ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್ ನಿಂದ ಭಾರತದಲ್ಲಿ ಸಿಂಪ್ಟೊಮ್ಯಾಟಿಕ್ ಅಬ್ ಸ್ಟ್ರಕ್ಟಿವ್ ಹೈಪರ್ಟ್ರೊಫಿಕ್ ಕಾರ್ಡಿಯೊಮಯೋಪತಿಗೆ ಕೊಪೊಝೊ ಬಿಡುಗಡೆ

ಭಾರತದಲ್ಲಿರುವ ಪ್ರಸ್ತುತದ ವೈದ್ಯಕೀಯ ಚಿಕಿತ್ಸೆಗಳಾದ ಬೀಟಾ ಬ್ಲಾಕರ್ ಗಳು, ಕ್ಯಾಲ್ಷಿಯಂ ಚಾನೆಲ್ ಬ್ಲಾಕರ್ ಗಳು ಮತ್ತು ಡಿಸೊಪೈರಮೈಡ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಆದರೆ ಅದರ ಆಂತರ್ಯದಲ್ಲಿರುವ ಕಾರಣವನ್ನು ನಿವಾರಿಸುವುದಿಲ್ಲ. ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ ಗಳಾದ ಸೆಪ್ಟಲ್ ರಿಡಕ್ಷನ್ ಥೆರಪಿ (ಆಲ್ಕೊಹಾಲ್ ಸೆಪ್ಟಲ್ ಅಬಲೇಷನ್ ಅಥವಾ ಮೈಯೆಕ್ಟಮಿ) ಆಯ್ಕೆಗಳೇ ಹೊರತು ಅವು ಸೂಕ್ತವಾಗಿಲ್ಲದಿರಬಹುದು ಅಥವಾ ಎಲ್ಲ ರೋಗಿಗಳಿಗೂ ಲಭ್ಯ ವಿಲ್ಲದೇ ಇರಬಹುದು.

ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್ (ಬಿಎಂಎಸ್) ಇಂದು ಭಾರತದಲ್ಲಿ ಕೊಪೊಝೊ (ಮವಕ್ಯಾಮ್ಟೆನ್) ಬಿಡುಗಡೆ ಮಾಡಿದೆ. ಕೊಪೊಝೊ ಭಾರತದಲ್ಲಿ ಅನುಮೋದನೆ ಪಡೆದ ಸಿಂಪ್ಟೊಮ್ಯಾಟಿಕ್ ನ್ಯೂಯಾರ್ಕ್ ಹಾರ್ಟ್ ಅಸೋಸಿಯೇಷನ್ (ಎನ್.ವೈ.ಎಚ್.ಎ) ಕ್ಲಾಸ್ II- III ಅಬ್ ಸ್ಟ್ರಕ್ಟಿವ್ ಹೈಪರ್ಟ್ರೊಫಿಕ್ ಕಾರ್ಡಿಯೊಮಯೋಪತಿ(ಒ.ಎಚ್.ಸಿ.ಎಂ.) ಚಿಕಿತ್ಸೆಗೆ ಮೊದಲ ಮತ್ತು ಏಕೈಕ ಮೌಖಿಕ ಔಷಧವಾಗಿದೆ (symptomatic New York Heart Association (NYHA) Class II–III obstructive hypertrophic cardiomyopathy (oHCM)).

