ಬೆಂಗಳೂರು: ವಿಶ್ವದ ಅತ್ಯಂತ ಪ್ರತಿಷ್ಠಿತ ಕಂಪನಿ ಆಗಿರುವ ಸ್ಯಾಮ್‌ಸಂಗ್, 2025ರ ಅಂತ್ಯದ ವೇಳೆಗೆ ವಿಶ್ವಾದ್ಯಂತ 400 ಮಿಲಿಯನ್ ಸಾಧನಗಳಲ್ಲಿ ಗ್ಯಾಲಕ್ಸಿ ಎಐ ಪರಿಚಯಿಸುವುದಾಗಿದೆ ಘೋಷಿಸಿದೆ.
ಸ್ಯಾಮ್‌ಸಂಗ್ 2024ರಲ್ಲಿ ವಿಶ್ವದ ಮೊದಲ ಎಐ ಫೋನ್ ಆದ ಗ್ಯಾಲಕ್ಸಿ ಎಸ್24 ಸರಣಿಯನ್ನು ಬಿಡುಗಡೆ ಮಾಡಿತು. ಇದು ಹೊಸ ಹೊಸ ಎಐ ಆವಿಷ್ಕಾರಗಳಿಗೆ ದಾರಿಯಾಯಿತು. ಆಗಿನಿಂದ, ಸ್ಯಾಮ್‌ಸಂಗ್ ತನ್ನ ಮೊಬೈಲ್ ಎಐ ವ್ಯವಸ್ಥೆಯನ್ನು ವಿಸ್ತರಿಸುತ್ತಾ ಬಂದಿದ್ದು, ಮಲ್ಟಿಮಾಡೆಲ್ ಇಂಟೆಲಿಜೆನ್ಸ್ ಅನ್ನು ಬಳಸಿಕೊಂಡು ತನ್ನ ವೇರೆಬಲ್ಸ್, ಟ್ಯಾಬ್ಲೆಟ್ ಗಳು, ಪಿಸಿಗಳು ಮತ್ತು ಇತರೆ ಸಾಧನಗಳಲ್ಲಿ ಎಐ ಅನ್ನು ಸಂಯೋಜಿಸಿದೆ.
ಗ್ಯಾಲಕ್ಸಿ ಸಾಧನಗಳಿಗೆ ಭಾರಿ ಬೇಡಿಕೆ ಇದ್ದು, ಗ್ಯಾಲಕ್ಸಿ ಎಸ್25 ಬಳಕೆದಾರರಲ್ಲಿ 70%ಕ್ಕಿಂತ ಹೆಚ್ಚಿನವರು ಗ್ಯಾಲಕ್ಸಿ ಎಐ ಅನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಇತ್ತೀಚಿಗೆ ಬಂದಿರುವ ಗ್ಯಾಲಕ್ಸಿ ಝಡ್ ಸರಣಿಯಲ್ಲಿ ಇನ್ನಷ್ಟು ಹೆಚ್ಚು ಬಳಕೆದಾರರಿಗೆ ಗ್ಯಾಲಕ್ಸಿ ಎಐ ಅನ್ನು ತಲುಪಿಸಿದ್ದು, ಒನ್ ಯುಐ 8 ಮೂಲಕ ಸ್ಯಾಮ್ ಸಂಗ್ ನ ಅತ್ಯಂತ ಸುಧಾರಿತ ಫೀಚರ್ ಗಳನ್ನು ಬಳಸಲು ಅನುವು ಮಾಡಿಕೊಟ್ಟಿದೆ.
ಕಳೆದ ಎರಡು ವರ್ಷಗಳಲ್ಲಿ ಗ್ಯಾಲಕ್ಸಿ ಎಐ ಅನ್ನು ವಿಶ್ವಾದ್ಯಂತ ಇರುವ ಬಳಕೆದಾರರು ಒಪ್ಪಿ ಕೊಂಡಿದ್ದಾರೆ. ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಒನ್ ಯುಐ ಸುಧಾರಣೆಗಳ ಮೂಲಕ ಅತ್ಯುತ್ತಮ, ಸೃಜನಶೀಲ ಮತ್ತು ಉತ್ಪಾದಕತೆಗೆ ನೆರವಾಗುವ ಹಲವಾರು ಫೀಚರ್ ಗಳನ್ನು ಬಳಕೆದಾರರಿಗೆ ಒದಗಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಸ್ಯಾಮ್‌ಸಂಗ್ 400 ಮಿಲಿಯನ್ ಗಿಂತ ಹೆಚ್ಚಿನ ಸಾಧನ ಗಳಲ್ಲಿ ಗ್ಯಾಲಕ್ಸಿ ಎಐ ಅನುಭವವನ್ನು ಒದಗಿಸುವ ಗುರಿಯನ್ನು ಇಟ್ಟುಕೊಂಡಿದೆ.
