Health Tips: ಸೌತೆಕಾಯಿಯನ್ನು ಈ ಆಹಾರಗಳ ಜತೆ ತಪ್ಪಿಯೂ ಸೇವಿಸಬೇಡಿ
ಸೌತೆಕಾಯಿಯನ್ನು ಹೆಚ್ಚಾಗಿ ಸಲಾಡ್‌ನಂತೆ ಸೈಡ್ ಡಿಶ್ ಆಗಿ ಬಳಸುತ್ತೇವೆ. ಇನ್ನು ಜಿಮ್, ವರ್ಕೌಟ್ ಮಾಡುವವರಿಗೆ ಅಧಿಕ ನೀರಿನಾಂಶ ಇರುವ ಸೌತೆಕಾಯಿ ಬಹಳ ಉತ್ತಮ ಆಹಾರ. ಇದರ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನ ದೊರೆಯುತ್ತದೆ. ಸೌತೆಕಾಯಿಯನ್ನು ಕೆಲವು ಆಹಾರದ ಜತೆ ಸೇವಿಸಿದರೆ ದೇಹದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ವಿವರ ಇಲ್ಲಿದೆ.

cucumber

ನವದೆಹಲಿ: ದೇಹಕ್ಕೆ ಅತ್ಯಂತ ತಂಪು ನೀಡುವ ಆಹಾರಗಳ ಸಾಲಿನಲ್ಲಿ ಸೌತೆಕಾಯಿ ಅಗ್ರಗಣ್ಯ ಎನಿಸಿಕೊಂಡಿದೆ. ಅದರಲ್ಲಿಯೂ ಬೇಸಗೆ ಕಾಲಕ್ಕೆ ದೇಹವನ್ನು ಹೆಚ್ಚು ತಂಪಾಗಿರುವಂತೆ ಕಾಯ್ದಿಟ್ಟುಕೊಳ್ಳಲು ಸೌತೆಕಾಯಿ ಸೇವನೆ ಬಹು ಮುಖ್ಯ. ಸೌತೆಕಾಯಿಯನ್ನು ಹೆಚ್ಚಾಗಿ ಸಲಾಡ್‌ನಂತೆ ಸೈಡ್ ಡಿಶ್ ಆಗಿ ಬಳಕೆ ಮಾಡುತ್ತೇವೆ. ಇನ್ನು ಜಿಮ್, ವರ್ಕೌಟ್ ಮಾಡುವವರಿಗೆ ಅಧಿಕ ನೀರಿನಾಂಶ ಇರುವ ಸೌತೆ ಕಾಯಿ ಬಹಳ ಉತ್ತಮ ಆಹಾರ ಎನ್ನಬಹುದು. ಇದರ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನೆ ಸಿಗುತ್ತದೆ. ಹಾಗಿದ್ದರೂ ಕೆಲವು ಆಹಾರದ ಜತೆ ಸೌತೆಕಾಯಿ ಸೇವಿಸುವುದು ದೇಹದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ (Health Tips). ಹಾಗಾಗಿ ಈ ಬಗ್ಗೆ ಮೊದಲೇ ತಿಳಿದು ಸೌತೆಕಾಯಿ ಸೇವಿಸಿದರೆ ಯಾವ ಸಮಸ್ಯೆ ಕೂಡ ಬರಲಾರದು.
ಹಾಲಿನ ಉತ್ಪನ್ನದ ಜತೆ ಸೇವಿಸದಿರಿ
ಸೌತೆಕಾಯಿಯನ್ನು ಹಾಲಿನ ಉತ್ಪನ್ನಗಳ ಜತೆಗೆ ಸೇವಿಸದೆ ಇರುವುದು ಉತ್ತಮ. ಅದರಲ್ಲಿಯೂ ಬಹುತೇಕರು ಮೊಸರಿನೊಂದಿಗೆ ಸೌತೆಕಾಯಿ ಬೆರೆಸಿ ಸಲಾಡ್ ರೀತಿ ತಿನ್ನಲು ಇಷ್ಟಪಡುತ್ತಾರೆ. ಮೊಸರಿನ ಜತೆ ಸೌತೆಕಾಯಿ ಬೆರೆಸಿ ತಿನ್ನುವುದು ಬಾಯಿಗೆ ರುಚಿ ಎನಿಸಿದರೂ ಇದು ಸರಿಯಾದ ಕ್ರಮವಲ್ಲ. ಹಾಲು ಮತ್ತು ಸೌತೆಕಾಯಿ ಮಿಕ್ಸ್ ಮಾಡಿದ್ದನ್ನು ನೀವು ತಡವಾಗಿ ಸೇವಿಸಿದರೆ ಗ್ಯಾಸ್ಟಿಕ್ ಹಾಗೂ ಅಸಿಡಿಟಿ ಸಮಸ್ಯೆ ಕಾಡುವ ಸಾಧ್ಯತೆ ಇದೆ.
