ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Health Tips: ಡಯಾಬಿಟಿಸ್ ಇದ್ದವರು ಅಪ್ಪಿ ತಪ್ಪಿಯೂ ಈ ಹಣ್ಣುಗಳನ್ನು ಸೇವಿಸಬೇಡಿ!

ಮಧುಮೇಹಿಗಳು ಕೂಡ ಎಲ್ಲ ರೀತಿಯ ಹಣ್ಣು ಸೇವಿಸಬಹುದೇ ಎನ್ನುವ ಗೊಂದಲ ನಿಮ್ಮಲ್ಲಿ ಇರಬಹುದು. ದೇಹದಲ್ಲಿ ಸಕ್ಕರೆಯ ಮಟ್ಟ ಈಗಾಗಲೇ ಹೆಚ್ಚು ಇದ್ದಂತಹ ಸಂದರ್ಭದಲ್ಲಿ ಅಧಿಕ ಸಿಹಿ ಹೊಂದಿರುವ ಹಣ್ಣುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಸಮಸ್ಯೆ ಆಗುವ ಸಾಧ್ಯತೆ ಇದೆ. ಹಾಗಾಗಿ ಸಕ್ಕರೆ ಖಾಯಿಲೆ ಇದ್ದವರು ಹಣ್ಣಿನ ಸೇವನೆಯಲ್ಲಿ ಯಾವುದು ಉತ್ತಮ ಯಾವುದು ಅಪಾಯ ಎಂಬ ಅರಿವಿದ್ದರೆ ಆರೋಗ್ಯ ಸಮಸ್ಯೆ ಬರದಂತೆ ಮೊದಲೇ ತಡೆಹಿಡಿಯಬಹುದು

ಡಯಾಬಿಟಿಸ್ ಇದ್ದವರು ಈ ಹಣ್ಣಿನ ಸೇವನೆ ಮಾಡಿದ್ರೆ ಅಪಾಯ ಖಂಡಿತ!

Profile Pushpa Kumari Feb 23, 2025 5:30 AM

ನವದೆಹಲಿ: ನಿತ್ಯ ಹಣ್ಣುಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯ ವೃದ್ಧಿಯಾಗುತ್ತೆ ಎಂಬುದು ನಮಗೆಲ್ಲ ತಿಳಿದಿದೆ. ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಹಣ್ಣು ತರಕಾರಿಗಳನ್ನೇ ಅಧಿಕ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ(Health Tips). ಆದರೆ ಮಧುಮೇಹಿಗಳು(Diabetics) ಕೂಡ ಎಲ್ಲ ರೀತಿಯ ಹಣ್ಣು ಸೇವಿಸಬಹುದೇ ಎನ್ನುವ ಗೊಂದಲ ನಿಮ್ಮಲ್ಲಿ ಇರಬಹುದು. ದೇಹದಲ್ಲಿ ಸಕ್ಕರೆಯ ಮಟ್ಟ ಈಗಾಗಲೇ ಹೆಚ್ಚು ಇದ್ದಂತಹ ಸಂದರ್ಭದಲ್ಲಿ ಅಧಿಕ ಸಿಹಿ ಹೊಂದಿರುವ ಹಣ್ಣುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಸಮಸ್ಯೆ ಆಗುವ ಸಾಧ್ಯತೆ ಇದೆ. ಹಾಗಾಗಿ ಸಕ್ಕರೆ ಖಾಯಿಲೆ ಇದ್ದವರು ಹಣ್ಣಿನ ಸೇವನೆಯಲ್ಲಿ ಯಾವುದು ಉತ್ತಮ ಯಾವುದು ಅಪಾಯ ಎಂಬ ಅರಿವಿದ್ದರೆ ಆರೋಗ್ಯ ಸಮಸ್ಯೆ ಬರದಂತೆ ಮೊದಲೇ ತಡೆಹಿಡಿಯಬಹುದು.

ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ನೀರಿನಂಶ ಇದ್ದು ದೇಹದ ಆರೋಗ್ಯಕ್ಕೆ ಇದು ಪೂರಕವಾಗಿದೆ. ಹಾಗಿದ್ದರೂ ಇದನ್ನು ಮಧುಮೇಹ ಇದ್ದವರು ಸೇವಿಸಬಾರದು. ಇದರಲ್ಲಿ 72-80 ಶೇಕಡದಷ್ಟು ಸಕ್ಕರೆಯಂಶ ಇದ್ದು ಇದನ್ನು ಸೇವಿಸುವುದರಿಂದ ಡಯಾಬಿಟಿಸ್ ಇದ್ದವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ದ್ರಾಕ್ಷಿ: ದ್ರಾಕ್ಷಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವ ಜೊತೆಗೆ ಸಕ್ಕರೆ ಪ್ರಮಾಣ ಅಧಿಕ ಇದೆ‌. ಹಾಗಾಗಿ ದ್ರಾಕ್ಷಿಯನ್ನು ಮಿತವಾಗಿ ಸೇವಿಸುವುದು ತುಂಬಾ ಒಳ್ಳೆಯದು. ದ್ರಾಕ್ಷಿ ಫ್ರೆಶ್ ಮತ್ತು ಒಣ ಎರಡು ಕೂಡ ಸೇವಿಸುವುದು ಡಯಾಬಿಟಿಸ್ ಹೊಂದಿದ್ದವರಿಗೆ ಉತ್ತಮವಲ್ಲ ಎನ್ನಬಹುದು

