Air Force: ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ
ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ರಾಜಸ್ಥಾನದ ಚುರು ಎಂಬಲ್ಲಿ ಪತನವಾಗಿದ್ದು, ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಎಂದಿನಂತೆ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನ ಗದ್ದೆ ಮೇಲೆ ಬಿದ್ದಿದೆ ಎನ್ನಲಾಗಿದೆ. ಸದ್ಯ ಪ್ರಕರಣ ತನಿಖೆ ನಡೆಯುತ್ತಿದೆ.


ಜೈಪುರ: ಭಾರತೀಯ ವಾಯುಪಡೆಯ (Air Force) ಜಾಗ್ವಾರ್ ಯುದ್ಧ ವಿಮಾನವೊಂದು (Fighter Jet) ರಾಜಸ್ಥಾನದ ಚುರು ಜಿಲ್ಲೆಯ ಭನೋಡದಲ್ಲಿ ಪತನವಾಗಿದ್ದು, ಇಬ್ಬರು ಪೈಲಟ್‌ಗಳು ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿದ್ದಾರೆ (Jet Crash). ತರಬೇತಿ ಪ್ರಯುಕ್ತ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನ ಗದ್ದೆ ಮೇಲೆ ಬಿದ್ದಿದೆ. ಎರಡು ಆಸನದ ಈ ಯುದ್ದ ವಿಮಾನ ರಾಜಸ್ಥಾನದ ಸೂರತ್‌ಗಡ್ ವಾಯುನೆಲೆಯಿಂದ ಹೊರಟಿತ್ತು. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈ ವರ್ಷ ನಡೆದ 3ನೇ ಜಾಗ್ವಾರ್ ಫೈಟರ್ ಜೆಟ್ ಅಪಘಾತ ಇದಾಗಿದೆ. ಮೊದಲನೆಯ ಜೆಟ್ ಮಾ. 7ರಂದು ಹರಿಯಾಣದ ಪಂಚಕುಲದಲ್ಲಿ ಪತನವಾಗಿದ್ದರೆ ಮತ್ತು ಎರಡನೆಯದು ಏ. 2ರಂದು ಗುಜರಾತ್‌ನ ಜಾಮ್‌ನಗರ ಬಳಿ ಧರೆಗುರುಳಿತ್ತು.
राजस्थान के चुरु में भारतीय वायु सेना का फाइटर जेट क्रैश#Rajasthan #plaincrash pic.twitter.com/KZ0IB672kW
— Prabhakar Kumar (@prabhakarjourno) July 9, 2025
ಜಾಗ್ವಾರ್ ಯುದ್ಧ ವಿಮಾನ ಪತನ ದೃಶ್ಯ ಸೆರೆ
ಗಾಂಧಿನಗರ: ಏ. 2ರಂದು ವಾಯುಪಡೆಯ ಜಾಗ್ವಾರ್ ಜೆಟ್ ಗುಜರಾತ್‌ನ ಜಾಮ್‌ನಗರ ಬಳಿ ಪತನಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿದ್ದಾಗ ಏ. 2ರಂದು ಗುಜರಾತ್‌ನ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಇದರಲ್ಲಿದ್ದ ಪೈಲಟ್‌ಗಳಲ್ಲಿ ಒಬ್ಬರು ಸುರಕ್ಷಿತವಾಗಿ ಹೊರಜಿಗಿದಿದ್ದರೆ, ಇನ್ನೊಬ್ಬ ಪೈಲೆಟ್ ಮೃತಪಟ್ಟಿದ್ದರು.
ಈ ಸುದ್ದಿಯನ್ನೂ ಓದಿ: Jet Crash: ಜಾಗ್ವಾರ್ ಯುದ್ಧ ವಿಮಾನ ಪತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಇನ್ನು ಮಾ. 7ರಂದು ಪಂಜಾಬ್ ಅಂಬಾಲಾದ ವಾಯುಪಡೆ ನೆಲೆಯಿಂದ ಬಂದ ವಿಮಾನ ಯುದ್ಧ ವಿಮಾನ ತಾಂತ್ರಿಕ ದೋಷದಿಂದಾಗಿ ಪತನಗೊಂಡಿತ್ತು. ವಿಮಾನವು ವಸತಿ ಪ್ರದೇಶಕ್ಕೆ ಅಪ್ಪಳಿಸುವುದಿಲ್ಲ ಎಂದು ಖಚಿತಪಡಿಸಿಕೊಂಡ ನಂತರ ಪೈಲಟ್ ಸುರಕ್ಷಿತವಾಗಿ ಹೊರಜಿಗಿದು ಪಾರಾಗಿದ್ದರು. ಆ ಮೂಲಕ ಬಹುದೊಡ್ಡ ಅಪಘಾತವೊಂದು ತಪ್ಪಿತ್ತು.