ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asim Munir: ಪರಮಾಣು ಶಸ್ರ್ತ ಉಪಯೋಗಿಸಿದರೆ, ಅರ್ಧ ಪ್ರಪಂಚವನ್ನೇ ನಾಶ ಮಾಡುತ್ತೇವೆ; ಭಾರತಕ್ಕೆ ಬೆದರಿಕೆ ಹಾಕಿದ ಪಾಕ್‌ ಸೇನಾ ಮುಖ್ಯಸ್ಥ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಎರಡನೇ ಬಾರಿಗೆ ಅಮೆರಿಕಕ್ಕೆ ತೆರಳಿದ್ದು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಅಸಿಮ್‌ ಮುನೀರ್‌ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.

ವಾಷಿಂಗ್ಟನ್‌: ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಎರಡನೇ ಬಾರಿಗೆ ಅಮೆರಿಕಕ್ಕೆ ತೆರಳಿದ್ದು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಅಸಿಮ್‌ ಮುನೀರ್‌, ಭಾರತದೊಂದಿಗಿನ ಭವಿಷ್ಯದ ಯುದ್ಧದಲ್ಲಿ ತನ್ನ ದೇಶಕ್ಕೆ ಏನಾದರೂ ತೊಂದರೆ ಆದರೆ "ಅರ್ಧ ಪ್ರಪಂಚವನ್ನು ನಾಶ ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಮ್ಮ ಬಳಿಯೂ ಪರಮಾಣು ಶಕ್ತಿ ಇದೆ ನಮಗೇನಾದರೂ ಸ್ವಲ್ಪ ತೊಂದರೆಯಾದರೂ ನಾವು ಎಲ್ಲವನ್ನೂ ನಾಶ ಪಡಿಸುತ್ತೇವೆ ಎಂದು ಅವರು ಹೇಳಿದರು.

ಉದ್ಯಮಿ ಮತ್ತು ಗೌರವಾನ್ವಿತ ಕಾನ್ಸುಲ್ ಅದ್ನಾನ್ ಅಸಾದ್ ಅವರು ಟ್ಯಾಂಪಾದಲ್ಲಿ ಆಯೋಜಿಸಿದ್ದ ಬ್ಲ್ಯಾಕ್-ಟೈ ಭೋಜನಕೂಟದಲ್ಲಿ, ಮುನೀರ್ ಭಾಗವಹಿಸಿದ್ದರು. ನಾವು ಒಂದು ಪರಮಾಣು ರಾಷ್ಟ್ರ. ನಾವು ಪತನಗೊಳ್ಳುತ್ತಿದ್ದೇವೆ ಎಂದು ನಾವು ಭಾವಿಸಿದರೆ, ನಮ್ಮೊಂದಿಗೆ ಅರ್ಧದಷ್ಟು ಪ್ರಪಂಚವನ್ನು ಪತನಗೊಳಿಸುತ್ತೇವೆ" ಎಂದು ಹೇಳಿದರು.

ಸಿಂಧೂ ನದಿ ನೀರು ಒಪ್ಪಂದ

ಭಾರತವು ಸಿಂಧೂ ನದಿ ನೀರಿನ ಕಾಲುವೆಗಳಲ್ಲಿ ನಿರ್ಮಿಸುವ ಯಾವುದೇ ಮೂಲಸೌಕರ್ಯವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿತು. ಅವರು ನೀರನ್ನು ತಡೆದರೆ ನಾವು ಪರಮಾಣು ಶಸ್ತ್ರವನ್ನು ಎತ್ತಬೇಕಾಗುತ್ತದೆ. ನಮ್ಮ ದೇಶದಲ್ಲಿ ಕ್ಷಿಪಣಿಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಅವರು ಹೇಳಿದ್ದಾರೆ. ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನವದೆಹಲಿಯ ನಿರ್ಧಾರವು 250 ಮಿಲಿಯನ್ ಜನರನ್ನು ಹಸಿವಿನಿಂದ ಬಳಲುವ ಅಪಾಯಕ್ಕೆ ಸಿಲುಕಿಸಬಹುದು ಎಂದು ಮುನೀರ್ ಹೇಳಿದ್ದಾರೆ.

ಭಾರತ ಅಣೆಕಟ್ಟು ಕಟ್ಟುವವರೆಗೆ ನಾವು ಕಾಯುತ್ತೇವೆ. ನಿರ್ಮಾಣಗೊಂಡಾಗ ನಾವು ಅದನ್ನು ಹತ್ತು ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅದರ ಸಂಪೂರ್ಣ ಹಕ್ಕು ನಮಗೂ ಇದೆ ಎಂದು ಮುನೀರ್‌ ಹೇಳಿದ್ದಾರೆ. ಪಾಕಿಸ್ತಾನದ ಇನ್ನೂ ಬಳಸದ ತೈಲ ಮತ್ತು ಖನಿಜ ಸಂಪತ್ತಿನ ಬಗ್ಗೆ ಮುನೀರ್‌ ಹೇಳಿದ್ದಾರೆ. ನಮ್ಮ ಬಳಿ ಮುಗಿಯದಷ್ಟು ನೈಸರ್ಗಿಕ ಸಂಪತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: PM Modi Rakhi Sister: 30 ವರ್ಷಗಳಿಂದ ಪ್ರಧಾನಿ ಮೋದಿಗೆ ರಾಖಿ ಕಳುಹಿಸುತ್ತಾರೆ ಪಾಕಿಸ್ತಾನದ ಈ ಸಹೋದರಿ

ಕೆನಡಾದಲ್ಲಿ ಸಿಖ್ ನಾಯಕನ ಹತ್ಯೆ, ಕತಾರ್‌ನಲ್ಲಿ ಎಂಟು ಭಾರತೀಯ ನೌಕಾ ಅಧಿಕಾರಿಗಳ ಬಂಧನ ಮತ್ತು ಕುಲಭೂಷಣ್ ಜಾಧವ್ ಪ್ರಕರಣವನ್ನು ಅವರು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ - ಈ ಘಟನೆಗಳು ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯಲ್ಲಿ ಭಾಗಿಯಾಗಿದೆ ಎಂಬುದಕ್ಕೆ "ನಿರಾಕರಿಸಲಾಗದ ಪುರಾವೆಗಳು" ಎಂದು ಹೇಳಿದ್ದಾರೆ.