ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shocking news: ಹೆಣ್ಣು ಮಗು ಎಂದು ಕಾಲುವೆಗೆ ಎಸೆದು ಕೊಂದ ಹೆತ್ತ ತಾಯಿ!

Murder case: ಈ ದಂಪತಿಗಳಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗುವಾಗಿ ಎರಡು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದೇ ಕಾರಣಕ್ಕೆ ಪ್ರಿಯಾಂಕಾ ದೇವಿ ಕಾಲುವೆಗೆ ಎಸೆದು ಹಸುಗೂಸು ಕೊಂದಿದ್ದಾರೆ. ಕಾಲುವೆಗೆ ಎಸೆದು ಬಂದು, ಮಗು ಕಾಣುತ್ತಿಲ್ಲ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

ಹೆಣ್ಣು ಮಗು ಎಂದು ಕಾಲುವೆಗೆ ಎಸೆದು ಕೊಂದ ಹೆತ್ತ ತಾಯಿ!

-

ಹರೀಶ್‌ ಕೇರ ಹರೀಶ್‌ ಕೇರ Sep 22, 2025 8:02 AM

ಬಳ್ಳಾರಿ: ರಾಜ್ಯದಲ್ಲೊಂದು ಶಾಕಿಂಗ್ ಘಟನೆ (Shocking news) ನಡೆದಿದ್ದು, ಎರಡು ತಿಂಗಳ ಹೆಣ್ಣು ಮಗುವನ್ನು (toddler) ಪಾಪಿ ತಾಯಿಯೊಬ್ಬಳು (mother) ಕಾಲುವೆಗೆ ಎಸೆದು ಕೊಲೆ (Murder case) ಮಾಡಿರುವ ಘಟನೆ ಬಳ್ಳಾರಿಯಲ್ಲಿ (bellary news) ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್‌ನಲ್ಲಿ ಎರಡು ತಿಂಗಳ ಹಸುಗೂಸನ್ನು ಹೆಣ್ಣು ಮಗು ಎನ್ನುವ ಕಾರಣಕ್ಕೆ ಕಾಲುವೆಗೆ ಎಸೆದು ಆ ಮಗುವಿನ ಹೆತ್ತ ತಾಯಿಯೇ ಕೊಂದಿದ್ದಾಳೆ.

ಹಸುಗೂಸನ್ನು ಕಾಲುವೆಗೆ ಎಸೆದ ತಾಯಿ ಪ್ರಿಯಾಂಕಾ ದೇವಿ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈಕೆಯ ಪತಿ ಸೂರಜ್ ಕುಮಾರ್ ಖಾಸಗಿ ಕಂಪನಿಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಿಯಾಂಕಾ ದೇವಿ ಹಾಗೂ ಸೂರಜ್ ಕುಮಾರ್ ದಂಪತಿಗಳು ಬಿಹಾರ ಮೂಲದವರಾಗಿದ್ದಾರೆ. ಈ ದಂಪತಿಗಳು ಬಳ್ಳಾರಿಯ ಸಂಡೂರಿನ ತೋರಣಗಲ್‌ನಲ್ಲಿ ವಾಸವಿದ್ದರು.

ಈ ದಂಪತಿಗಳಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗುವಾಗಿ ಎರಡು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದೇ ಕಾರಣಕ್ಕೆ ಪ್ರಿಯಾಂಕಾ ದೇವಿ ಕಾಲುವೆಗೆ ಎಸೆದು ಹಸುಗೂಸು ಕೊಂದಿದ್ದಾರೆ. ಕಾಲುವೆಗೆ ಎಸೆದು ಬಂದು, ಮಗು ಕಾಣುತ್ತಿಲ್ಲ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ತೋರಣಗಲ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪಾಪಿ ತಾಯಿಯ ಕೃತ್ಯ ಬಯಲಾಗಿದೆ. ಈ ಸಂಬಂಧ ಪೊಲೀಸರು ಪ್ರಿಯಾಂಕಾ ದೇವಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: Stabbing Case: ಕೋರ್ಟ್ ಆವರಣದಲ್ಲೇ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪತಿ!