Kangana Ranaut: "ಅವರಿಗೆ ಕಾಳಜಿ ಇಲ್ಲ" ; ಪ್ರವಾಹದ ಕುರಿತು ಮಾತನಾಡದ ಕಂಗನಾ ನಡೆಗೆ ಸ್ವಪಕ್ಷದವರೇ ಗರಂ!
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಸಂಭವಿಸಿದ ಪ್ರವಾಹದಿಂದ ತತ್ತರಿಸಿರುವ ತಮ್ಮ ಸಂಸದೀಯ ಕ್ಷೇತ್ರ ಕುರಿತು ಕಂಗನಾ ರನೌತ್ ನೀಡಿದ ಬಹಳ ವಿಳಂಬವಾದ ಹೇಳಿಕೆ ವಿರುದ್ಧ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಕೂಡ ಬಿಜೆಪಿ ಸಂಸದೆಯ ನಡೆಯನ್ನು ಪ್ರಶ್ನಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಘಾನಾ ಭೇಟಿಯ ಬಗ್ಗೆ ಕಂಗನಾ ಪೋಸ್ಟ್ ಮಾಡಿದ್ದರು. ಆದರೆ ಮಂಡಿ ಕುರಿತು ಯಾವುದೇ ಪೋಸ್ಟ್ ಇಲ್ಲವೇ ಹೇಳಿಕೆಗಳು ಬಂದಿರಲಿಲ್ಲ.


ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿಯಲ್ಲಿ ಸಂಭವಿಸಿದ ಪ್ರವಾಹದಿಂದ ತತ್ತರಿಸಿರುವ ತಮ್ಮ ಸಂಸದೀಯ ಕ್ಷೇತ್ರ ಕುರಿತು ಕಂಗನಾ ರನೌತ್ (Kangana Ranaut) ನೀಡಿದ ಬಹಳ ವಿಳಂಬವಾದ ಹೇಳಿಕೆ ವಿರುದ್ಧ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಕೂಡ ಬಿಜೆಪಿ ಸಂಸದೆಯ ನಡೆಯನ್ನು ಪ್ರಶ್ನಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಘಾನಾ ಭೇಟಿಯ ಬಗ್ಗೆ ಕಂಗನಾ ಪೋಸ್ಟ್ ಮಾಡಿದ್ದರು. ಆದರೆ ಮಂಡಿ ಕುರಿತು ಯಾವುದೇ ಪೋಸ್ಟ್ ಇಲ್ಲವೇ ಹೇಳಿಕೆಗಳು ಬಂದಿರಲಿಲ್ಲ. ಈ ಕುರಿತು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಜೈರಾಮ್ ಠಾಕೂರ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಅವರು ಹೇಳಿದ ಹೇಳಿಕೆಗಳು ಬಿಜೆಪಿ ವಲಯದಲ್ಲಿ ಬಿರುಕು ಮೂಡಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕಂಗನಾ ಮಂಡಿಯ ಪರಿಸ್ಥಿತಿಯ ಬಗ್ಗೆ ಏಕೆ ಪ್ರತಿಕ್ರಿಯಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಠಾಕೂರ್, "ನನಗೆ ಗೊತ್ತಿಲ್ಲ, ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಕಾಳಜಿ ವಹಿಸುವವರಿಗಾಗಿ ನೆರವು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಕಾಳಜಿ ವಹಿಸದವರ ಬಗ್ಗೆ ನಾನು ಕಾಮೆಂಟ್ ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಪಕ್ಷದೊಳಗಿನ ಭಿನ್ನಾಭಿಪ್ರಾಯದ ಕುರಿತು ಆಕ್ರೋಶ ವ್ಯಕ್ತವಾಗಿದೆ.
ಠಾಕೂರ್ ಅವರ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್, "ಸಂಸದ ಕಂಗನಾ ರನೌತ್ ಅವರಿಗೆ ಮಂಡಿಯ ಜನರ ಬಗ್ಗೆ ಕಾಳಜಿ ಇಲ್ಲ. ಇವು ನಮ್ಮ ಮಾತುಗಳಲ್ಲ, ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ದಾರೆ ಎಂದು ಹೇಳಿದೆ. ಮಂಡಿಯಲ್ಲಿ ಪ್ರಸ್ತುತ ಭಾರೀ ಮಳೆಯಾಗುತ್ತಿದ್ದು, ಇದು ನಿವಾಸಿಗಳ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸೋಮವಾರದಿಂದ ಮಂಡಿಯಲ್ಲಿ ಸಂಭವಿಸಿದ ಮೇಘಸ್ಫೋಟ ಮತ್ತು ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 14 ಜನರು ಮೃತಪಟ್ಟಿದ್ದಾರೆ. ಈ ವರೆಗೆ 30 ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ. ಜುಲೈ 7 ರವರೆಗೆ ರಾಜ್ಯದಲ್ಲಿ ರೆಡ್ ಅಲರ್ಟ್ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ: Jharkhand Flood: ಜಮ್ಶೆಡ್ಪುರದಲ್ಲಿ ಪ್ರವಾಹದಿಂದ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಪ್ರಕಾರ, ಈ ವಿಪತ್ತುಗಳಲ್ಲಿ 150 ಕ್ಕೂ ಹೆಚ್ಚು ಮನೆಗಳು, 106 ದನದ ಕೊಟ್ಟಿಗೆಗಳು, 31 ವಾಹನಗಳು, 14 ಸೇತುವೆಗಳು ಮತ್ತು ಹಲವಾರು ರಸ್ತೆಗಳು ಹಾನಿಗೊಳಗಾಗಿವೆ. ಹಿಮಾಚಲ ಪ್ರದೇಶದಾದ್ಯಂತ ಕನಿಷ್ಠ 37 ಕ್ಕೂ ಜನರು ಮೃತಪಟ್ಟಿದ್ದಾರೆ. ಜೊತೆಗೆ 400 ಕೋಟಿ ರೂ. ಆಸ್ತಿಪಾಸ್ತಿಗೆ ಹಾನಿಯಾಗಿದೆ.