ಸಿಂಪ್ಟೊಮ್ಯಾಟಿಕ್ ಅಬ್ ಸ್ಟ್ರಕ್ಟಿವ್ ಎಚ್.ಸಿ.ಎಂ. ಸಾಮಾನ್ಯವಾಗಿ ಅನುವಂಶಿಕ ಹೃದಯರೋಗ ವಾಗಿದ್ದು ಅದು ತೀವ್ರವಾಗಿರಬಹುದು, ದುರ್ಬಲಗೊಳಿಸಬಹುದು ಮತ್ತು ಪ್ರಗತಿಶೀಲವಾಗಿದ್ದು ಅದರಲ್ಲಿ ರೋಗಿಗಳು ಉಸಿರಾಟದ ಕೊರತೆ, ತಲೆ ತಿರುಗುವಿಕೆ ಮತ್ತು ಆಯಾಸದ ಲಕ್ಷಣಗಳನ್ನು ಅನುಭವಿಸಬಹುದು ಹಾಗೂ ಗಂಭೀರ, ಜೀವನ ಬದಲಾಯಿಸುವ ಸಂಕೀರ್ಣತೆಗಳಾದ ಹೃದಯ ವೈಫಲ್ಯ, ಅರ್ರಿಹಿಥ್ಮಿಯಾಸ್, ಪಾರ್ಶ್ವವಾಯು ಮತ್ತು ಅಪರೂಪದ ಪ್ರಕರಣಗಳಲ್ಲಿ (~1%) ದಿಢೀರ್ ಹೃದಯ ಸ್ತಂಭನ ಉಂಟಾಗಬಹುದು. ಇದು ವಿಶ್ವದಾದ್ಯಂತ 500 ಜನರಲ್ಲಿ ಒಬ್ಬರಿಗೆ ಬಾಧಿಸುತ್ತದೆ ಮತ್ತು ಭಾರತದಲ್ಲಿ 2.8 ಮಿಲಿಯನ್ ಜನರು ಈ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ, ಆದಾಗ್ಯೂ ಶೇ.80-90ರಷ್ಟು ರೋಗಿಗಳು ರೋಗಪರೀಕ್ಷೆಯಾಗದೆ ಉಳಿದಿದ್ದಾರೆ.

ಇದನ್ನೂ ಓದಿ: World mental health day: ಮನಸ್ಸೆಂಬ ಯಂತ್ರವನ್ನು ಸುಸ್ಥಿತಿಯಲ್ಲಿಯಿರಿಸಿಕೊಳ್ಳಿ

ಭಾರತದಲ್ಲಿರುವ ಪ್ರಸ್ತುತದ ವೈದ್ಯಕೀಯ ಚಿಕಿತ್ಸೆಗಳಾದ ಬೀಟಾ ಬ್ಲಾಕರ್ ಗಳು, ಕ್ಯಾಲ್ಷಿಯಂ ಚಾನೆಲ್ ಬ್ಲಾಕರ್ ಗಳು ಮತ್ತು ಡಿಸೊಪೈರಮೈಡ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಆದರೆ ಅದರ ಆಂತರ್ಯದಲ್ಲಿರುವ ಕಾರಣವನ್ನು ನಿವಾರಿಸುವುದಿಲ್ಲ. ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ ಗಳಾದ ಸೆಪ್ಟಲ್ ರಿಡಕ್ಷನ್ ಥೆರಪಿ (ಆಲ್ಕೊಹಾಲ್ ಸೆಪ್ಟಲ್ ಅಬಲೇಷನ್ ಅಥವಾ ಮೈಯೆಕ್ಟಮಿ) ಆಯ್ಕೆಗಳೇ ಹೊರತು ಅವು ಸೂಕ್ತವಾಗಿಲ್ಲದಿರಬಹುದು ಅಥವಾ ಎಲ್ಲ ರೋಗಿಗಳಿಗೂ ಲಭ್ಯ ವಿಲ್ಲದೇ ಇರಬಹುದು. ಹೆಚ್ಚುವರಿಯಾಗಿ ಈ ಚಿಕಿತ್ಸೆಗಳಿಗೆ ಹೆಚ್ಚಿನ ಆಪರೇಟರ್ ಮತ್ತು ಶಸ್ತ್ರ ಚಿಕಿತ್ಸೆಯ ಪರಿಣಿತಿ ಅಗತ್ಯ. ಆದ್ದರಿಂದ ಒ.ಎಚ್.ಸಿ.ಎಂ.ನ ವೈದ್ಯಕೀಯ ನಿರ್ವಹಣೆಯು ಪ್ರಮುಖ ವಾಗಿ ಪೂರೈಸಲಾಗದ ಅಗತ್ಯವಾಗಿ ಉಳಿದಿದೆ.

