ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bellary News: ಬಳ್ಳಾರಿಯಲ್ಲಿ ಕಸದ ವಾಹನ ಹರಿದು 3 ವರ್ಷದ ಬಾಲಕ ಸಾವು

Bellary News: ಬಳ್ಳಾರಿಯ ಬಾಪೂಜಿ ನಗರದಲ್ಲಿ ಘಟನೆ ನಡೆದಿದೆ. ರಸ್ತೆ ಬದಿ ಆಟ ಆಡುತ್ತಿದ್ದ ಬಾಲಕನ ತಲೆ ಮೇಲೆ ವಾಹನ ಹರಿದು ದುರಂತ ನಡೆದಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪಾಲಿಕೆ ಮೇಯರ್ ನಂದೀಶ್ ಹಾಗೂ ಪೊಲೀಸರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಕಸದ ವಾಹನ ಹರಿದು 3 ವರ್ಷದ ಬಾಲಕ ಸಾವು

Prabhakara R Prabhakara R Jul 29, 2025 10:44 PM

ಬಳ್ಳಾರಿ: ಮಹಾನಗರ ಪಾಲಿಕೆಯ ಕಸ ಸಂಗ್ರಹಣೆ ವಾಹನ ಹರಿದು ಮೂರು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಬಳ್ಳಾರಿಯ (Bellary News) ಬಾಪೂಜಿ ನಗರದಲ್ಲಿ ನಡೆದಿದೆ. ನಗರದ ಶೈಲಜಾ- ಸಮರ ದಂಪತಿ ಪುತ್ರ ವಿಕ್ಕಿ (3) ಮೃತ ಬಾಲಕ. ಬೆಳಗ್ಗೆ ಬಾಪೂಜಿ ನಗರದಲ್ಲಿ ಕಸ ಸಂಗ್ರಹಿಸಲು ವಾಹನ ಬಂದಿತ್ತು. ಈ ವೇಳೆ, ರಸ್ತೆ ಬದಿ ಆಟ ಆಡುತ್ತಿದ್ದ ವಿಕ್ಕಿ ತಲೆ ಮೇಲೆ ವಾಹನ ಹರಿದಿದೆ. ಕೂಡಲೇ ಗಾಯಳು ಮಗುವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆಸ್ಪತ್ರೆ ಮುಟ್ಟುವುದರಲ್ಲೇ ಮಗು ಕೊನೆ ಉಸಿರೆಳೆದಿದೆ.

ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪಾಲಿಕೆ ಮೇಯರ್ ನಂದೀಶ್ ಹಾಗೂ ಪೊಲೀಸರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗದಂದ ಮಗು ಬಲಿಯಾಗಿದೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Murder Case: ಮೊಮ್ಮಗಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹೆಂಡತಿಯನ್ನೇ ಕೊಂದ ವ್ಯಕ್ತಿ

ಚಳ್ಳಕೆರೆಯಲ್ಲಿ ಕಾರು-ಬೈಕ್ ಡಿಕ್ಕಿಯಾಗಿ ಅಣ್ಣ-ತಂಗಿ ದಾರುಣ ಸಾವು

ಚಿತ್ರದುರ್ಗ: ಚಳ್ಳಕೆರೆ ಬಳಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ಬೈಕ್‍ನಲ್ಲಿದ್ದ ಅಣ್ಣ-ತಂಗಿ ಮೃತಪಟ್ಟಿದ್ದಾರೆ. ಮೃತರನ್ನು ತಳಕು ಗ್ರಾಮದ ಅಭಿ (28), ತಂಗಿ ಮಂಜುಳಾ (25) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ರಾಯಚೂರು ಮೂಲದ ಕಾರು ಚಾಲಕ ನಾಗಿರೆಡ್ಡಿ ಗಾಯಗೊಂಡಿದ್ದು, ಆತನನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಪಟೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು

ತಿಪಟೂರು: ಯುವಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ (Tiptur News)‌ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಗದಹಳ್ಳಿಯಲ್ಲಿ ಜರುಗಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದ ಹರ್ಷ ಬಿ.ಪಿ (25) ಮೃತ ಯುವಕ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ನಾಗಸಂದ್ರದಲ್ಲಿ ತರಕಾರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ಯುವಕ ಹರ್ಷ ಕುಟುಂಬಸ್ಥರು ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದರು. ಈತ ಕಳೆದ ಆರು ವರ್ಷದ ಹಿಂದೆ ತಿಪಟೂರು ತಾಲೂಕಿನ ಗುರುಗದಹಳ್ಳಿಗೆ ದೇವರ ಕಾರ್ಯಕ್ಕೆಂದು ಹೋದಾಗ ಅದೇ ಗ್ರಾಮದ ಭೂಮಿಕಾ ಎಂಬ ಯುವತಿಯ ಪರಿಚಯವಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಜು.18 ರಂದು ತನ್ನ ಸಹೋದರನು ಊರಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ಜು.20 ರಂದು ಗುರುಗದಹಳ್ಳಿಯ ಮನೆಯೊಂದರ ಹಿತ್ತಲಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಎಂದು ಮೃತ ಯುವಕನ ಸಹೋದರ ರಾಕೇಶ್‌, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Murder Case: ಪಾರ್ಟಿ ಮಾಡುತ್ತಿದ್ದ ಮಾಜಿ ಗ್ರಾ.ಪಂ ಅಧ್ಯಕ್ಷನ ಮೇಲೆ ಡೆಡ್ಲಿ ಅಟ್ಯಾಕ್‌; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಮನೆಗೆ ಆಧಾರವಾಗಿದ್ದ ಹಿರಿಯ ಮಗನ ಸಾವಿನಿಂದಾಗಿ ಕುಟುಂಬವೇ ಕುಗ್ಗಿ ಹೋಗಿದೆ. ನನ್ನ ಅಣ್ಣನ ಸಾವು ಅನುಮಾನಾಸ್ಪದವಾಗಿದ್ದು, ಅಣ್ಣನ ಸಾವಾಗಿ ವಾರ ಕಳೆದರೂ ಪೊಲೀಸರು ಈವರೆಗೂ ಆ ಹುಡುಗಿ ಮನೆಯವರನ್ನು ಕರೆಸಿ ತನಿಖೆ ನಡೆಸುತ್ತಿಲ್ಲ ಎಂದು ಮೃತ ಯುವಕನ ಸಹೋದರ ರಾಕೇಶ್‌ ಆರೋಪಿಸಿದ್ದಾರೆ. ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.