Health Tips: ರಕ್ತದಾನ ಮಹಾದಾನ: ಲಾಭಗಳೇನು? ತಪ್ಪುಕಲ್ಪನೆಗಳೇನು?
ಅಗತ್ಯ ಇರುವವರಿಗೆ ಬೇಕಾದ ಸಂದರ್ಭಕ್ಕೆ ರಕ್ತದಾನಿಗಳನ್ನು ಹುಡುಕುವು ದೇ ಕೆಲವೊಮ್ಮೆ ಸವಾಲಾಗಿ ಪರಿಣಮಿಸುತ್ತದೆ. ಋಕ್ತದಾನದ ಬಗೆಗೆ ಇರುವ ಅಂಜಿಕೆ, ಗೊಂದಲ ಮತ್ತು ತಪ್ಪುಕಲ್ಪನೆಗಳೇ ಇದಕ್ಕೆಲ್ಲ ಮೂಲ ಕಾರಣ. ರಕ್ತದಾನದಿಂದ ಪಡೆದವರಿಗೆ ಮಾತ್ರವಲ್ಲ, ದಾನಿಯ ಆರೋಗ್ಯಕ್ಕೂ ಲಾಭಗಳಿವೆ ಎಂಬುದು ಗೊತ್ತೇ?


ನವದೆಹಲಿ: ರಕ್ತದಾನವೆಂದರೆ ಮಹಾದಾನವೆಂಬ ಮಾತಿದೆ. ವ್ಯಕ್ತಿ ಯೊಬ್ಬ ತನ್ನ ಜೀವಿತಾವಧಿಯಲ್ಲಿ ರಕ್ತದಾನ ಮಾಡುವ ಮೂಲಕ ಹಲವರ ಜೀವವನ್ನು ಉಳಿಸಬಲ್ಲ. ಅಪಘಾತಕ್ಕೀಡಾದವರಿಗೆ,ಕ್ಯಾನ್ಸ ರ್ ರೋಗಿಗಳಿಗೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ- ಹೀಗೆ ಹಲವು ಸಮಸ್ಯೆಗಳನ್ನುಎದುರಿಸುತ್ತಿರುವವರಿಗೆ ರಕ್ತಪೂರಣ ಬೇಕಾಗುತ್ತದೆ. ಆದರೂ ಅಗತ್ಯ ಇರುವವರಿಗೆ ಬೇಕಾದ ಸಂದರ್ಭಕ್ಕೆ ರಕ್ತದಾನಿಗಳನ್ನು ಹುಡುಕುವುದೇ ಕೆಲವೊಮ್ಮೆ ಸವಾಲಾಗಿ ಪರಿಣಮಿಸುತ್ತದೆ.ರಕ್ತದಾನದ ಬಗೆಗೆ ಇರುವ ಅಂಜಿಕೆ, ಗೊಂದಲ ಮತ್ತು ತಪ್ಪುಕಲ್ಪನೆಗಳೇ ಇದಕ್ಕೆಲ್ಲ ಮೂಲ ಕಾರಣ. ರಕ್ತದಾನದಿಂದ ಪಡೆದವರಿಗೆ ಮಾತ್ರವಲ್ಲ, ದಾನಿಯ ಆರೋಗ್ಯಕ್ಕೂ ಲಾಭಗಳಿವೆ ಎಂಬುದು ಗೊತ್ತೇ?(Health Tips)