ಕೊಪೊಝೊ ಈ ವರ್ಗದ ಪ್ರಥಮ ರೋಗ-ನಿರ್ದಿಷ್ಟ ಚಿಕಿತ್ಸೆಯಾಗಿದ್ದು ಅಬ್ ಸ್ಟ್ರಕ್ಟಿವ್ ಒ.ಎಚ್.ಸಿ.ಎಂ.ನ ಮುಖ್ಯ ಪ್ಯಾಥೊಫಿಸಿಯೋಲಾಜಿಕಲ್ ಮೆಕ್ಯಾನಿಸಂ ಗುರಿಯಾಗಿಸಿಕೊಳ್ಳುತ್ತದೆ, ಇದರಿಂದ ಹೃದಯದ ಕೆಲಸದ ಸಾಮರ್ಥ್ಯದಲ್ಲಿ ಮತ್ತು ರೋಗಲಕ್ಷಣಗಳಲ್ಲಿ ಸುಧಾರಣೆ ಯಾಗುತ್ತದೆ.

ಮವಕ್ಯಾಮ್ಟೆನ್ ಅನ್ನು ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಸಿ.ಡಿ.ಎಸ್.ಸಿ.ಒ) ಅನುಮೋದಿಸಿದ್ದು ಮಾರ್ಚ್ 6, 2025ರಂದು ಆಮದು ಅನುಮತಿ ನೀಡಲಾಗಿದೆ. ಕೊಪೊಝೊ ಭಾರತದಲ್ಲಿ ರೋಗಿಗಳಿಗೆ ಈಗ ಲಭ್ಯವಿರುತ್ತದೆ. ಭಾರತದಲ್ಲಿ ಕೊಪೊಝೊ ಅನುಮೋದನೆಯು ಎರಡು ಫೇಸ್ 3 ಟ್ರಯಲ್ ಗಳಾದ ಎಕ್ಸ್ ಪ್ಲೋರರ್-ಎಚ್.ಸಿ.ಎಂ. ಮತ್ತು ವೇಲರ್-ಎಚ್.ಸಿ.ಎಂ.ಗಳ ಸಕಾರಾತ್ಮಕ ಮತ್ತು ಸುರಕ್ಷತೆಯ ಫಲಿತಾಂಶಗಳನ್ನು ಆಧರಿಸಿದೆ.

ಬಿಎಂಎಸ್ ಇಂಡಿಯಾದ ಜನರಲ್ ಮ್ಯಾನೇಜರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಶರ್ಮಾ, “ಭಾರತದಲ್ಲಿ ಕೊಪೊಝೊ ಬಿಡುಗಡೆಯಿಂದ ಒ.ಎಚ್.ಸಿ.ಎಂ. ಉಳ್ಳ ರೋಗಿಗಳಿಗೆ ಈಗ ಭರವಸೆಯ ಈ ವರ್ಗದ ಪ್ರಥಮ ಚಿಕಿತ್ಸೆಯ ಆಯ್ಕೆ ದೊರೆತಂತಾಗಿದೆ. ಈ ಮಹತ್ತರ ಬೆಳವಣಿಗೆಯು ಈ ಲಕ್ಷಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಭರವಸೆ ತಂದಿದ್ದು ವೈದ್ಯರಿಗೆ ಅವರ ರೋಗಿಗಳ ಜೀವನದ ಗುಣಮಟ್ಟ ಹೆಚ್ಚಿಸಲು ಹೊಸ ಆಯ್ಕೆ ನೀಡಿದೆ. ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್ ಭಾರತದಲ್ಲಿ ರೋಗಿಗಳ ಹೃದಯಸಂಬಂಧಿ ಆರೈಕೆಯಲ್ಲಿ ಮುಂದುವರಿಸಲು ಬದ್ಧವಾಗಿದೆ” ಎಂದರು.

