ಬೆಳಗಾವಿ: ರಾಷ್ಟ್ರಪಿತ ಗಾಂಧೀಜಿ ಮತ್ತು ಶಾಂತಿದೂತ ಶಾಸ್ತ್ರೀಜಿ ಅವರಿಗೆ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ಬೆಳಗಾವಿಯಲ್ಲಿ ಹುಟ್ಟು ಹಬ್ಬದ ನಮನಗಳು
ಇದೀಗ ತಾನೇ ಹುಟ್ಟಿದ ಮಗುವಿನ ದೇಹದಲ್ಲಿ ಉಸಿರಿರುತ್ತದೆ ಹೆಸರು ಇರುವುದಿಲ್ಲ. ಅದೇ ವ್ಯಕ್ತಿ ಬೆಳೆದು ದೊಡ್ಡವನಾಗಿ ಸತ್ತ ಮೇಲೆ ಅವನಲ್ಲಿ ಉಸಿರಿರುವುದಿಲ್ಲ ಹೆಸರಿರುತ್ತದೆ. ಹಾಗೆ ಸೂರ್ಯ ಚಂದ್ರರಿರುವರೆಗೂ ಹೆಸರನ್ನು ಶಾಸ್ವತವಾಗಿರಿಸಿದವರು ಮಹಾಪುರುಷರು. ಅಂತವರಲ್ಲಿ ಒಬ್ಬ ರಾಗಿರುವ ಅಹಿಂಸಾವಾದಿ ರಾಷ್ಟ್ರಪಿತ ಶಾಸ್ತ್ರೀಜಿ ಮಹಾತ್ಮಾ ಗಾಂಧೀಜಿ ಹಾಗೂ ಶಾಂತಿದೂತ ಲಾಲ್ ಬಹದ್ದೂರಯವರ ಜನ್ಮದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾ ಡಿದ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ಬೆಳಗಾವಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಜಿ. ಕೌಲಗಿಯವರು ಇಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಾ ಅಹಿಂಸಾವಾದಿ ಮತ್ತು ಶಾಂತಿದೂತನ ಕ್ರಾಂತಿಕಾರ್ಯಗಳಿಗೆ ನಮನ ಸಲ್ಲಿಸುತ್ತದ್ದೇವೆ. .
ಚಳುವಳಿಯಲ್ಲಿ ಅಹಿಂಸೆಯ ತತ್ವಗಳು ಭಾರತ ಸ್ವಾತಂತ್ರ್ಯ ಪ್ರಮುಖ ಪಾತ್ರವಹಿಸಿ ಜಗತ್ತಿನಾದ್ಯಂತ ಶಾಂತಿಯುತ ಪ್ರತಿರೋಧಕ ಶಕ್ತಿಯನ್ನು ತೋರಿಸಿದವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಯವರು. ಗಾಂಧೀಜಿಯವರ ಪ್ರಕಾರ ಅಹಿಂಸೆ ಎಂದರೆ ಶಾರೀರಿಕ ಮತ್ತು ಮಾನಸಿಕ ಹಿಂಸೆಯನ್ನು ಸಂಪೂರ್ಣವಾಗಿ ತ್ಯಜಿಸುವುದು. ಪ್ರೀತಿ ಶಾಂತಿ ಮತ್ತು ಸಮಾನತೆಯ ತತ್ವಗಳ ಆಧಾರದ ಮೇಲೆ ಹೋರಾಡುವುದು. ಈ ರೀತಿ ಜನರಲ್ಲಿ ಪ್ರೀತಿ ಸಂಪಾದಿಸಿ ಸ್ವಾತಂತ್ರ್ಯ ಪಡೆಯಲು ಕಾರಣಕರ್ತ ರಾದವ ಗಾಂಧೀಜಿ. ಬ್ರಿಟಿಷರು ಶಾಂತಿ ಮಂತ್ರಕ್ಕೆ ಒಪ್ಪದಿದ್ದಾಗ ೧೯೪೨ ರಲ್ಲಿ “ಭಾರತ ಬಿಟ್ಟು ತೊಲಗಿ” ಎಂದು ಗುಡುಗಿದರು.
