ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US Tariff: ದೊಡ್ಡಣ್ಣನ ವ್ಯಾಪಾರ ಸಮರ ಮತ್ತೆ ಶುರು! ಭಾರತ, ಚೀನಾ, ರಷ್ಯಾದ ಮೇಲೆ ಅಮೆರಿಕದಿಂದ ಶೇ.500 ರಷ್ಟು ಸುಂಕ?

ರಷ್ಯಾದ (Russia) ಪಾಲುದಾರ ರಾಷ್ಟ್ರಗಳು ಅಮೆರಿಕದ (US) ಕೆಂಗಣ್ಣಿಗೆ ಗುರಿಯಾಗಿದೆಯೇ ? ಹೀಗೆ ಈಗ ವಿಶ್ವದ ಬಹುತೇಕ ರಾಷ್ಟ್ರಗಳು ತನ್ನನ್ನು ತಾನು ಪ್ರಶ್ನಿಸಿಕೊಳ್ಳುವಂತಾಗಿದೆ. ಯಾಕೆಂದರೆ ಅಮೆರಿಕ ರಷ್ಯಾ ಪಾಲುದಾರ ರಾಷ್ಟ್ರಗಳ ಮೇಲೆ ಅತ್ಯಧಿಕ ಸುಂಕ ವಿಧಿಸಲು ಮುಂದಾಗಿದೆ. ಇದರಲ್ಲಿ ಭಾರತ ಮತ್ತು ಚೀನಾ ಕೂಡ ಸೇರಿದೆ.

ನವದೆಹಲಿ: ಭಾರತ (India), ಚೀನಾದ (china) ಮೇಲೆ ಅಮೆರಿಕ ಈಗ ಅತ್ಯಧಿಕ ಸುಂಕ (US Tariff) ವಿಧಿಸಲು ಮುಂದಾಗಿದೆ. ಇದಕ್ಕೆ ಮುಖ್ಯ ಕಾರಣ ರಷ್ಯಾದೊಂದಿಗಿನ (Russia) ಪಾಲುದಾರಿಕೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದ ತೈಲ (Russian oil) ಖರೀದಿಸುವ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿರುವ ವಾಷಿಂಗ್ಟನ್ ನ ಶ್ವೇತ ಭವನದಲ್ಲಿ ಸೋಮವಾರ ಸೆನೆಟ್ ಮಸೂದೆಗೆ ಅನುಮೋದನೆ ನೀಡಿದ್ದಾರೆ. ಇದರಿಂದ ಭಾರತ, ಚೀನಾ ಸೇರಿದಂತೆ ರಷ್ಯಾದ ವ್ಯಾಪಾರ ಪಾಲುದಾರರ ರಾಷ್ಟ್ರಗಳ ಮೇಲೆ ಅಮೆರಿಕ ಶೇ.500 ರಷ್ಟು ಸುಂಕ ವಿಧಿಸುವ ಸಾಧ್ಯತೆ ಇದೆ.

ಈ ಕುರಿತು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ, ರಷ್ಯಾದೊಂದಿಗೆ ವ್ಯಾಪಾರ ವ್ಯವಹಾರ ಮುಂದುವರಿಸುವ ದೇಶಗಳ ಮೇಲೆ ಶೇ. 500 ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿಸಿದ್ದಾರೆ.

ವಿಶ್ವದ ಯಾವುದೇ ರಾಷ್ಟ್ರವಾಗಿರಲಿ ರಷ್ಯಾದಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ, ಉಕ್ರೇನ್‌ಗೆ ಯಾವುದೇ ಸಹಾಯ ನೀಡದಿದ್ದರೆ ಅಮೆರಿಕಕ್ಕೆ ಬರುವ ಹೊರದೇಶಗಳ ಉತ್ಪನ್ನಗಳ ಮೇಲೆ ಶೇ.500 ರಷ್ಟು ಸುಂಕ ವಿಧಿಸಲಾಗುತ್ತದೆ. ಈಗಾಗಲೇ ಭಾರತ ಮತ್ತು ಚೀನಾವು ರಷ್ಯಾದಿಂದ ಶೇ.70ರಷ್ಟು ತೈಲವನ್ನು ಖರೀದಿ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.

ಈ ಮಸೂದೆಗೆ ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಸೇರಿದಂತೆ 84 ಮಂದಿ ಬೆಂಬಲಿಸಿದ್ದಾರೆ. ಇದು ಆಗಸ್ಟ್‌ ತಿಂಗಳಿನಿಂದ ಜಾರಿಯಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧವು ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಟ್ರಂಪ್ ಶಾಂತಿ ಪ್ರಕ್ರಿಯೆಗೆ ತೊಂದರೆಯಾಗದಂತೆ ಎಚ್ಚರ ವಹಿಸಿದೆ. ಆದರೆ ಕೆಲವು ನಿರ್ಬಂಧಗಳನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಇತ್ತೀಚೆಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.

ಇದನ್ನೂ ಓದಿ: Narendra Modi Column: ಡಿಜಿಟಲ್ ಇಂಡಿಯಾದ ಒಂದು ದಶಕ

ಟ್ರಂಪ್ ಹೊಸ ಮಸೂದೆಯಿಂದ ಏನು ಪರಿಣಾಮ?

ಈ ಮಸೂದೆಯು ಭಾರತ ಮತ್ತು ಚೀನಾದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಯಾಕೆಂದರೆ ಈ ರಾಷ್ಟ್ರಗಳು ರಷ್ಯಾದಿಂದ ಅತ್ಯಧಿಕ ಪ್ರಮಾಣದ ಅಂದರೆ ಸರಿಸುಮಾರು ಶೇ. 70ರಷ್ಟು ತೈಲವನ್ನು ಖರೀದಿ ಮಾಡುತ್ತಿವೆ. ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರವು 2024–25ರ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠ 68.7 ಬಿಲಿಯನ್‌ ಡಾಲರ್ ಆಗಿದೆ. ಇದು ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲು 10.1 ಬಿಲಿಯನ್‌ ಡಾಲರ್ ಆಗಿತ್ತು.

ವಿದ್ಯಾ ಇರ್ವತ್ತೂರು

View all posts by this author