ದಾನಿಗೆ ಲಾಭಗಳೇನು?: ದಾನಿಯ ರಕ್ತದ ಗುಣಮಟ್ಟ ವೃದ್ಧಿಸುತ್ತದೆ. ಅಂದರೆ ಆವರೆಗೆ ಹಾಳಾಗಿತ್ತು ಎಂದಲ್ಲ. ರಕ್ತದಲ್ಲಿರುವ ಹೆಚ್ಚುವರಿ ಕಬ್ಬಿಣದಂಶವನ್ನು ಈ ಮೂಲಕ ಕಡಿಮೆ ಮಾಡಬಹುದು.ಇದರಿಂದ ರಕ್ತ ದಲ್ಲಿ ಕಬ್ಬಿಣ ಅತಿಯಾಗಿ ಉಂಟಾಗುವ ಹೃದಯಾಘಾತ, ಪಾರ್ಶ್ವ ವಾಯುವನ್ನು ತಡೆಯಬಹುದು. ಇದು ತೂಕ ಕಡಿಮೆ ಮಾಡಿ ಕೊಲೆ ಸ್ಟ್ರಾಲ್ ಸಾಂದ್ರತೆಯನ್ನು ಕಡಿಮೆ ಮಾಡಲೂ ನೆರವಾಗುತ್ತದೆ. ರಕ್ತ ದಾನಕ್ಕೂ ಮೊದಲು ಚುಟುಕು ಆರೋಗ್ಯ ತಪಾಸಣೆಯನ್ನೂ ಮಾಡ ಲಾಗುತ್ತದೆ. ಉದಾ, ರಕ್ತದೊತ್ತಡ, ಹಿಮೋಗ್ಲೋಬಿನ್ ಮಟ್ಟ ಮುಂತಾ ದ ವುಗಳನ್ನು ಪರಿಶೀಲಿಸಲಾಗುತ್ತದೆ. ಹಾಗಾಗಿ ವರ್ಷಕ್ಕೊಮ್ಮೆ ರಕ್ತ ದಾನ ಮಾಡುವುದು ದಾನಿಗೆ ಹಲವು ಲಾಭಗಳನ್ನು ತರಬಲ್ಲದು.
ಇವೆಲ್ಲ ದೈಹಿಕವಾಗಿ ದೊರೆಯುವ ಲಾಭದ ವಿಷಯ. ಆದರೆ ಮಾನ ಸಿಕವಾಗಿ ರಕ್ತದಾನಿಗೆ ದೊರೆಯುವ ತೃಪ್ತಿ ಇವೆಲ್ಲವನ್ನೂ ಮೀರಿದ್ದು. ನಮ್ಮ ಕೆಲಸದಿಂದ ಇನ್ನೊಂದು ಜೀವವನ್ನು ಉಳಿಸುವುದಕ್ಕೆ ಸಾಧ್ಯ ವಾಯಿತೆಂಬ ಸಂತೃಪ್ತಿ ನಿಶ್ಚಿತವಾಗಿ ದೊರೆಯುತ್ತದೆ. ಒಂದೊಮ್ಮೆ ಯಾವುದೋ ಒಬ್ಬ ವ್ಯಕ್ತಿಗಾಗಿ ಅಲ್ಲದೆ, ಜನ್ಮದಿನಕ್ಕೋ ಅಥವಾ ಇನ್ನಾ ರದ್ದೋ ನೆನಪಿಗಾಗಿಯೊ ರಕ್ತದಾನ ಮಾಡಿದರೂ, ಸಮಾಜಕ್ಕೆ ಅಮೂ ಲ್ಯ ವಾದದ್ದನ್ನು ನೀಡಿದ ಭಾವ ಇದ್ದೇಇರುತ್ತದೆ. ಇದರಿಂದ ಯಾವು ದೋ ನೈಸರ್ಗಿಕ ಪ್ರಕೋಪಗಳಲ್ಲಿ, ಅನಿರೀಕ್ಷಿತ ಸನ್ನಿ ವೇಶ ಗಳನ್ನು ಎದುರಿಸುವಾಗ ನಮ್ಮ ಆರೋಗ್ಯ ವ್ಯವಸ್ಥೆ ಹೆಚ್ಚು ಸನ್ನದ್ಧವಾಗಿ ಇರುವುದಕ್ಕೆ ಸಾಧ್ಯ.