ಜಾಗತಿಕವಾಗಿ ಮವಕ್ಯಾಮ್ಟೆನ್ ವಿಸ್ತಾರವಾಗಿ ಮಾನ್ಯತೆ ಪಡೆದಿದ್ದು ಮೊದಲಿಗೆ ಏಪ್ರಿಲ್ 28, 2022 ರಂದು ಯು.ಎಸ್.ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್.ಡಿ.ಎ) ಅನುಮೋದನೆ ದೊರೆತಿದ್ದು ಇದು ಜೂನ್ 26, 2023ರಂದು ಯೂರೋಪಿಯನ್ ಯೂನಿಯನ್ ಅನುಮೋದಿಸಿದೆ. ಅಂದಿನಿಂದ ಈ ಔಷಧವು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು 50ಕ್ಕೂ ಹೆಚ್ಚು ದೇಶಗಳಲ್ಲಿ ಮಾರ್ಕೆಟಿಂಗ್ ದೃಢೀಕರಣ ಪಡೆದಿದ್ದು ಇದು ಸಿಂಪ್ಟೊಮ್ಯಾಟಿಕ್ ಅಬ್ ಸ್ಟ್ರಕ್ಟಿವ್ ಹೈಪರ್ಟ್ರೊಫಿಕ್ ಕಾರ್ಡಿಯೊಮ ಯೋಪತಿಯ ಮಹತ್ತರ ಥೆರಪಿಗೆ ಜಾಗತಿಕ ಮಹತ್ವವನ್ನು ಎತ್ತಿ ತೋರಿಸಿದೆ.

ಎರಡು ಫೇಸ್-3 ಕ್ಲಿನಿಕಲ್ ಸ್ಟಡೀಸ್ ನಲ್ಲಿ ಮವಕಾಮ್ಟೆನ್ ಸತತ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಪ್ರೊಫೈಲ್ ತೋರಿಸಿದೆ. ಕೆಲ ರೋಗಿಗಳು ಎಜೆಕ್ಷನ್ ಫ್ರಾಕ್ಷನ್ (ಹೃದಯದ ಪಂಪಿಂಗ್ ಸಾಮರ್ಥ್ಯ) ನಲ್ಲಿ ಆಗಾಗ್ಗೆ ಕುಸಿತ ಅನುಭವಿಸಿದರು; ಆದಾಗ್ಯೂ ಎಲ್ಲ ರೋಗಿಗಳೂ ಅಡೆತಡೆಯ ನಂತರ ಚೇತರಿಸಿಕೊಂಡರು.

ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್ ಭಾರತದಲ್ಲಿ 20 ವರ್ಷಗಳಿಗೂ ಮೇಲ್ಪಟ್ಟು ಬಳಕೆಯಲ್ಲಿದೆ ಮತ್ತು ಪ್ರಸ್ತುತ ಆಂಕಾಲಜಿ ಮತ್ತು ಹೆಮಟಾಲಜಿಗೆ ಚಿಕಿತ್ಸೆಗಳಲ್ಲಿ ನೀಡಲಾಗುತ್ತಿದೆ. ಭಾರತದಲ್ಲಿ ಕೊಪೊಝೊ ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್ ಬಿಡುಗಡೆ ಕಾರ್ಡಿಯಾಲಜಿಯಲ್ಲಿ ಚಿಕಿತ್ಸೆಯ ಕೊಡುಗೆಗಳ ವಿಸ್ತರಣೆಯ ಗುರುತಾಗಿದೆ. ಈ ಬೆಳವಣಿಗೆಯು ಆಂಕಾಲಜಿ ಮತ್ತು ಹೆಮಟಾಲಜಿಯಲ್ಲಿ ಕಂಪನಿಯ ಸದೃಢ ಉಪಸ್ಥಿತಿ ನಿರ್ಮಿಸಿದ್ದು ತನ್ನ ಪೋರ್ಟ್ ಫೋಲಿಯೊ ವಿಸ್ತರಣೆಯನ್ನು ಪ್ರತಿನಿಧಿಸುತ್ತದೆ. ಬಿಎಂಎಸ್ ಭಾರತದಲ್ಲಿ ರೋಗಿಗಳಿಗೆ ಅತ್ಯುತ್ತಮ ಜಾಗತಿಕ ಚಿಕಿತ್ಸೆಗಳನ್ನು ನೀಡುವ ಗುರಿ ಹೊಂದಿದೆ ಮತ್ತು ಹೆಚ್ಚು ರೋಗಿಗಳಿಗೆ ಹೆಚ್ಚು ಔಷಧಗಳನ್ನು ವೇಗವಾಗಿ ತರಲು ಬದ್ಧವಾಗಿದೆ.