್ಲಿಯೇ ಬೇಸಿಗೆ ಶಿಬಿರ ನಡೆಯುತ್ತಿತ್ತು. ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ ಮತ್ತು 24 ಯುವತಿಯರು ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣಾ ತಂಡಗಳು ನಾಪತ್ತೆಯಾದ ನಿವಾಸಿಗಳನ್ನು ಹುಡುಕುತ್ತಿವೆ. ಕೆರ್ ಕೌಂಟಿಯ ಕ್ರಿಶ್ಚಿಯನ್ ಬೇಸಿಗೆ ಶಿಬಿರವಾದ ಕ್ಯಾಂಪ್ ಮಿಸ್ಟಿಕ್‌ನ 24 ಬಾಲಕಿಯರು ಪ್ರವಾಹದಲ್ಲಿ ಸಿಲುಕಿದ್ದಾರೆ.

ಗುಡಾಲುಪೆ ನದಿಯಲ್ಲಿ ನೀರಿನ ಮಟ್ಟ ಕೇವಲ 45 ನಿಮಿಷಗಳಲ್ಲಿ 26 ಅಡಿಗಳಷ್ಟು ಏರಿಕೆಯಾಗಿ ಪ್ರವಾಹಕ್ಕೆ ಕಾರಣವಾಯಿತು. ಮೊದಲು ನದಿಯ ಪಕ್ಕದಲ್ಲಿದ್ದ ಕ್ಯಾಬಿನ್‌ಗಳು, ಮನೆಗಳು ಮತ್ತು ವಾಹನಗಳು ಕೊಚ್ಚಿಹೋದವು, ಆನಂತರ ನೀರು ಟೆಕ್ಸಾಸ್ ನಗರದೊಳಕ್ಕೆ ನುಗ್ಗಿತು ಎಂದು ಮೂಲಗಳು ತಿಳಿಸಿವೆ. ದಿಢೀರ್ ಪ್ರವಾಹದಿಂದ ನಾಪತ್ತೆಯಾದ ಮಕ್ಕಳ ಫೋಟೋಗಳನ್ನು ಕುಟುಂಬಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸ್ಥಳೀಯ ಅಧಿಕಾರಿಗಳು ಪ್ರವಾಹದ ಬಗ್ಗೆ ನಿರೀಕ್ಷಿಸಿರಲಿಲ್ಲ. ಈ ಬಗ್ಗೆ ಹವಾಮಾನ ಇಲಾಖೆಯಿಂದಲೂ ಯಾವುದೇ ಮುನ್ಸೂಚನೆಯಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಅಕ್ಯುವೆದರ್ ಮತ್ತು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ ಬಿರುಗಾಳಿ ಬರುವ ಮುಂಚೆಯೇ ಎಚ್ಚರಿಕೆಗಳನ್ನು ನೀಡಿದ್ದವು ಎಂದು ಹೇಳಿವೆ. ಟೆಕ್ಸಾಸ್ ಲೆಫ್ಟಿನೆಂಟ್ ಗವರ್ನರ್ ಡಾನ್ ಪ್ಯಾಟ್ರಿಕ್ ಎಚ್ಚರಿಕೆಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಬಿರುಗಾಳಿಯ ನಿಖರವಾದ ವೇಗ ಊಹಿಸಲು ಕಷ್ಟವಾಗಿತ್ತು. ಹಾಗಾಗಿ, ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿ ಪ್ರವಾಹಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಪ್ರವಾಹಕ್ಕೆ ಸಿಲುಕಿ ನಲುಗಿದವರನ್ನು ರಕ್ಷಣೆ ಮಾಡುವ ಕೆಲಸ ಭರದಿಂದ ಸಾಗಿದೆ. ಟ್ಯಾಕ್ಟಿಕಲ್ ಡಿಪ್ಲಾಯಮೆಂಟ್ ಯೂನಿಟ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.ಕೆರ್ ಕೌಂಟಿಯಲ್ಲಿರುವ ಗ್ವಾಡಾಲುಪೆ ನದಿಯಲ್ಲಿ 7.5 ಅಡಿ ಅಂದರೆ ಸುಮಾರು 2.3 ಮೀಟರ್ ಇದ್ದ ನೀರು ಪ್ರವಾಹದಿಂದಾಗಿ ಒಮ್ಮಿಂದೊಮ್ಮೆಲೆ ಸುಮಾರು 30 ಅಡಿಗಳಿಗೆ ಏರಿಕೆ ಕಂಡಿದೆ. ಸದ್ಯ ಪ್ರವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಈ ಸುದ್ದಿಯನ್ನೂ ಓದಿ: Kangana Ranaut: "ಅವರಿಗೆ ಕಾಳಜಿ ಇಲ್ಲ" ; ಪ್ರವಾಹದ ಕುರಿತು ಮಾತನಾಡದ ಕಂಗನಾ ನಡೆಗೆ ಸ್ವಪಕ್ಷದವರೇ ಗರಂ!

ಪ್ರವಾಹದಲ್ಲಿ ಮೃತಪಟ್ಟ ಕುಟುಂಬಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾಂತ್ವನ ಹೇಳಿದ್ದಾರೆ. ಜನರ ರಕ್ಷಣೆಗಾಗಿ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಈವರೆಗೆ (ಜು. 5ರ ರಾತ್ರಿಯೊಳಗೆ) ಅಂದಾಜು 240 ಜನರನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್‌ಗಳು, ದೋಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿ ಹುಡುಕಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.