ತಪ್ಪು ಕಲ್ಪನೆಗಳೇನು?: ಇದರಲ್ಲಿ ತುಂಬಾ ನೋವಾಗುತ್ತದೆ, ನನ್ನ ವಯಸ್ಸು ಇದಕ್ಕೆ ಸೂಕ್ತವಾಗಿಲ್ಲ, ಇದಕ್ಕೆ ಬಹಳ ಹೊತ್ತು ಬೇಕು… ಇಂಥ ಹಲವು ತಪ್ಪು ಕಲ್ಪನೆಗಳು ಜನರಲ್ಲಿ ಇವೆ. ಇಂದು ಸಾಮಾನ್ಯ ರಕ್ತ ಪರೀಕ್ಷೆಯಲ್ಲಿ ಆಗುವುದಕ್ಕಿಂತ ತೀರಾ ಹೆಚ್ಚು ನೋವೇನೂ ಇದ ರಲ್ಲಿ ಆಗುವುದಿಲ್ಲ. ವಯೋಮಿತಿ 18ರಿಂದ 65 ವರ್ಷದೊಳಗೆ ಇದ್ದ ವರು ರಕ್ತದಾನ ಮಾಡಬಹುದು. ಮೊದಲ ಬಾರಿಗೆ ರಕ್ತದಾನ ಮಾಡು ವವರು 60 ವರ್ಷಗಳ ಒಳಗಿದ್ದು, ಕನಿಷ್ಠ 45 ಕೆ.ಜಿ. ತೂಕ ಇರಲೇ ಬೇಕು. ರಕ್ತದಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಏನೇ ಗೊಂದಲ ಗಳಿದ್ದರೂ ಈ ಬಗ್ಗೆ ವೈದ್ಯರಲ್ಲಿ ಮಾತಾನಾಡುವುದು ಸೂಕ್ತ. ಇದಕ್ಕೆ ದೀರ್ಘ ಸಮಯವೇನೂ ಬೇಕಾಗುವುದಿಲ್ಲ. ನೋಂದಣಿಯಿಂದ ಹಿಡಿದು ಉಳಿದೆಲ್ಲವೂ ಒಂದೆರಡು ತಾಸುಗಳಲ್ಲಿ ಮುಗಿಯುವ ಪ್ರಕ್ರಿಯೆ.
ರಕ್ತದಾನ ಮಾಡಿದ ನಂತರ ವಾರದವರೆಗೆ ಸುಸ್ತು, ಆಯಾಸ ಇರುತ್ತದೆಂಬುದು ಇನ್ನೊಂದು ಭೀತಿ. ಸಾಮಾನ್ಯವಾಗಿ ದಾನ ಮಾಡಿ ಕ್ತದ ಪುನರು ತ್ಪಾದನೆಯನ್ನು ಒಂದೇ ದಿನದಲ್ಲಿ ನಮ್ಮ ದೇಹ ಮಾಡಿ ರುತ್ತದೆ. ಇದಕ್ಕಾಗಿ ಪೌಷ್ಟಿಕ ಆಹಾರವನ್ನು ತಿನ್ನುವುದು ಮುಖ್ಯ. ಸಾಮಾ ನ್ಯ ವಾಗಿ ರಕ್ತದಾನ ಮಾಡಿದ ಕೆಲವೇ ತಾಸುಗಳಲ್ಲಿ ದೇಹ ಚೈತನ್ಯಪೂರ್ಣವಾಗುತ್ತದೆ.