ಇದನ್ನೂ ಓದಿ: Gandhi Jayanti: ಇಂದು ಮಹಾತ್ಮ ಗಾಂಧೀಜಿಯ 156ನೇ ಜನ್ಮದಿನ- ಪ್ರಪಂಚಾದ್ಯಂತ ಅಹಿಂಸಾ ದಿನದ ಆಚರಣೆ ಮೂಲಕ ಬಾಪೂ ಸ್ಮರಣೆ
ನಂತರ ಉಪ್ಪಿನ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಮುಂತಾದ ಸತ್ಯಾಗ್ರಹಗಳನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಕೈಗೊಂಡು ಚಳುವಳಿಗಳನ್ನು ನಡೆಸಿದರು ಕೊನೆಯದಾಗಿ ‘ಮಾಡು ಇಲ್ಲವೆ ಮಡಿ’ ಎಂದು ಘೋಷವಾಕ್ಯದೊಂದಿಗೆ ಭಾರತೀಯರನ್ನು ಹುರಿದುಂಬಿಸಿದರು. ಗಾಂಧೀಜಿಯವರು ತಮ್ಮ ಮೂರು ಮೂಲ ಮಂತ್ರಗಳಾದ ಸತ್ಯ, ಶಾಂತಿ ಹಾಗೂ ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವುದರೊಂದಿಗೆ ಇಡೀ ವಿಶ್ವದಲ್ಲಿ ಅಹಿಂಸೆಯಿಂದ ಸ್ವಾತಂತ್ರ್ಯವನ್ನು ಗಳಿಸಿದ ಪ್ರಥಮ ಏಕೈಕ ರಾಷ್ಟ್ರವಾಗಲು ಕಾರಣಕರ್ತಕಾದರು ಇದರಿಂದ ಗಾಂಧೀಜಿಯವರು ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಶಾಂತಿದೂತ ಎಂಬ ಬಿರುದು ಪಡೆದಿದ್ದಾರೆ.
ಒಬ್ಬರಾಗಿ ವಿಶ್ವಮಾನವ, ಮಹಾತ್ಮ ಹಾಗೂ ಅದೇ ರೀತಿಯಾಗಿ “ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು” ಎಂಬ ನಾನ್ನುಡಿಯಂತೆ ರಾಷ್ಟ್ರದ ಇನ್ನೋರ್ವ ಸ್ವಾತಂತ್ರ್ಯಹೋರಾಟಗಾರ ಭಾರತದ ಎರಡನೇ ಪ್ರಧಾನಮಂತ್ರಿಗಳಾದ ಶ್ರೀಯುತ ಲಾಲ್ ಬಹದ್ದೂರ ಶಾಸ್ತ್ರೀಯವರು ಕೂಡಾ ಅತ್ಯಂತ ಕಡುಬಡವ ಕುಟುಂಬದಲ್ಲಿ ಜನಿಸಿ ರಾಷ್ಟ್ರದ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿ ಕಡಿಮೆ ಅವಧಿಯಲ್ಲಿಯೇ ರಾಷ್ಟ್ರವನ ಪ್ರಗತಿಯತ್ತ ಕೊಂಡೊಯ್ದ ಧೀಮಂತ ನಾಯಕ ಶಾಸ್ತ್ರೀಯವರು ಸರಳ ಸಜ್ಜನೆಕೆಯ ನಿಷ್ಠಾವಂತ, ಪ್ರಾಮಾಣಿಕ ಮತ್ತು ದಕ್ಷತೆಗೆ ಹೆಸರುವಾಸಿಯಾಗಿದ್ದಾರೆ ಅವರ ಪ್ರಾಮಾಣಿಕತೆಗೆ ಉದಾಹರಣೆ ಎಂದರೆ ಅವರು ಪ್ರಧಾನಮಂತ್ರಿಯಾಗಿದಾಗ ಬ್ಯಾಂಕಿನಲ್ಲಿ ಸಾಲ ಪಡೆದು ಕಾರು ಖರೀದಿಸಿದರು.