ಫೋಟೋ ಅಸಿಸ್ಟ್ ಮತ್ತು ಆಡಿಯೋ ಇರೇಸರ್ ಅತಿ ಹೆಚ್ಚು ಬಳಸಲ್ಪಡುವ ಗ್ಯಾಲಕ್ಸಿ ಎಐ ಫೀಚರ್ ಗಳಾಗಿದ್ದು, ಗ್ಯಾಲಕ್ಸಿ ಎಸ್24ಗೆ ಹೋಲಿಸಿದರೆ, ಗ್ಯಾಲಕ್ಸಿ ಎಸ್25 ಬಳಕೆದಾರರಲ್ಲಿ ಫೋಟೋ ಅಸಿಸ್ಟ್ ಬಳಕೆ ಎರಡು ಪಟ್ಟು ಹೆಚ್ಚಾಗಿದೆ. ಫೋಟೋ ಅಸಿಸ್ಟ್ ಫೀಚರ್ ಗ್ಯಾಲರಿ ಆಪ್ ಮೂಲಕ ಫೋಟೋ ಗಳನ್ನು ಎಡಿಟ್ ಮಾಡಲು ವಿವಿಧ ಎಐ ಫೀಚರ್ ಗಳನ್ನು ಒದಗಿಸುತ್ತದೆ. ಆಡಿಯೋ ಇರೇಸರ್ ಫೀಚರ್ ವಿಡಿಯೋಗಳಿಂದ ಹಿನ್ನೆಲೆಯಲ್ಲಿರುವ ಸದ್ದುಗಳನ್ನು ಸರಿಹೊಂದಿಸಲು ಅಥವಾ ತೆಗೆದುಹಾಕಲು ಸಹಾಯ ಮಾಡುತ್ತದೆ.
ಇಂಟರ್ ಪ್ರಿಟರ್ ಮತ್ತು ಲೈವ್ ಟ್ರಾನ್ಸ್ ಲೇಟ್ ಕೂಡ ಜನಪ್ರಿಯ ಎಐ ಫೀಚರ್ ಗಳಾಗಿದ್ದು, ಇವು ಸಂವಹನ ನಡೆಸುವ ಕ್ರಿಯೆಯನ್ನು ಸುಗಮಗೊಳಿಸುತ್ತವೆ. ಇಂಟರ್ ಪ್ರಿಟರ್ ಫೀಚರ್ ಸಂಭಾಷಣೆ ಯನ್ನು ತಕ್ಷಣವೇ ಭಾಷಾಂತರಿಸುತ್ತದೆ. ಲೈವ್ ಟ್ರಾನ್ಸ್ ಲೇಟ್ ಫೀಚರ್ ವಾಯ್ಸ್ ಕಾಲ್ ಗಳು, ನೇರ ಸಂಭಾಷಣೆಗಳು ಮತ್ತು ಟೆಕ್ಸ್ಟ್ ಸಂದೇಶಗಳನ್ನು ನಿಮ್ಮ ಆಯ್ದ ಭಾಷೆಗೆ ಆಯಾ ಕ್ಷಣವೇ ಸ್ವಯಂ ಚಾಲಿತವಾಗಿ ಭಾಷಾಂತರಿಸುತ್ತದೆ.
ಗೂಗಲ್ ಜೊತೆಗಿನ ಸಹಭಾಗಿತ್ವದಲ್ಲಿ ಸ್ಯಾಮ್ ಸಂಗ್ ಸಂಸ್ಥೆಯು ಜೆಮಿನಿ ಲೈವ್ ಮತ್ತು ಸರ್ಕಲ್ ಟು ಸರ್ಚ್ ನಂತಹ ಜನಪ್ರಿಯ ಫೀಚರ್ ಗಳನ್ನು ಬಳಕೆಗೆ ತಂದಿದೆ. ಗ್ಯಾಲಕ್ಸಿ ಎಸ್25 ಬಳಕೆದಾರ ರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಪ್ರತಿದಿನ ಸರ್ಕಲ್ ಟು ಸರ್ಚ್ ಫೀಚರ್ ಬಳಸುತ್ತಾರೆ.
