ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tony Abbott: ನಾಲ್ಕೈದು ದಶಕಗಳ ಬಳಿಕ ಭಾರತದ ಪ್ರಧಾನಿ ಜಗತ್ತಿಗೆ ನಾಯಕನಾಗಲಿದ್ದಾರೆ: ಆಸ್ಟ್ರೇಲಿಯಾದ ಮಾಜಿ ಟೋನಿ ಅಬಾಟ್

21ನೇ ಶತಮಾನ ಭಾರತದ್ದಾಗಲಿದ್ದು, ನಾಲ್ಕೈದು ದಶಕಗಳ ಬಳಿಕ ಅಮೆರಿಕದಿಂದ ಮುಕ್ತವಾಗಿ ಇಲ್ಲಿನ ಪ್ರಧಾನಿ ಜಗತ್ತಿಗೆ ನಾಯಕರಾಗಲಿದ್ದಾರೆ. ದೆಹಲಿಯು ವಿಶ್ವದ ಹೊಸ ಮಹಾಶಕ್ತಿಗಳಲ್ಲಿ ಒಂದಾಗಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ಅವರು ವಿಶ್ವ ಶೃಂಗಸಭೆ 2025 ರಲ್ಲಿ ಹೇಳಿದರು.

ನವದೆಹಲಿ: ನಾಲ್ಕು ಅಥವಾ ಐದು ದಶಕಗಳ ಬಳಿಕ ಭಾರತದ ಪ್ರಧಾನಿ (Indian Prime Minister) ಜಗತ್ತಿಗೆ ನಾಯಕನಗಲಿದ್ದಾರೆ. 21ನೇ ಶತಮಾನವು ಭಾರತಕ್ಕೆ ಸೇರಿದೆ. ಇಲ್ಲಿನ ಪ್ರಧಾನಿ ಯಾರೇ ಆದರೂ ಅಮೆರಿಕದ ಅಧ್ಯಕ್ಷರಿಂದ ಮುಕ್ತ ಜಗತ್ತಿನ ನಾಯಕನಾಗಿ ಜವಾಬ್ದಾರಿಯನ್ನು ಪಡೆದುಕೊಳ್ಳಬಹುದು ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ (former Australian Prime Minister Tony Abbott) ಹೇಳಿದರು. ವಿಶ್ವ ಶೃಂಗಸಭೆ 2025ರಲ್ಲಿ (World Summit 2025) ಶುಕ್ರವಾರ ಮಾತನಾಡಿದ ಅವರು, ವಿಶ್ವದ ಹೊಸ ಮಹಾಶಕ್ತಿಗಳಲ್ಲಿ ಒಂದಾಗಿ, ಏಷ್ಯಾ- ಪೆಸಿಫಿಕ್ ಪ್ರದೇಶದಲ್ಲಿ ಆಸ್ಟ್ರೇಲಿಯಾಕ್ಕೆ ಬಲವಾದ ವಿಶ್ವಾಸಾರ್ಹ ಪಾಲುದಾರವಾಗಿ ತನ್ನ ಪಾತ್ರವನ್ನು ವಹಿಸುವಂತೆ ದೆಹಲಿಗೆ ಕರೆ ನೀಡಿದರು.

2022ರಲ್ಲಿ ಭಾರತವು ಆಸ್ಟ್ರೇಲಿಯಾದೊಂದಿಗೆ, ಕಳೆದ ತಿಂಗಳು ಇಂಗ್ಲೆಂಡ್‌ನೊಂದಿಗೆ ವಿವಿಧ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಇದು ಪ್ರಜಾಪ್ರಭುತ್ವ ಜಗತ್ತು ಚೀನಾದಿಂದ ಭಾರತದತ್ತ ದೃಷ್ಟಿ ಹರಿಸುತ್ತಿದೆ ಎನ್ನುವುದರ ಸಂಕೇತ ಎಂದು ಅವರು ಹೇಳಿದರು.