ಹಾಗೆ ಸಂಬಳ ಹೆಚ್ಚಾದಾಗ ಅಗತ್ಯಕ್ಕಿಂತ ಹೆಚ್ಚು ಹಣ ಬೇಡವೆಂದು ಹೆಚ್ಚಿನ ಸಂಬಳ ಹಿಂದಿರುಗಿಸಿ ದರು. ಅವರು ತೀರಿಕೊಂಡಾಗ ಅವರ ಬ್ಯಾಂಕ ಉಳಿತಾಯ ಹಣ ಕೇವಲ ಐದು ನೂರು ರೂಪಾಯಿ ಎಂದರೆ ಯಾರಿಗಾದರು ಆಶ್ಚರ್ಯವಾಗುತ್ತದೆ ಶಾಂತಿದೂತ ಎಂದು ಹೆಸರು ಪಡೆದ ಶಾಸ್ತ್ರೀ ಅವರ ಪ್ರಕಾರ ಪ್ರಜಾಪ್ರಭುತ್ವ ಅಸತ್ಯ ಮತ್ತು ಅಹಿಂಸಾತ್ಮಕ ಮಾರ್ಗಗಳ ಮೂಲಕ ಬರಲು ಸಾಧ್ಯವಿಲ್ಲ. ನಾವು ಆಂತರಿಕವಾಗಿ ಬಲಿಷ್ಠರಾಗಿದ್ದರೆ ಮತ್ತು ನಮ್ಮ ದೇಶದಿಂದ ಬಡತನ ಮತ್ತು ನಿರುದ್ಯೋಗ ವನ್ನು ಹೊರ ಹಾಕಿದರೆ ಮಾತ್ರ ನಾವು ಜಗತ್ತಿನಲ್ಲಿ ಗೌರವ ಗಳಿಸಬಹುದು.
“ಜೈ ಜವಾನ ಜೈ ಕಿಸಾನ” ಎಂದು ರೈತರನ್ನು ಹಾಗೂ ಸೈನಿಕರನ್ನು ತಮ್ಮ ಹೃದಯಾಂತರಾಳದಲ್ಲಿ ಇರಿಸಿಕೊಂಡ ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ ಶಾಸ್ತ್ರೀಜಿಯವರು 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ದದಲ್ಲಿ ಈ ಶಾಂತಿದೂತ ಕ್ರಾಂತಿ ಮಾಡಿ ಭಾರತಕ್ಕೆ ವಿಜಯ ತಂದುಕೊಟ್ಟರು.
ಇವರ ಆದರ್ಶಗಳು ನಮಗೆ ಪಾಠಗಳಾಗಿವೆ ಎಂದು ಹೇಳಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ಭಾಗ್ಯಲಕ್ಷ್ಮೀ ಎಮ್. ಕೌಲಗಿಯವರು ಗಾಂಧೀಜಿ ಹಾಗು ಶಾಸ್ತ್ರೀಜಿಯವರ ಭಾವಚಿತ್ರಕೆ ಪೂಜೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಯಾದ ಸದಾನಂದ ಬಡ್ಡೂರ, ಹಿರಿಯ ಶಿಕ್ಷಕರಾದ ಸದಾಶಿವ ಸೋರಗಾವಿ, ಸಿದ್ದನಗೌಡ ತೇಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಜೀವ ದಾವನೆ ಕಾರ್ಯಕ್ರಮ ನಿರೂಪಣೆ ಮಾಡಿದರು, ಲಿಂಗನಗೌಡ ಪಾಟೀಲ ಸ್ವಾಗತಿದರು ಹಾಗೂ ಚೇತನ ಉಪ್ಪಾರ ವಂದಿಸಿದರು. ಎಮಿನೆಂಟ್ ಕೋಚಿಂಗ್ ಕ್ಲಾಸಿಸ್‌ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಗೆ ಹಾಗೂ ಲಾಲ ಬಹದ್ದೂರ ಶಾಸ್ತ್ರೀಜಿಯವರ ಜನ್ಮದಿನಾಚರಣೆಯನ್ನು ಆಚರಿಸಿದರು.