ಗ್ಯಾಲಕ್ಸಿ ಎಸ್25 ಸರಣಿ ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್ 7 ಮಾಡೆಲ್ ಗಳು 50ಎಂಪಿ ರೇರ್ ಕ್ಯಾಮೆರಾ ವನ್ನು ಹೊಂದಿವೆ. ಗ್ಯಾಲಕ್ಸಿ ಎಸ್25 ಅಲ್ಟ್ರಾ ಮತ್ತು ಝಡ್ ಫೋಲ್ಡ್ 7 ಬಳಕೆದಾರರು 200 ಎಂಪಿಯ ಅಲ್ಟ್ರಾ-ವೈಡ್ ಲೆನ್ಸ್ ನ ಸೌಲಭ್ಯ ಪಡೆಯುತ್ತಾರೆ. 2020ರಿಂದ ಒದಗಿಸಲಾಗುತ್ತಿರುವ 8ಕೆ ವಿಡಿಯೋ ಸಾಮರ್ಥ್ಯದ ಜೊತೆಗೆ ಈಗ ಪ್ರೊ ವಿಶುವಲ್ ಎಂಜಿನ್ ಕೂಡ ಸೇರಿಕೊಂಡಿದ್ದು, ಬಳಕೆ ದಾರರಿಗೆ ಹೆಚ್ಚಿನ ಕಸ್ಟಮೈಸೇಶನ್ ಆಯ್ಕೆಗಳನ್ನು ನೀಡುತ್ತದೆ.
ಅಂತಿಮವಾಗಿ, ಸ್ಯಾಮ್‌ಸಂಗ್ ನ ಜನರೇಟಿವ್ ಎಡಿಟ್ ಫೀಚರ್ ಬಳಕೆದಾರರಿಗೆ ಫೋಟೋಗಳಲ್ಲಿ ರುವ ಬೇಡದ ಅಂಶಗಳನ್ನು ಅಂಶಗಳನ್ನು ತೆಗೆದುಹಾಕಲು, ಫೋಟೋಗಳನ್ನು ಉತ್ತಮಗೊಳಿಸಲು ಮತ್ತು ಕೆಲವೇ ಸೆಕೆಂಡ್ ಗಳಲ್ಲಿ ಉನ್ನತ ಗುಣಮಟ್ಟದ ಫೋಟೋಗಳನ್ನು ಸಿದ್ಧಗೊಳಿಸಲು ಅನುವು ಮಾಡಿಕೊಡುತ್ತದೆ. ಉದ್ಯಮದ ಅತ್ಯುತ್ತಮ ಹಾರ್ಡ್ ವೇರ್ ಮೂಲಕ ನಿರ್ಮಿತವಾಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಡಿವೈಸ್ ಗಳು ವಿಶೇಷವಾದ ಕ್ವಾಲ್ ಕಮ್ ಚಿಪ್, ಸ್ನಾಪ್‌ಡ್ರಾಗನ್ 8 ಎಲೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಬಳಕೆದಾರರಿಗೆ ಸುಗಮ ಮತ್ತು ಅತ್ಯುತ್ತಮ ಎಐ ಅನುಭವ ವನ್ನು ಒದಗಿಸುತ್ತದೆ.
ಎಸ್ ಆರ್ ಐ- ಬೆಂಗಳೂರು, ಸ್ಯಾಮ್ ಸಂಗ್ ನ ಕೊರಿಯಾದಿಂದ ಹೊರಗೆ ಇರುವ ಅತಿದೊಡ್ಡ ಆರ್&ಡಿ ಕೇಂದ್ರವಾಗಿದ್ದು, ಫೋಟೋ ಅಸಿಸ್ಟ್, ಆಡಿಯೋ ಇರೇಸರ್, ಇಂಟರ್‌ಪ್ರಿಟರ್, ಲೈವ್ ಟ್ರಾನ್ಸ್ ಲೇಟ್ ಮತ್ತು ನೌ ಬ್ರೀಫ್ ನಂತಹ ಜನಪ್ರಿಯ ಗ್ಯಾಲಕ್ಸಿ ಎಐ ಫೀಚರ್ ಗಳನ್ನು ರೂಪಿಸಲು ಈ ಕೇಂದ್ರವು ಗಣನೀಯ ಕೊಡುಗೆ ನೀಡಿದೆ. ಗ್ಯಾಲಕ್ಸಿ ಎಐ ಪ್ರಸ್ತುತ ಹಿಂದಿ ಭಾಷೆ ಸೇರಿದಂತೆ 30 ಭಾಷೆಗಳು ಮತ್ತು ಉಪಭಾಷೆಗಳಿಗೆ ಸಪೋರ್ಟ್ ಮಾಡುತ್ತದೆ.