ಸಂವಾದದಲ್ಲಿ ಚೀನಾ, ಪಾಕಿಸ್ತಾನ ಮತ್ತು ಅಮೆರಿಕ ಜತೆಗಿನ ಭಾರತದ ಸಂಬಂಧಗಳ ಅವಲೋಕನವನ್ನು ನೀಡಿದ ಅವರು, ಜಗತ್ತಿನ ಮೇಲೆ ಪ್ರಾಬಲ್ಯ ಸಾಧಿಸುವ ಬೀಜಿಂಗ್‌ನ ಮಹತ್ವಾಕಾಂಕ್ಷೆಗಳನ್ನು ತಡೆಯಲು ದೆಹಲಿ ಪ್ರಮುಖ ಪಾತ್ರ ವಹಿಸುತ್ತದೆ. ಚೀನಾ ಪ್ರಾಬಲ್ಯ ಸಾಧಿಸಬೇಕೆಂದು ಬಯಸುತ್ತದೆ. ಇದು ಚೀನಾದ ಎಲ್ಲ ನೆರೆಹೊರೆಯವರಿಗೆ ಹಾಗೂ ಜಗತ್ತಿಗೆ ತೊಂದರೆಯನ್ನುಂಟು ಮಾಡುತ್ತಿದೆ ಎಂದರು.

ಭಾರತದ ಅನುಕೂಲಗಳು

ಭಾರತವು ಚೀನಾಕ್ಕೆ ಪ್ರತಿಭಾರವಾಗಿದೆ. ಇಲ್ಲಿ ಹೆಚ್ಚು ಜನಸಂಖ್ಯೆ ಇದೆ. ಯಾವುದೇ ಭಾರತೀಯ ನಗರಕ್ಕೆ ಹೋದರೂ ಮೂಲಸೌಕರ್ಯ, ಹೊಸ ವಿಮಾನ ನಿಲ್ದಾಣಗಳು ಇವೆ. ಇದು ಚೀನಾಕ್ಕೆ ಪರ್ಯಾಯವಾಗಿದೆ. 21ನೇ ಶತಮಾನವು ಚೀನಾಕ್ಕೆ ಸೇರಿದಂತೆಯೇ ಭಾರತಕ್ಕೂ ಸೇರಿದೆ ಎಂದು ಅವರು ತಿಳಿಸಿದರು.

ಭಾರತದೊಂದಿಗೆ ಸಂಬಂಧ ಹೊಂದುವುದರಿಂದ ಮೂರು ದೊಡ್ಡ ಪ್ರಯೋಜನಗಳಿವೆ. ಪ್ರಜಾಪ್ರಭುತ್ವ, ಕಾನೂನಿನ ನಿಯಮ ಮತ್ತು ಇಂಗ್ಲಿಷ್. ಕೆಲವು ದಶಕಗಳ ಹಿಂದೆ ಚೀನಾ ಸಾಧಿಸಿದ ಆರ್ಥಿಕ ಮತ್ತು ಮಿಲಿಟರಿ ಶಕ್ತಿ ಪಡೆಯಲು ಕೂಡ ಭಾರತ ತಯಾರಿ ನಡೆಸುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಿಯಾಗಿ ಭಾರತವು ಪ್ರಜಾಪ್ರಭುತ್ವದ ಸೂಪರ್ ಪವರ್ ಆಗಿದೆ. ಮುಂದಿನ 40-50 ವರ್ಷಗಳಲ್ಲಿ ಭಾರತದ ಪ್ರಧಾನಿಯು ಮುಕ್ತ ಜಗತ್ತಿನ ನಾಯಕನಾಗುವ ಸಾಧ್ಯತೆಯಿದೆ ಎಂದರು. ಚೀನಾ ಒಡ್ಡಿರುವ ಬೆದರಿಕೆಯ ಕುರಿತು ಮಾತನಾಡಿದ ಅಬಾಟ್, ತೈವಾನ್ ಸೇರಿದಂತೆ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಚೀನಾದ ಆಕ್ರಮಣಕಾರಿ ನಿಲುವನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದರು.

