ಹರಾಜಿಗಿಟ್ಟಿದ್ದ ಮನೆ ಬಿಡಿಸಿಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಕರ್
Laxmi Hebbalkar: ಬೆಳಗಾವಿಯ ವಾಗ್ವಾಡೆ ಗ್ರಾಮದ ವ್ಯಕ್ತಿಯೊಬ್ಬರು ಫೈನಾನ್ಸ್ ಒಂದರಿಂದ 2020ರಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಫೈನಾನ್ಸ್ನವರು ಮನೆ ಹರಾಜಿಗೆ ಎಂದು ಫಲಕ ಹಾಕಿದ್ದರು. ಇದೀಗ ಸಚಿವರು ಬಾಕಿ ಇರುವ ಹಣ ತುಂಬಲು 2 ತಿಂಗಳು ಕಾಲಾವಕಾಶ ಕೊಡಿಸಿ, ಮನೆ ವಾಪಸ್ ಪಡೆಯಲು ನೆರವಾಗಿದ್ದಾರೆ.