ಟೊಮೆಟೊ ಜೊತೆ ಸೇವಿಸದಿರಿ
ಸೌತೆಕಾಯಿಯನ್ನು ಹೆಚ್ಚಾಗಿ ಸಲಾಡ್ ಜತೆ ಸೇವಿಸುವಾಗ ಟೊಮೆಟೊ ಕೂಡ ಇರುತ್ತದೆ. ಟೊಮೆಟೊ ಮತ್ತು ಸೌತೆಕಾಯಿ ಬಳಸಿ ಸ್ಯಾಂಡ್‌ವಿಚ್ ತಯಾರಿಸಲಾಗುತ್ತಿದೆ. ಇದನ್ನು ತಿನ್ನಲು ಬಹುತೇಕರು ಇಷ್ಟ ಪಡುತ್ತಾರೆ. ಆದರೆ ಸೌತೆಕಾಯಿಯಲ್ಲಿ ನೀರಿನಾಂಶ ಅಧಿಕ ಇರುವ ಕಾರಣ ಇದು ಟೊಮೆಟೊ ಜತೆಗೆ ಬೆರೆತಾಗ ಟೊಮೆಟೊ ಹಳಸಿಹೋಗುವ ಸಾಧ್ಯತೆ ಇದೆ. ಎಷ್ಟೊ ಸಲ ಟೊಮೆಟೊ ಸತ್ವ ಹಾಳಾಗಲು ಸೌತೆಕಾಯಿಯ ನೀರಿನ ಅಂಶ ಮುಖ್ಯ ಕಾರಣವಾಗುತ್ತದೆ. ಹೀಗೆ ಟೊಮೆಟೊ ಮತ್ತು ಸೌತೆಕಾಯಿ ಎರಡನ್ನು ಮಿಶ್ರ ಮಾಡಿ ನೀವು ಸೇವಿಸುವುದು ಹೊಟ್ಟೆ ನೋವು, ಇತರ ಸಮಸ್ಯೆ ಬರುವ ಸಾಧ್ಯತೆ ಇದೆ.
ಕರಿದ ಮಾಂಸಾಹಾರದ ಜತೆ ಸೇವಿಸದಿರಿ
ಹೆಚ್ಚು ರೋಸ್ಟ್ ಮಾಡಿದ್ದ ಮಾಂಸಾಹಾರಗಳ ಜತೆ ಸೌತೆಕಾಯಿಯನ್ನು ಅಲಂಕಾರವಾಗಿ ಜೋಡಿಸಿ ನೀಡುವುದನ್ನು ಕಾಣಬಹುದು. ಆದರೆ ಸೌತೆಕಾಯಿಯಲ್ಲಿ ಇರುವ ನೀರಿನಾಂಶ ಕರಿದ ಆಹಾರದ ಜತೆ ಸೇರಿ ಆಹಾರದ ಸ್ವಾದ ಹೋಗುವ ಸಾಧ್ಯತೆ ಇದೆ. ಸೌತೆಕಾಯಿಯನ್ನು ಕರಿದ ಮಾಂಸ ಆಹಾರದ ಜತೆ ಸೇವಿಸಿದಾಗ ಕೆಲವೊಮ್ಮೆ ಫುಡ್ ಪಾಯ್ಸನ್ ಆಗುವ ಸಾಧ್ಯತೆ ಇದೆ.
ಇದನ್ನು ಓದಿ: Health Tips: ಡಯಾಬಿಟಿಸ್ ಇದ್ದವರು ಅಪ್ಪಿ ತಪ್ಪಿಯೂ ಈ ಹಣ್ಣುಗಳನ್ನು ಸೇವಿಸಬೇಡಿ!
ಲಿಂಬೆ, ಬೆಳ್ಳುಳ್ಳಿ ಜತೆ ಸೇವಿಸದಿರಿ
ಸೌತೆಕಾಯಿ ಮೇಲೆ ಲಿಂಬು ಹಿಂಡಿ ಸ್ವಲ್ಪ ಉಪ್ಪು ಹಾಕಿ ಸೇವಿಸುವುದನ್ನು ಬಹುತೇಕರು ಇಷ್ಟ ಪಡುತ್ತಾರೆ. ಆದರೆ ಲಿಂಬೆ ಹಣ್ಣಿನಲ್ಲಿ ಇರುವ ಸಿಟ್ರಿಕ್ ಅಂಶ ಸೌತೆಕಾಯಿಯ ಫ್ರೆಶ್‌ನೆಸ್ ಹಾಳು ಮಾಡುತ್ತದೆ. ಕೆಲವೊಮ್ಮೆ ಸೌತೆಕಾಯಿ ಬೇಗ ಕೆಟ್ಟು ಹೋಗುವ ಸಾಧ್ಯತೆ ಇದೆ. ಹಾಗಾಗಿ ಈ ತರ ಸೇವಿಸಿದರೆ ಅಜೀರ್ಣ ಸಮಸ್ಯೆ ಬರುತ್ತದೆ. ಬೆಳ್ಳುಳ್ಳಿಯ ಗಾಢ ಪರಿಮಳ ಸೌತೆಕಾಯಿಗೆ ಡೆಡ್ ಅಪೋಸಿಟ್ ಕಾಂಬಿನೇಶನ್ ಆಗಲಿದೆ. ಹಾಗಾಗಿ ಇದನ್ನು ಆದಷ್ಟು ಮಿತವಾಗಿ ಸೇವಿಸುವುದು ಉತ್ತಮ.
ಈ ವಿಚಾರ ನೆನಪಿಡಿ
ಸೌತೆಕಾಯಿಯನ್ನು ಹೆಚ್ಚು ಫ್ರೆಶ್ ಆಗಿ ಇರುವಾಗಲೇ ತಿಂದರೆ ಬಹಳ ಒಳ್ಳೆಯದು. ಅದನ್ನು ಬೇರೆ ಖಾದ್ಯಗಳ ಜತೆ ಮತ್ತು ತರಕಾರಿ ಜತೆಗೆ ಆದಷ್ಟು ಮಿತವಾಗಿ ಸೇವನೆ ಮಾಡುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.