ಬಾಳೆ ಹಣ್ಣು: ಡಯಾಬಿಟಿಸ್ ಇದ್ದವರು ಬಾಳೆಹಣ್ಣು ಸೇವಿಸದಿರುವುದೇ ಉತ್ತಮ ಎನ್ನಬಹುದು. ಬಾಳೆಹಣ್ಣಿನಲ್ಲಿ 42-62ಶೇಕಡದಷ್ಟು ಸಕ್ಕರೆ ಮಟ್ಟವಿರಲಿದೆ. ಹಾಗಾಗಿ ಪೂರ್ತಿ ಹಣ್ಣಾದ ಬಾಳೆಹಣ್ಣು ಸೇವಿಸಬಾರದು. ಬದಲಾಗಿ ಸ್ವಲ್ಪ ಕಾಯಿ ಇರುವ ಹಣ್ಣನ್ನು ಆರಿಸಿ ಮಿತವಾಗಿ ತಿಂದರೆ ಯಾವ ಸಮಸ್ಯೆ ಬರಲಾರದು.

ಅನಾನಸ್: ಅನಾನಾಸ್ ನಲ್ಲಿ ದೇಹದ ಆರೋಗ್ಯ ದೃಷ್ಟಿಯಿಂದ ಪೌಷ್ಟಿಕಾಂಶ ಒದ ಗಿಸುವ ಸತ್ವಗಳಿವೆ. ಹಾಗಿದ್ದರೂ ಇದರಲ್ಲಿ ನೈಸರ್ಗಿಕ ಸಕ್ಕರೆ ಮಟ್ಟ ಅಧಿಕ ಇರುವ ಕಾರಣ ಮಧು ಮೇಹಿಗಳಿಗೆ ಇದು ಸಮಸ್ಯೆ ಆಗುವ ಸಾಧ್ಯತೆ ಅಧಿಕ ಇದೆ ಎನ್ನಬಹುದು. ಹಾಗಾಗಿ ಅನಾನಸ್ ಅನ್ನು ಮಿತವಾಗಿ ಸೇವಿಸಬಹುದು.

ಚೆರ್ರಿ ಹಣ್ಣು: ಚೆರ್ರಿ ಹಣ್ಣಿನಲ್ಲಿ‌ ನಿಯಮಿತ ಪ್ರಮಾಣದ ಸಕ್ಕರೆ ಇದ್ದರೂ ಕೂಡ ಅದನ್ನು ಅತಿಯಾಗಿ ಸೇವಿಸುವಾಗ ಅದೇ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಹಾಗಾಗಿ ಚೆರ್ರಿ ಹಣ್ಣನ್ನು ಕೂಡ ಸೇವನೆ ಮಾಡುವಾಗ ಡಯಾಬಿಟಿಸ್ ಇದ್ದವರು ಜಾಗೃತವಾಗಿ ಇರಬೇಕು.

ಇದನ್ನು ಓದಿ: Health Tips: ರಕ್ತದಾನ ಮಹಾದಾನ: ಲಾಭಗಳೇನು? ತಪ್ಪುಕಲ್ಪನೆಗಳೇನು?

ಮಾವಿನ ಹಣ್ಣು: ಮಾವಿನ ಹಣ್ಣು ತಿನ್ನಲು ಇಷ್ಟ ಪಡದೆ ಇರುವವರು ಬಹಳ ಕಡಿಮೆ. ಇದು ಬಾಯಿಗೆ ರುಚಿ ಕೊಡುವುದರಲ್ಲಿ ಹಣ್ಣಿನ ರಾಜ ಎಂಬ ಪಟ್ಟವನ್ನೇ ಸೇರಿದೆ. ಹಾಗಾಗಿ ಮಾವಿನ ಹಣ್ಣನ್ನು ಸೇವನೆ ಮಾಡುವಾಗ ಮಧುಮೇಹಿಗಳು ಎಚ್ಚರದಿಂದ ಇರಬೇಕು ಯಾಕೆಂದರೆ ಇದರಲ್ಲಿ ಕೂಡ ಸಕ್ಕರೆ ಪ್ರಮಾಣ ಬಹಳ ಹೆಚ್ಚಾಗಿದೆ. ಹೆಚ್ಚಿನ ಸುಕ್ರೋಸ್ ಮತ್ತು ಫ್ರಕ್ಟೋಸ್ ಹೊಂದಿರುವ ಜೊತೆಗೆ 51-60 ಶೇಕಡದಷ್ಟು ಸಕ್ಕರೆ ಮಟ್ಟ ಹೊಂದಿರುವ ಕಾರಣ ಮಾವಿನ ಹಣ್ಣಿನ ಸೇವನೆ ಮಧುಮೇಹಿಗಳು ಮಾಡಬಾರದು.

ಹಾಗಾಗಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದವರು ಆರೈಕೆ ಉದ್ದೇಶದಿಂದ ಕೆಲವು ಹಣ್ಣು ಸೇವಿಸದೇ ಇರುವುದು ಉತ್ತಮವಾಗಿದೆ. ಡಯಾಬಿಟಿಸ್ ಇದ್ದವರು ಸೇಬು, ಕಿತ್ತಳೆ, ಪೀಚ್,ಪಿಯರ್ಸ್ ,ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸಬಹುದು. ನಿಮ್ಮ ಆರೋಗ್ಯ ಸ್ಥಿತಿ ಆಧರಿಸಿ ಸಕ್ಕರೆ ಮಟ್ಟ ಕಡಿಮೆ ಇರುವ ಹಣ್ಣನ್ನು ಸೇವಿಸಿದಾಗ ಯಾವುದೇ ಸಮಸ್ಯೆ ಬರಲಾರದು‌.