ಚೀನಾ ಯಾವುದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಶಾಂತಿಯುತ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದ ಅವರು, ತೈವಾನ್ ಅನ್ನು ವಶಪಡಿಸಿಕೊಳ್ಳುವ ಚೀನಾದ ಪ್ರಯತ್ನಗಳು ವಿಫಲಗೊಳ್ಳುತ್ತವೆ ಎಂದರು.

ಉಕ್ರೇನ್‌ ಯುದ್ಧದ ಕುರಿತು ಮಾತನಾಡಿದ ಅವರು, ವಿಶ್ವ ಪ್ರಾಬಲ್ಯ ರಾಷ್ಟ್ರವಾಗುವ ಕನಸು ಕಾಣುತ್ತಿರುವ ಚೀನಾ ಒಗ್ಗಟ್ಟಿನ ಪ್ರದರ್ಶನ ನೀಡಬೇಕು ಎಂದು ಹೇಳಿದರು. ಇನ್ನು ಅಮೆರಿಕದ ಸುಂಕದ ಕುರಿತು ಮಾತನಾಡಿದ ಅವರು, ಡೊನಾಲ್ಡ್ ಟ್ರಂಪ್ ರಷ್ಯಾದ ತೈಲವನ್ನು ಖರೀದಿಸುತ್ತಿರುವುದಕ್ಕೆ ಶೇಕಡಾ 25ರಷ್ಟು ದಂಡ ಸುಂಕವನ್ನು ವಿಧಿಸುವ ಮೂಲಕ ಭಾರತದೊಂದಿಗೆ ತಪ್ಪಾಗಿ ನಡೆದುಕೊಂಡಿದ್ದಾರೆ ಎಂದು ನೇರವಾಗಿ ಹೇಳಿದರು. ನಾನು ಟ್ರಂಪ್ ಬೆಂಬಲಿಗ. ಆದರೆ ಅವರು ಭಾರತದ ವಿರುದ್ಧ ತಪ್ಪಾಗಿ ನಡೆದುಕೊಂಡಿದ್ದಾರೆ. ಇಲ್ಲಿ ಮೋಸ ಮಾಡುತ್ತಿರುವ ಇತರ ದೇಶಗಳಿವೆ. ರಷ್ಯಾದೊಂದಿಗಿನ ಶೀತಲ ಸಮರದ ಸಮಯದಲ್ಲಿ ಅಮೆರಿಕವು ದೊಡ್ಡ ತಪ್ಪು ಮಾಡಿದೆ. ಅದು ಭಾರತ ಮತ್ತು ಅದರ ಉದಾರವಾದಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಪಾಕಿಸ್ತಾನದ ಕಡೆಗೆ ವಾಲಿದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Afghanistan Vs Pak: ಪಾಕಿಸ್ತಾನಿ ಹೊರಠಾಣೆಗಳಿಗೆ ತಾಲಿಬಾನ್ ಮುತ್ತಿಗೆ- ಸಮವಸ್ತ್ರ, ಶಸ್ತ್ರಾಸ್ತ್ರಗಳು ವಶಕ್ಕೆ

ಪಾಕಿಸ್ತಾನದಲ್ಲಿ ಮಿಲಿಟರಿ ಸರ್ವಾಧಿಕಾರವಿದೆ. ಅಲ್ಲಿ ಒಳ್ಳೆಯ ಜನರೂ ಇದ್ದಾರೆ. ಭಾರತ ಇದಕ್ಕಿಂತ ಭಿನ್ನವಾಗಿದೆ. ಅಮೆರಿಕ ಪಾಕ್‌ನೊಂದಿಗೆ ಕೆಲಸ ಮಾಡಲಿ. ಆದರೆ ಅದು ತನ್ನ ಸ್ನೇಹಿತರು ಎಲ್ಲಿದ್ದಾರೆಂದು ತಿಳಿದುಕೊಳ್ಳಬೇಕಿತ್ತು ಎಂದು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author