ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fighter Jet Crash: ವಾಯುನೆಲೆಯ ಬಳಿಯೇ ಅಮೆರಿಕ ನೌಕಾಪಡೆಯ ಎಫ್-35 ಯುದ್ಧವಿಮಾನ ಪತನ

ಕ್ಯಾಲಿಫೋರ್ನಿಯಾದ ಕಿಂಗ್ಸ್ ಕೌಂಟಿಯಲ್ಲಿರುವ ನೇವಲ್ ಏರ್ ಸ್ಟೇಷನ್ ಲೆಮೂರ್ ಬಳಿಯ ಮೈದಾನದಲ್ಲಿ ಬುಧವಾರ (ಜುಲೈ 30) ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯ F-35C ಲೈಟ್ನಿಂಗ್ II ಸ್ಟೆಲ್ತ್ ಫೈಟರ್ ಜೆಟ್‌ ಪತನಗೊಂಡಿದೆ. ಸಂಜೆ 6:30 ರ ಸುಮಾರಿಗೆ ಫ್ರೆಸ್ನೋ ಕೌಂಟಿಯ ಕ್ಯಾಡಿಲಾಕ್ ಮತ್ತು ಡಿಕಿನ್ಸನ್ ಅವೆನ್ಯೂ ಬಳಿಯ ಮೈದಾನದಲ್ಲಿ ಈ ಫೈಟರ್ ಜೆಟ್‌ ಅಪಘಾತಕ್ಕೀಡಾಯಿತು.

ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದ ಕಿಂಗ್ಸ್ ಕೌಂಟಿಯಲ್ಲಿರುವ ನೇವಲ್ ಏರ್ ಸ್ಟೇಷನ್ ಲೆಮೂರ್ ಬಳಿಯ ಮೈದಾನದಲ್ಲಿ ಬುಧವಾರ (ಜುಲೈ 30) (America Plane Crash) ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯ F-35C ಲೈಟ್ನಿಂಗ್ II ಸ್ಟೆಲ್ತ್ ಫೈಟರ್ ಜೆಟ್‌ ಪತನಗೊಂಡಿದೆ. ಸಂಜೆ 6:30 ರ ಸುಮಾರಿಗೆ ಫ್ರೆಸ್ನೋ ಕೌಂಟಿಯ ಕ್ಯಾಡಿಲಾಕ್ ಮತ್ತು ಡಿಕಿನ್ಸನ್ ಅವೆನ್ಯೂ ಬಳಿಯ ಮೈದಾನದಲ್ಲಿ ಈ ಫೈಟರ್ ಜೆಟ್‌ ಅಪಘಾತಕ್ಕೀಡಾಯಿತು. ಲ್ಯಾಂಡಿಂಗ್‌ ವೇಳೆ ಈ ದುರ್ಘಟನೆ ಸಂಭವಿಸಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ವೈರಲ್‌ ಆದ ದೃಶ್ಯದಲ್ಲಿ ಉರಿಯುತ್ತಿರುವ ಅವಶೇಷಗಳಿಂದ ದಟ್ಟವಾದ ಹೊಗೆ ಮೇಲೇರುತ್ತಿರುವುದು ಕಂಡು ಬಂದಿದೆ. ಯುಎಸ್ ನೌಕಾಪಡೆಯ ಪ್ರಕಾರ, ಈ ವಿಮಾನವನ್ನು "ರಫ್ ರೈಡರ್ಸ್" ಎಂದು ಕರೆಯಲ್ಪಡುವ ಸ್ಟ್ರೈಕ್ ಫೈಟರ್ ಸ್ಕ್ವಾಡ್ರನ್ VF-125 ಗೆ ನಿಯೋಜಿಸಲಾಗಿತ್ತು. VF-125 ಒಂದು ಫ್ಲೀಟ್ ರಿಪ್ಲೇಸ್‌ಮೆಂಟ್ ಸ್ಕ್ವಾಡ್ರನ್ ಆಗಿದ್ದು, ಪೈಲಟ್‌ಗಳು ಮತ್ತು ಏರ್‌ಕ್ರ್ಯೂಗಳಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಹೊಂದಿದೆ.

ಅಪಘಾತದ ಕುರಿತು ಮಾಹಿತಿ ನೀಡಿದ ಸೇನೆ, ಪೈಲೆಟ್‌ ಸುರಕ್ಷಿತವಾಗಿ ಇದ್ದಾರೆ ಎಂದು ಹೇಳಿದ್ದಾರೆ. ಜುಲೈ 1961 ರಲ್ಲಿ ಕಾರ್ಯಾರಂಭ ಮಾಡಿದ ಈ ವಾಯುನೆಲೆಯು US ನೌಕಾಪಡೆಯ ಅತಿದೊಡ್ಡ ಮಾಸ್ಟರ್ ಜೆಟ್ ಬೇಸ್ ಆಗಿದೆ. ಈ ನೆಲೆಯು ನೌಕಾಪಡೆಯ ಅರ್ಧಕ್ಕಿಂತ ಹೆಚ್ಚು F/A-18E/F ಸೂಪರ್ ಹಾರ್ನೆಟ್ ಫೈಟರ್‌ಗಳಿಗೆ ನೆಲೆಯಾಗಿದೆ. ಅಮೆರಿಕದ ಅತ್ಯಂತ ಮುಂದುವರಿದ ಸ್ಟೆಲ್ತ್ ಫೈಟರ್‌ನ ರೂಪಾಂತರವಾದ F-35C ಲೈಟ್ನಿಂಗ್ II ಅನ್ನು ಇರಿಸುವ ಏಕೈಕ ನೌಕಾ ವಾಯುನೆಲೆ ಎಂಬ ಗೌರವವನ್ನು ಇದು ಹೊಂದಿದೆ.

ಈ ಸುದ್ದಿಯನ್ನೂ ಓದಿ: Air Force: ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ

ಢಾಕಾದಲ್ಲಿ ವಿಮಾನ ಪತನ

ಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್ (Bangladesh Plane Crash) ಅಪಘಾತಕ್ಕೀಡಾಗಿತ್ತು. ಢಾಕಾದಲ್ಲಿ ಚೀನಾ (China) ನಿರ್ಮಿತ F-7 BGI ವಿಮಾನ ಅಪಘಾತಕ್ಕೀಡಾಗಿದ್ದು 20 ಮಂದಿ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ 1:06ಕ್ಕೆ ವಿಮಾನ ಟೇಕ್ ಆಫ್ ಆಗಿದ್ದ ಸ್ವಲ್ಪ ಸಮಯದ ನಂತರ ಉತ್ತರದಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನವು ಮೈಲ್‌ಸ್ಟೋನ್ ಕಾಲೇಜಿನ ಕ್ಯಾಂಟೀನ್‌ನ ಛಾವಣಿಯ ಮೇಲೆ ಬಿದ್ದಿದೆ. ವಿಮಾನವು ಇದ್ದಕ್ಕಿದ್ದಂತೆ ದೊಡ್ಡ ಶಬ್ದದೊಂದಿಗೆ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭಯಭೀತರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕಟ್ಟಡವನ್ನು ಪ್ಲೇಗ್ರೂಪ್ ತರಗತಿಗಳಿಗೆ ಬಳಸಲಾಗುತ್ತಿತ್ತು. ವಿಮಾನ ಪತನದಲ್ಲಿ 20 ಮಂದಿ ಸಾವನ್ನಪ್ಪಿದ್ದು 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.