ಎಲ್ಲಾ ರಕ್ತದ ಗುಂಪಿನವರೂ ರಕ್ತದಾನ ಮಾಡಬಹುದು. ಈ ಕುರಿತಾಗಿ ಯಾವುದೇ ಮಿತಿಗಳಿಲ್ಲ. ಎಲ್ಲ ಗುಂಪಿನ ರಕ್ತದ ಅಗತ್ಯವೂ ಒಂದ ಲ್ಲೊಂದು ಸಮಯಕ್ಕೆ ಇದ್ದೇ ಇರುತ್ತದೆ. ಪದೇಪದೆ ರಕ್ತದಾನ ಮಾಡು ವಂತಿಲ್ಲ ಎನ್ನುವ ಮಾತೂ ಚಾಲ್ತಿಯಲ್ಲಿದೆ. ಆದರೆ ಆರೋಗ್ಯವಂತ ವ್ಯಕ್ತಿಯು ವರ್ಷಕ್ಕೆರಡು ಬಾರಿ ಖಂಡಿತವಾಗಿ ರಕ್ತದಾನ ಮಾಡ ಬಹುದು. ಇದರಿಂದ ದಾನಿಯ ದೇಹಕ್ಕೆ ಯಾವ ತೊಂದರೆಯೂ ಆಗುವುದಿಲ್ಲ.
ಟ್ಯಾಟೂ ಹಾಕಿಸಿಕೊಂಡವರು, ಕೆಲವು ಮಾತ್ರಗಳನ್ನು ತಿನ್ನುವವರು ರಕ್ತದಾನ ಮಾಡುವಂತಿಲ್ಲ ಎಂಬುದು ಮತ್ತೊಂದು ತಪ್ಪುಕಲ್ಪನೆ. ಸರಿಯಾಗಿರುವ, ಸುರಕ್ಷಿತವಾದ, ನೋಂದಾಯಿತು ಕೇಂದ್ರಗಳಲ್ಲಿ ಸ್ಟರಿಲೈಜ್ ಮಾಡಿದ ವಸ್ತುಗಳನ್ನೇ ಬಳಸಿ ಟ್ಯಾಟೂ ಹಾಕಿಸಿ ಕೊಂಡಿದ್ದರೆ, ಒಂದು ವರ್ಷದ ನಂತರ ರಕ್ತದಾನ ಮಾಡಬಹುದು. ದೀರ್ಘಕಾಲದಿಂದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ರಕ್ತದಾನ ಮಾಡಬಹುದೇ ಎಂಬ ಅನುಮಾನವಿದ್ದರೆ ಈ ಬಗ್ಗೆ ವೈದ್ಯರಲ್ಲಿ ಕೇಳಿ.
ಇದನ್ನು ಓದಿ: Health Tips: ಪ್ರತಿನಿತ್ಯ 4 ಕಿ.ಮೀ. ವಾಕ್ ಮಾಡಿ ಸಾಕು! ನಿಮ್ಮ ಹೃದಯ ಸದಾ ಆರೋಗ್ಯವಾಗಿರುತ್ತೆ
ಕಾಳಜಿ ಮಾಡಿ: ರಕ್ತದಾನ ಮಾಡುವವರು ಅಥವಾ ಮಾಡಿದವರು ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಚೆನ್ನಾಗಿ ಸೇವಿಸಿ. ಪೌಷ್ಟಿಕವಾದ ಆಹಾರ ತಿನ್ನಿ. ದೇಹಕ್ಕೆ ಎಂಟು ತಾಸುಗಳ ನಿದ್ದೆಯನ್ನು ಅಗತ್ಯವಾಗಿ ನೀಡಿ. ಇದರಿಂದ ದಾನ ಮಾಡಿದ ರಕ್ತವನ್ನು ತ್ವರಿತವಾಗಿ ಪುನರುತ್ಪಾದನೆ ಮಾಡದು ದೇಹಕ್ಕೆ ಸಾಧ್ಯವಾಗುತ್ತದೆ. ರಕ್ತದಾನ ಮಾಡಿದ ದಿನ ಕಠಿಣವಾದ ದೈಹಿಕ ಶ್ರಮದ ಕೆಲಸಗಳನ್ನು ಮಾಡ ಬೇಡಿ. ಇದಿಷ್ಟು ಮಾಡಿದರೆ, ಒಂದು ಬಾಟಲಿ ರಕ್ತದಿಂದ ಮೂರು ಜೀವಗಳವರೆಗೂ ಉಳಿಸಬಹುದು.